Bengaluru : ರಿಯಲ್ ಸ್ಟಾರ್ ಉಪೇಂದ್ರ ನಟನೆಯ, ಆರ್.ಚಂದ್ರು (R.Chandru) ನಿರ್ದೇಶನದ ಕಬ್ಜ ಚಿತ್ರ ಯಶಸ್ಸು ಕಂಡ ಬೆನ್ನಲ್ಲೇ ಕಬ್ಜ 2 (Kabzaa-2) ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ (kabzaa 2 new poster) ಅಭಿಮಾನಿಗಳಿಗೆ ಖುಷಿ ಸಂಗತಿಯೊಂದನ್ನು ಹಂಚಿಕೊಂಡಿದೆ.
ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆಯಾಗುತ್ತಿವೆ. ಈ ಪೈಕಿ ಆರ್.ಚಂದ್ರು ಅವರ ನಿರ್ದೇಶದನಲ್ಲಿ ಮೂಡಿಬಂದ
ಕಬ್ಜ ಸಿನಿಮಾ ಬಿಡುಗಡೆಗೊಂಡು ಯಶಸ್ವಿಯಾದ ಬೆನ್ನಲ್ಲೇ ನಿರ್ದೇಶಕ ಆರ್. ಚಂದ್ರು ಅವರು ಕಬ್ಜ 2 ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ.
ಈ ಮುಖೇನ ಶೀಘ್ರದಲ್ಲೇ ಕಬ್ಜ 2 ನಿಮ್ಮ ಮುಂದೆ ಹಾಜರಾಗಲಿದೆ ಎಂಬ ಸೂಚನೆ ನೀಡಿದ್ದಾರೆ. ಚಿತ್ರದ ಪೋಸ್ಟರ್ (Poster) ನಲ್ಲಿ ಖಾಲಿ ಕುರ್ಚಿಯನ್ನು ಮುಂದಿಟ್ಟು ಕಬ್ಜ 2 ಎಂದು ತೋರಿಸಿದ್ದಾರೆ.
ಈ ಒಂದು ಪೋಸ್ಟರ್ ಸಾಕಷ್ಟು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದ್ದು, ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಕಬ್ಜ 1 ರ ಭಾಗವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಆರ್. ಚಂದ್ರು ಅವರು ಧನ್ಯವಾದ ತಿಳಿಸಿದ್ದಾರೆ.
ಕಬ್ಜ 25 ದಿನ ಪೂರೈಸಿ ಖ್ಯಾತಿ ಗಳಿಸಿದ ಬೆನ್ನಲ್ಲೇ ನಿರ್ದೇಶಕ ಆರ್. ಚಂದ್ರು (R.Chandru) ಕಬ್ಜ - 2 ಸಿನಿಮಾವನ್ನು ಅಧಿಕೃತವಾಗಿ ಪೋಸ್ಟರ್ ಬಿಡುಗಡೆಗೊಳಿಸುವ ಮುಖೇನ ಘೋಷಿಸಿದ್ದಾರೆ.
ಕಬ್ಜ 2 ಚಿತ್ರದ ಪೋಸ್ಟರ್ ನಲ್ಲಿ ಒಂದು ಖಾಲಿ ಕುರ್ಚಿ, ಅದರ ಪಕ್ಕದಲ್ಲೊಂದು ಬಂದೂಕು. ಕುರ್ಚಿಯ ಹಿಂದಿನ ವಿವರ ಕೊಂಚ ಯುದ್ಧ ಭೂಮಿಯನ್ನು ಹೋಲಿಸುವಂತಿದೆ.
ಇನ್ನು ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ಅನ್ನು ಹಂಚಿಕೊಂಡ ನಿರ್ದೇಶಕ ಆರ್.ಚಂದ್ರು, ಈ ಗೆಲುವು ನಿಮ್ಮದು, ಇದು ನನ್ನ ಸಿನಿಮಾ ಅಲ್ಲ. ನನ್ನ ತಂತ್ರಜ್ಞರ ಸಿನಿಮಾ! ಮೂರು ವರ್ಷಗಳ ಸಮಯ ನನ್ನೊಂದಿಗೆ ಅವರೆಲ್ಲಾ ನನ್ನ ಜೊತೆಗಿದ್ರು.
https://youtu.be/qxNrucwqaWg
ನನ್ನ ಸೈನಿಕರು ಹಾಗೂ ಮಂತ್ರಿಗಳಿಗೆ ನೆನಪಿನ ಕಾಣಿಕೆ ಕೊಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಚಂದ್ರು ಹಳ್ಳಿಯಿಂದ (kabzaa 2 new poster) ಬಂದ ಅಂದ್ರು. ಆದ್ರೆ ಸತ್ಯದ ದಾರಿಯಲ್ಲಿ ನಡೆದರೆ ದೇವರು ಕೈ ಹಿಡಿಯುತ್ತಾರೆ.
ಕಬ್ಜ ಚಿತ್ರಕ್ಕೆ ಶಕ್ತಿ ನನ್ನ ಸಹೋದರ ಸಮಾನ ರಾಮಚಂದ್ರಗೌಡರು(Ramachandragowda). ಅವರ ಪ್ರೇರಣೆ, ಸ್ಫೂರ್ತಿ, ಸಹಕಾರದಿಂದ ಈ ಸಿನಿಮಾ ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಇದನ್ನು ಮಾಸ್ ಸಿನಿಮಾ ಮಾಡೋಕೆ ಪ್ಯಾನ್ ಇಂಡಿಯಾ ಚಿತ್ರಕ್ಕೆ ಪ್ಲಾನ್ ಮಾಡಿದೆ. ರಿಯಲ್ ಸ್ಟಾರ್ ಉಪೇಂದ್ರ (Upendra) ಸರ್,
ಕಿಚ್ಚ ಸುದೀಪ್ ಸರ್ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ (Shivanna) ಅವರು ನನ್ನ ಚಿತ್ರದಲ್ಲಿ ನಟಿಸಿದ್ದು ಯಾವುದೋ ಜನ್ಮದ ಪುಣ್ಯ.
ಸಿನಿಮಾ ಒಳ್ಳೆಯ ಹೆಸರು ನೀಡಿದೆ. ಅದು ಈಗ ಹೆಮ್ಮರವಾಗಿ ಬೆಳೆದಿದೆ. ನನ್ನ ಜೊತೆ ನಿಂತ ಮಾಧ್ಯಮ ಮಿತ್ರರಿಗೆ ಸಾಷ್ಟಾಂಗ ನಮಸ್ಕಾರ. ನಿಮ್ಮ ಸಹಕಾರ ಪ್ರೀತಿ ಸದಾ ನಮ್ಮ ಮೇಲೆ ಹೀಗೇ ಇರಲಿ ಎಂದು ಆರ್. ಚಂದ್ರು ಸಂತಸದಿಂದ ತಮಗೆ ಸಹಾಯ ಮಾಡಿದ ಹಲವರಿಗೆ ಧನ್ಯವಾದ ತಿಳಿಸಿದ್ದಾರೆ.