Mumbai : ಬಾಲಿವುಡ್(Bollywood) ಚಿತ್ರರಂಗದ ದಿ ಕ್ಯೂಟೆಸ್ಟ್ ಕಂಪಲ್ ಎಂದೇ ಖ್ಯಾತರಾದ ನಟ ಸಿದ್ಧಾರ್ಥ್ ಮಲ್ಹೋತ್ರಾ(Sidharth Malhotra) ಮತ್ತು ನಟಿ ಕಿಯಾರಾ ಅಡ್ವಾಣಿ(Kiara Advani) ಜೋಡಿಯ ಬಗ್ಗೆ (Kangana about Sidharth Kiara) ನಟಿ ಕಂಗನಾ ರಣಾವತ್(Kangana Ranaut) ಅವರು ಹೊಸದೊಂದು ಹೇಳಿಕೆಯನ್ನು ನೀಡಿದ್ದಾರೆ.

ಸದಾ ಸಾಮಾಜಿಕ ಜಾಲತಾಣದಲ್ಲಿ(Social Media) ಒಂದಲ್ಲ ಒಂದು ವಿಷಯದ ಮೂಲಕ ಹೆಚ್ಚು ಚರ್ಚೆಯಾಗುವ ನಟಿ ಎಂದರೇ ಅದು ಕಂಗನಾ (Kangana about Sidharth Kiara) ರಣಾವತ್!
ತಮ್ಮ ವಿಭಿನ್ನ, ವಿವಾದಾತ್ಮಕ ಹೇಳಿಕೆಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್(Troll) ಆಗುವ ನಟಿ ಕಂಗನಾ,
ಈ ಬಾರಿ ಕೂಡ ಅದೇ ರೀತಿಯಲ್ಲಿ ಮತ್ತೊಂದು ಹೇಳಿಕೆಯೊಂದನ್ನು ನೀಡಿದ್ದಾರೆ. ಇತ್ತೀಚಿಗಷ್ಟೇ ಪ್ರೀತಿಸಿ ಮದುವೆಯಾದ ಬಾಲಿವುಡ್
ಚಿತ್ರರಂಗದ ಶೇರ್‌ಷಾ ಜೋಡಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಬಗ್ಗೆ ಟ್ವೀಟ್(Tweet) ಮಾಡಿರುವ ನಟಿ ಕಂಗನಾ ರಣಾವತ್,

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಾವು ಪ್ರೀತಿಸುತ್ತಿದ್ದರೂ ಯಾವುದೇ ರೀತಿಯಲ್ಲೂ ಅದನ್ನು ಪ್ರಚಾರ ಮಾಡಿಲ್ಲ, ಎಲ್ಲೂ ಬಹಿರಂಗಪಡಿಸಲಿಲ್ಲ!
ಅವರು ಡೇಟಿಂಗ್(Dating) ಮಾಡುವ ಸುದ್ದಿಯೇ ಕೇಳಿಬಂದಿಲ್ಲ. ಇದು ಅವರ ನೈಜ ಪ್ರೀತಿ ಎಂದು ಟ್ವೀಟ್‌ನಲ್ಲಿ ಹಾಡಿ ಹೊಗಳಿದ್ದಾರೆ.

ನವ ಜೋಡಿ ನಟ ಸಿದ್ಧಾರ್ಥ್ ಮತ್ತು ನಟಿ ಕಿಯಾರಾ ಅವರನ್ನು ಈ ಹಿಂದೆಯೂ ಮಾಧ್ಯಮದವರ(Media) ಮುಂದೆ ಹೊಗಳಿದ್ದ ನಟಿ ಕಂಗನಾ ರಣಾವತ್,
ಈ ಜೋಡಿಯು ಎಷ್ಟು ಸಂತೋಷವಾಗಿದೆ. ನಾನು ಚಲನಚಿತ್ರೋದ್ಯಮದಲ್ಲಿ ನೋಡಿದ ನಿಜವಾದ ಪ್ರೀತಿ ಮತ್ತು ಅಪರೂಪದ ಪ್ರೀತಿ ಇದು. ಈ ಜೋಡಿ ಅನ್ಯರಂತೆ ಶೋ ಆಫ್ ಮಾಡಿಲ್ಲ, ಇದು ನೈಜ ಪ್ರೀತಿ.
ಎಲ್ಲರ ಗಮನ ಸೆಳೆಯಬೇಕು ಎಂಬ ಉದ್ದೇಶದಿಂದ ಮಾಡಿರುವ ಪ್ರೀತಿ ಅಲ್ಲ! ಅಪ್ಪಟ ಜೋಡಿ ಅಂದ್ರೆ ಅದು ನಟ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಜೋಡಿ ಎಂದು ದಂಪತಿಗಳ ಮದುವೆಯ ಫೋಟೊವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.
ಸದ್ಯ ನಟಿ ಕಂಗನಾ ರಣಾವತ್ ಅವರ ಈ ಒಂದು ಟ್ವೀಟ್‌ಗೆ ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ದು, ಕೆಲವರು ನಟಿ ಕಂಗನಾ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.