Visit Channel

`ಕಲಿವೀರ’ ಸಿನಿಮಾ ಟೀಸರ್ ಬಿಡುಗಡೆ

WhatsApp Image 2021-02-16 at 9.15.24 AM

ಜ್ಯೋತಿ ಆರ್ಟ್ಸ್ ನಿರ್ಮಾಣ ಸಂಸ್ಥೆ ಹೊರ ತರುತ್ತಿರುವ ಕಲಿವೀರ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ರಚನೆ ಮತ್ತು ನಿರ್ದೇಶನವನ್ನು అవి ನಿರ್ವಹಿಸಿದ್ದಾರೆ. ಅವರು ಈ ಹಿಂದೆಕನ್ನಡ ದೇಶದೊಳ್’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. ಇದೀಗ ಏಕಲವ್ಯ ಎನ್ನುವ ಯುವ ಪ್ರತಿಭೆಯನ್ನು ನಾಯಕನಾಗಿಸಿ ಒಂದು ಆಕ್ಷನ್ ಸಿನಿಮಾವನ್ನು ತೆರೆಗೆ ತರಲು ಸಿದ್ಧವಾಗಿದ್ದಾರೆ ಅವಿ.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಉಮೇಶ್ ಬಣಕಾರ್ ಅವರು ತಮ್ಮದು ಮೋಟೆ ಬೆನ್ನೂರು. ಇದು ರಾಣೆಬೆನ್ನೂರು ಪಕ್ಕದಲ್ಲೇ ಇರುವ ಊರು. ಹಾಗಾಗಿ ರಾಣೆಬೆನ್ನೂರಿನ ಹುಡುಗ ನಾಯಕನಾಗುತ್ತಿರುವುದು ಖುಷಿಯ ವಿಚಾರ ಎಂದರು. ಮಾತ್ರವಲ್ಲ, “ಚಿತ್ರದ ಟೀಸರ್ ನೋಡಿದಾಗ ಅದರಲ್ಲಿ ನಾಯಕನ ಅದ್ಭುತ ಸಾಹಸ ಕಂಡು ಇದು ಕನ್ನಡಿಗರು ಮಾತ್ರ ನೋಡಬೇಕಾದ ಸಿನಿಮಾ ಖಂಡಿತ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದೆ. ನಾನೇ ನಿರ್ಮಾಪಕರಿಗೆ ಹೇಳಿ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ತರಲು ಪ್ರೋತ್ಸಾಹ ನೀಡಿದ್ದೇನೆ” ಎಂದರು.

ಚಿತ್ರದ ನಾಯಕ ಏಕಲವ್ಯ ಮಾತನಾಡಿ, ನನಗೆ ಸಿಕ್ಕಿರುವ ಈ ಅವಕಾಶ ಬಹಳ ದೊಡ್ಡದು. ಯಾಕೆಂದರೆ ನಾನೊಬ್ಬ ಸಾಮಾನ್ಯ ಆಟೋ ಚಾಲಕನಾಗಿದ್ದವನು. ಆಗ ನನಗೆ ಪ್ರೋತ್ಸಾಹ ನೀಡಿದಂಥ ಆಟೋ ಚಾಲಕರ ಮೂಲಕವೇ ನನ್ನ ಚಿತ್ರದ ಆಡಿಯೋ ಸಿಡಿ ಬಿಡುಗಡೆಗೊಳಿಸಬೇಕು ಎನ್ನುವುದು ನನ್ನ ಆಕಾಂಕ್ಷೆಯಾಗಿತ್ತು. ಅದು ನೆರವೇರಿರುವುದಕ್ಕೆ ಖುಷಿ ಇದೆ ಎಂದರು. ನಿಜ ಜೀವನದಲ್ಲಿ ಶಿವನ ಭಕ್ತ, ನ್ಯಾಷನಲ್ ‌ಲೆವೆಲ್ ಯೋಗ ಚಾಂಪಿಯನ್ ಆಗಿರುವ ಏಕಲವ್ಯನ ಆ ಗುಣಗಳನ್ನು ಇರಿಸಿಕೊಂಡೇ ಮಾಡಿರುವ ಚಿತ್ರ ಇದು. ಉಳಿದಂತೆ ಕತೆಯಲ್ಲಿ ಹೇಳಿಕೊಳ್ಳುವ ಹೊಸತನ ಇರದಿದ್ದರೂ ಮೇಕಿಂಗ್‌ನಲ್ಲಿರುವ ಹೊಸತನ, ಆಕರ್ಷಣೆ ನಿಮಗೆ ಟೀಸರ್ ಮೂಲಕವೇ ಕಾಣಬಹುದಾಗಿದೆ ಎಂದರು ನಿರ್ದೇಶಕ ಅವಿ. ಚಿತ್ರದ ನಾಯಕಿಯರಲ್ಲೊಬ್ಬರಾದ ಪಾವನಾ ಗೌಡ, ನಿರ್ಮಾಪಕ ಕೆಎಮ್ ಪಿ ಶ್ರೀನಿವಾಸ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.

Siddaramaiah
ರಾಜಕೀಯ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ ಜೈಲೂಟ ತಿನ್ನುತ್ತಿದ್ದರು : ಬಿಜೆಪಿ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ(Siddaramaiah) ಜೈಲೂಟ ತಿನ್ನುತ್ತಿದ್ದರು ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

Gaalipata 2
ಮನರಂಜನೆ

ತೆರೆಯ ಮೇಲೆ ಹಾರಿದ ‘ಗಾಳಿಪಟ-2’; ಗಣಿ-ಭಟ್ರು ಕಾಂಬಿನೇಷನ್‍ಗೆ ಶಿಳ್ಳೆ-ಚಪ್ಪಾಳೆ

ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ.