• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಥೇಟ್ ಇಂದಿರಾ ಗಾಂಧಿಯಂತೆ ಕಂಡ ಕಂಗನಾ ರಣಾವತ್ ; `ಎಮರ್ಜೆನ್ಸಿ’ಗೆ ಕಾಂಗ್ರೆಸ್ ಅಸಮಾಧಾನ!

Mohan Shetty by Mohan Shetty
in ಮನರಂಜನೆ
Emergency
0
SHARES
6
VIEWS
Share on FacebookShare on Twitter

ಸದಾ ವಿವಾದಗಳಿಂದಲೇ ಹೆಚ್ಚು ಖ್ಯಾತಿಯಾಗುವ ಬಾಲಿವುಡ್(Bollywood) ಫೈರ್ ಬ್ರ್ಯಾಂಡ್ ನಟಿ ಕಂಗನಾ ರಣಾವತ್(Kangana Ranaut), ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚೆಗಷ್ಟೇ ಅವರ ಸಿನಿಮಾ ಧಾಕಡ್ ಭಾರಿ ಸೋಲು ಕಂಡಿತು. ಈ ಸೋಲು, ನೆಟ್ಟಿಗರು ಹಾಗೂ ಟ್ರೋಲ್ಗಳ(Trolls) ಹಾಸ್ಯಕ್ಕೆ ಕಾರಣವಾಗಿತ್ತು. ಆದರೆ, ಈ ಸಿನಿಮಾದ ಹೀನಾಯ ಸೋಲಿನ ನಂತರ ಕಂಗನಾ ಮತ್ತೆ ‘ಎಮರ್ಜೆನ್ಸಿ’(Emergency) ಮೂಲಕ ಪುಟಿದೆದ್ದಿದ್ದಾರೆ.

https://fb.watch/eqkE9q1BPp/u003c/strongu003eu003cbru003e

ಹೌದು, ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಭಾರತದ(India) ಮೊದಲ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ(Indira Gandhi) ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ “ಎಮರ್ಜೆನ್ಸಿ” ಸಿನಿಮಾದ ಮೊದಲ ಲುಕ್ ಜುಲೈ 14 ರಂದು ಬಿಡುಗಡೆಗೊಂಡಿದೆ.

ಫಸ್ಟ್ ಲುಕ್ ಟೀಸರ್ ನೋಡಿದ ಸಿನಿಪ್ರೇಕ್ಷಕರು ಅಚ್ಚರಿಗೊಳಗಾಗಿದ್ದಾರೆ. ಏಕೆಂದರೆ, ಇದರಲ್ಲಿ ಕಂಗನಾ ರಣಾವತ್ ಅವರು ಥೇಟ್ ಇಂದಿರಾ ಗಾಂಧಿ ಅವರ ರೀತಿಯೇ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಕೇಶರಾಶಿ, ಮುಖ ಲಕ್ಷಣ, ಧ್ವನಿ ಏರಿಳಿತ ಕೂಡ ಇಂದಿರಾ ಗಾಂಧಿ ಅವರನ್ನು ಹೋಲುತ್ತಿದೆ ಎಂದು ಪೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Kangana Looks a like indira gandhi

ಟೀಸರ್(Teaser) ಕಂಡು ಅಶ್ಚರ್ಯಚಕಿತರಾದ ಪ್ರೇಕ್ಷಕರು, ಕಂಗನಾ ಅವರಿಗೆ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ. ಕಂಗನಾ ಥೇಟ್ ಇಂದಿರಾ ಗಾಂಧಿಯಂತೆಯೇ ಕಾಣಿಸಿಕೊಳ್ಳುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಆದರೆ, ವಿವಾದ(Controversy) ಹಾಗೂ ಕಂಗನಾ ಒಂದೇ ನಾಣ್ಯದ ಎರಡು ಮುಖಗಳಂತೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತೇ ಇದೆ.

ಅವರು ಒಂದು ಹೇಳಿಕೆ ಕೊಟ್ಟರೆ ಸಾಕು, ಅದು ಮತ್ತೊಂದು ತಿರುವು ಪಡೆಯುತ್ತದೆ. ಸದ್ಯ ಮೂಲಗಳ ಪ್ರಕಾರ ಇತ್ತೀಚೆಗೆ ಬಿಡುಗಡೆಯಾದ ಎಮರ್ಜೆನ್ಸಿ ಸಿನಿಮಾದ ಟೀಸರ್ಗೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದೆ!

ಇದನ್ನೂ ಓದಿ : https://vijayatimes.com/former-mla-mj-jacob-wins-bronze/u003c/strongu003eu003cbru003e

ಈ ಟೀಸರ್ನಲ್ಲಿ ಕಂಗನಾ ರಣಾವತ್ ಇಂದಿರಾ ಗಾಂಧಿಯವರನ್ನು ಬಹು ಮಟ್ಟಿಗೆ ಹೋಲುತ್ತಿದ್ದಾರೆ. ಇದೇ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಸಿನಿಮಾ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಇಮೇಜ್ ಅನ್ನು ಹಾಳುಮಾಡುವ ಪ್ರಯತ್ನ ಎಂದು ಪಕ್ಷ ಹೇಳಿದ್ದು, ಸಿನಿಮಾವನ್ನು ಬಿಡುಗಡೆ ಮಾಡುವ ಮೊದಲು ಇದನ್ನು ನಮಗೆ ತೋರಿಸಬೇಕು ಎಂದು ಒತ್ತಾಯಿಸಿದೆ.

Next

ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷೆ ಸಂಗೀತಾ ಶರ್ಮಾ ಅವರು ಕಂಗನಾ ರಣಾವತ್ ಅವರನ್ನು ಬಿಜೆಪಿಯ ಏಜೆಂಟ್ ಎಂದು ಕರೆದಿದ್ದು, ಸಿನಿಮಾ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

Kangana Looks a like indira gandhi
ವಿವಾದಗಳನ್ನು ಹೊರತುಪಡಿಸಿ ನೋಡುವುದಾದರೆ, ಚಿತ್ರದಲ್ಲಿ ಮತ್ತೊಂದು ವಿಶೇಷವಿದೆ. ಅದೇನೆಂದರೆ, ಈ ಚಿತ್ರವನ್ನು ನಟಿ ಕಂಗನಾ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ರೇಣು ಪಿಟ್ಟಿ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ ಎಂದು ಚಿತ್ರತಂಡದಿಂದ ಮಾಹಿತಿ ಪ್ರಕಟವಾಗಿದೆ. 
https://vijayatimes.com/ed-arrests-partha-chatterjee/
ಇದೇ ಮೊದಲ ಬಾರಿಗೆ ಕಂಗನಾ ನಿರ್ದೇಶನಕ್ಕೆ ಕೈ ಹಾಕಿದ್ದು, ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು, ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಈ ಸಿನಿಮಾಗೆ ಸಂಗೀತ ನೀಡುತ್ತಿರುವುದು ವಿಶೇಷ. 
https://fb.watch/erknnMGqJB/u003c/strongu003eu003cbru003e
ಅಂದಹಾಗೆ, ಈ ಸಿನಿಮಾದಲ್ಲಿ ಭಾರತದ ರಾಜಕೀಯ ಇತಿಹಾಸದ ಅತಿ ಮುಖ್ಯ ಘಟನೆಗಳಾದ ‘ಆಪರೇಷನ್‌ ಬ್ಲೂ ಸ್ಟಾರ್‌’ ಮತ್ತು ತುರ್ತು ಪರಿಸ್ಥಿತಿಯ ವಿವರಗಳು ಇರಲಿವೆಯಂತೆ. ಸಂಜಯ್‌ ಗಾಂಧಿ, ರಾಜೀವ್‌ ಗಾಂಧಿ, ಮೊರಾರ್ಜಿ ದೇಸಾಯಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಮುಂತಾದವರ ಪಾತ್ರಗಳು ಇರಲಿದ್ದು, ಆ ಪಾತ್ರಗಳಿಗೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. 
 https://vijayatimes.com/hdk-allegation-over-bjp/
ಕಂಗನಾ ರಣಾವತ್ ಅವರ ವೃತ್ತಿಜೀವನಕ್ಕೆ ‘ಎಮರ್ಜೆನ್ಸಿ’ ಸಿನಿಮಾ ವಿಶೇಷವಾಗಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಬಹಳ ತಯಾರಿ ಮಾಡಿಕೊಂಡು ಶೂಟಿಂಗ್ ಆರಂಭಿಸಿದ್ದಾರೆ. 
Kangana Looks a like indira gandhi

ಈ ಚಿತ್ರದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪಾತ್ರವನ್ನು ಮಾಡುತ್ತಿರುವುದು ಅನುಪಮ್ ಖೇರ್(Anupam Kher) ಎಂಬ ಮಾಹಿತಿಯಿದೆ. ಇದು ಅವರ 527ನೇ ಸಿನಿಮಾ ಎಂಬುದು ವಿಶೇಷ.

ಸದ್ಯ ಇವರಿಬ್ಬರನ್ನು ಬಿಟ್ಟರೆ ಸಿನಿಮಾದಲ್ಲಿ ಬೇರೆ ಯಾವ ಕಲಾವಿದರು ಇದ್ದಾರೆ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಒಟ್ಟಿನಲ್ಲಿ ಫಸ್ಟ್‌ ಲುಕ್‌ನಿಂದಲೇ ಕುತೂಹಲ ಮೂಡಿಸಿರುವ ‘ಎಮರ್ಜೆನ್ಸಿ’ ಸಿನಿಮಾವನ್ನು ತೆರೆಯ ಮೇಲೆ ನೋಡಲು ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದಾರೆ.
  • ಪವಿತ್ರ
Tags: Bollywoodcinemaemergencyhindi

Related News

ಮೇ 1 ರಿಂದ ಆನ್‌ಲೈನ್ ಗೇಮಿಂಗ್‌ಗೆ ಹೊಸ ನಿಯಮ: ಬಳಕೆದಾರರ ಸುರಕ್ಷತೆ, ಪಾರದರ್ಶಕತೆಗೆ ಹೆಚ್ಚಿನ ಒತ್ತು
ಡಿಜಿಟಲ್ ಜ್ಞಾನ

ಮೇ 1 ರಿಂದ ಆನ್‌ಲೈನ್ ಗೇಮಿಂಗ್‌ಗೆ ಹೊಸ ನಿಯಮ: ಬಳಕೆದಾರರ ಸುರಕ್ಷತೆ, ಪಾರದರ್ಶಕತೆಗೆ ಹೆಚ್ಚಿನ ಒತ್ತು

April 23, 2026
ಸ್ಯಾಂಡಲ್‌ವುಡ್ ಕಡೆಗಣನೆ: ಸಾಮಾಜಿಕ ಜಾಲತಾಣಗಳಲ್ಲಿ ಫಿಲ್ಮ್‌ಫೇರ್ ವಿರುದ್ಧ ಕನ್ನಡಿಗರ ಆಕ್ರೋಶ
ಪ್ರಮುಖ ಸುದ್ದಿ

ಸ್ಯಾಂಡಲ್‌ವುಡ್ ಕಡೆಗಣನೆ: ಸಾಮಾಜಿಕ ಜಾಲತಾಣಗಳಲ್ಲಿ ಫಿಲ್ಮ್‌ಫೇರ್ ವಿರುದ್ಧ ಕನ್ನಡಿಗರ ಆಕ್ರೋಶ

March 27, 2026
ಆಸ್ಕರ್ 2026 ವಿಜೇತರ ಘೋಷಣೆ:‘ಒನ್ ಬ್ಯಾಟಲ್ ಆಫ್ಟರ್ ಅನದರ್’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ
ಪ್ರಮುಖ ಸುದ್ದಿ

ಆಸ್ಕರ್ 2026 ವಿಜೇತರ ಘೋಷಣೆ:‘ಒನ್ ಬ್ಯಾಟಲ್ ಆಫ್ಟರ್ ಅನದರ್’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

March 16, 2026
ದೇವರ ಹೆಸರಿನ ಸಿನಿಮಾಗಳಿಗೆ ಸೆನ್ಸಾರ್ ಅಡ್ಡಿ: ಶೀರ್ಷಿಕೆಯಲ್ಲಿ ದೇವರ ಹೆಸರು ಇದ್ದರೆ ಬದಲಾಯಿಸುವಂತೆ ಸೂಚನೆ
ಪ್ರಮುಖ ಸುದ್ದಿ

ದೇವರ ಹೆಸರಿನ ಸಿನಿಮಾಗಳಿಗೆ ಸೆನ್ಸಾರ್ ಅಡ್ಡಿ: ಶೀರ್ಷಿಕೆಯಲ್ಲಿ ದೇವರ ಹೆಸರು ಇದ್ದರೆ ಬದಲಾಯಿಸುವಂತೆ ಸೂಚನೆ

March 6, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.