vijaya times advertisements
Visit Channel

ಕಾಂತಾರ ನಟ ರಿಷಬ್ ಶೆಟ್ಟಿ ನಿರ್ದೇಶನದ ಬಗ್ಗೆ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ : ಕಮಲ್‌ ಹಾಸನ್

kamal haasan

Chennai : ರಿಷಬ್ ಶೆಟ್ಟಿ(Kamal Haasan Likes Kantara) ನಿರ್ದೇಶಿಸಿರುವ ಕನ್ನಡದ ಆಕ್ಷನ್-ಥ್ರಿಲ್ಲರ್ ಕಾಂತಾರ ಚಿತ್ರ 2022ರ ಅತಿದೊಡ್ಡ ಯಶಸ್ಸಿ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ನಿರ್ದೇಶಕ ರಿಷಬ್ ಶೆಟ್ಟಿ ಸ್ವತಃ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ(Kamal Haasan Likes Kantara) ಈ ಚಿತ್ರವು ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯುತ್ತಿದೆ.

kantara - Kamal Haasan Likes Kantara

ಸೂಪರ್ ಸ್ಟಾರ್ ರಜನಿಕಾಂತ್(Rajnikanth) ಸೇರಿದಂತೆ ಭಾರತೀಯ ಚಲನಚಿತ್ರೋದ್ಯಮದ ಪ್ರಮುಖ ವ್ಯಕ್ತಿಗಳೆಲ್ಲರೂ ಕಾಂತಾರವನ್ನು ಮೆಚ್ಚಿಕೊಂಡಿದ್ದಾರೆ.

https://youtu.be/2uFll2Xlcoc

ಇದೀಗ ಹಿರಿಯ ನಟ ಕಮಲ್ ಹಾಸನ್(Kamal Hassan) ಅವರು ಕಾಂತಾರ ಚಿತ್ರ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ

ಕಮಲ್ ಹಾಸನ್ ನವೆಂಬರ್ 18 ರಂದು ಕಾಂತಾರ‌ ಚಿತ್ರವನ್ನು ವೀಕ್ಷಿಸಿದ್ದು, ನಾನು ರಿಷಬ್ ಶೆಟ್ಟಿ ನಿರ್ದೇಶನದ ಬಗ್ಗೆ ಹೆಚ್ಚು ಪ್ರಭಾವಿತನಾಗಿದ್ದೇನೆ. ವಿಶೇಷವಾಗಿ ಕಾಂತಾರ ಚಿತ್ರದ ತಯಾರಿಕೆ ನನ್ನನ್ನು ತೀವ್ರವಾಗಿ ಪ್ರಭಾವಿಸಿದೆ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/mp-kumarswamy-controversy/

ಇನ್ನು ಚಿತ್ರ ವೀಕ್ಷಿಸಿದ ನಂತರ ಕಮಲ್ ಹಾಸನ್ ಅವರು ಚಿತ್ರದ ನಿರ್ಮಾಪಕರನ್ನು ವೈಯಕ್ತಿಕವಾಗಿ ಕರೆದು, ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಕಾಂತಾರ ನಿರ್ಮಾಪಕರ ಉತ್ಸಾಹಕ್ಕೆ ಈ ರೀತಿಯ ಚಲನಚಿತ್ರ ನಿರ್ಮಾಣವು ಹೆಚ್ಚು ಸ್ಪೂರ್ತಿದಾಯಕವಾಗಿದೆ ಎಂದು ಕಮಲ್‌ ಹೇಳಿದ್ದಾರೆ.

Kamal Haasan Likes Kantara

ಕಾಂತಾರ ಕರಾವಳಿ ಕರ್ನಾಟಕದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿರುವ ಚಿತ್ರ. ಭೂತ ಕೋಲ ಎಂಬ ಪ್ರಾದೇಶಿಕ ಧಾರ್ಮಿಕ ನೃತ್ಯ ಪ್ರಕಾರದ ಸುತ್ತ ಸುತ್ತುತ್ತದೆ. ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡ್, ನವೀನ್ ಡಿ ಪಡೀಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಕಾಡುಬೆಟ್ಟು ಶಿವ ಮತ್ತು ಅವರ ತಂದೆಯಾಗಿ ರಿಷಬ್ ಶೆಟ್ಟಿ ನಟಿಸಿದ್ದಾರೆ.

ಇದನ್ನೂ ಓದಿ : https://vijayatimes.com/kadlekai-parishe-2022/

ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

  • ಮಹೇಶ್.ಪಿ.ಎಚ್

Latest News

ರಾಜ್ಯ

ಬೆಳಗಾವಿ ಗಡಿ ವಿವಾದ : ಭದ್ರತೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿದ ಮಹಾರಾಷ್ಟ್ರ!

ಬೆಳಗಾವಿ ಗಡಿ ವಿವಾದದ ಕುರಿತು ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬಿರುಕು ಶೀಘ್ರದಲ್ಲೇ ಶಮನಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ ಎಂಬುದನ್ನು ಉಲ್ಲೇಖಿಸಿದೆ.

ಮನರಂಜನೆ

ನೆಟ್ ಫ್ಲಿಕ್ಸ್ ನಲ್ಲಿ ಕಾಂತಾರ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದೆ : ರಿಷಬ್ ಶೆಟ್ಟಿ

ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ ಹಾಡು ತೆಗೆದು ಹಾಕಲಾಗಿತ್ತು.

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು