ಬಾಲಿವುಡ್(Bollywood) ಖ್ಯಾತ ನಟ ಅಜಯ್ ದೇವಗನ್(Ajay Devgn) ಕನ್ನಡದ ಅಭಿನಯ ಚಕ್ರವರ್ತಿ, ಬಾದ್ಷಾ, ನಟ ಕಿಚ್ಚ ಸುದೀಪ್(Kiccha Sudeepa) ಅವರು ಹಿಂದೆ ನೀಡಿದ್ದ ಹೇಳಿಕೆಗೆ ಟಾಂಗ್ ಕೊಡುವ ಸಲುವಾಗಿ ಟ್ವೀಟ್ ಮಾಡಿದ್ದು, ಹಿಂದಿ ನಮ್ಮ ರಾಷ್ಟ್ರಭಾಷೆ ಕಿಚ್ಚ ಸುದೀಪ್. ಹಿಂದಿ ರಾಷ್ಟ್ರಭಾಷೆಯಲ್ಲ ಅಂದಮೇಲೆ ನಿಮ್ಮ ಭಾಷೆಯ ಸಿನಿಮಾವನ್ನು ಕನ್ನಡದಲ್ಲಿ ಯಾಕೆ ಡಬ್ ಮಾಡುತ್ತೀರಾ? ಎಂದು ಕೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.

ಇದಕ್ಕೆ ಪ್ರತಿಕ್ರಿಯೇ ನೀಡಿದ ಕಿಚ್ಚ ಸುದೀಪ್, ಸೂಕ್ಷ್ಮವಾಗಿ, ಅರ್ಥವಾಗುವಂತೆ ಮೃದುವಾಗಿಯೇ ಚಾವಟಿ ಬೀಸಿದರು. ತನ್ನ ತಪ್ಪನ್ನು ಅರಿತುಕೊಂಡ ಅಜಯ್ ದೇವಗನ್ ಪರೋಕ್ಷವಾಗಿ ಕ್ಷಮೆಯಾಚಿಸಿದರು. ಈ ಘಟನೆಯಾದ ಬೆನ್ನಲ್ಲೇ ಕನ್ನಡಿಗರು ಅಜಯ್ ದೇವಗನ್ ವಿರುದ್ಧ ತಿರುಗಿಬಿದ್ದಿದ್ದು, ಹಿಂದಿ ರಾಷ್ಟ್ರಭಾಷೆಯಲ್ಲ! ಹಿಂದಿ ಎಂದಿಗೂ ರಾಷ್ಟ್ರಭಾಷೆಯಾಗಿಲ್ಲ. ಈ ಮೂಲಕ ಹಿಂದಿ ಒತ್ತಾಯವನ್ನು ಹೇರುವ ಪ್ರಯತ್ನ ಮಾಡಬೇಡಿ. ಕನ್ನಡಿಗರು ನಿಮ್ಮ ಭಾಷೆಯ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿದ್ದಾರೆ ನೆನಪಲ್ಲಿಡಿ ಎಂದು ಎಚ್ಚರಿಕೆಯ ಮಾತುಗಳನ್ನು ನೀಡಿದ್ದಾರೆ.
ಸದ್ಯ ಹಿಂದಿ ರಾಷ್ಟ್ರಭಾಷೆ ಎಂಬ ವಾದ ಕೇಳಿಬಂದ ಹಿನ್ನಲೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಯಾಗಿದೆ. ಬಾಲಿವುಡ್ ಮಂದಿ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಳಿಗೆ ವಿರೋಧ ವ್ಯಕ್ತಪಡಿಸಿರುವ ಕನ್ನಡಿಗರು, ಹಿಂದಿ ಎಂದಿಗೂ ರಾಷ್ಟ್ರಭಾಷೆಯಲ್ಲ ಎಂದು ಕೂಗಿ ಕೂಗಿ ಹೇಳುತ್ತಿದ್ದಾರೆ. ಸದ್ಯ ಭಿನ್ನಪ್ರಾಯಗಳು, ವಾದ-ವಿವಾದಗಳ ನಡುವೆ ವಿವಾದಕ್ಕೆ ಹೆಸರಾಗಿರುವ ನಟಿ ಕಂಗನಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಹೌದು, ಅಜಯ್ ದೇವಗನ್ ಹೇಳಿಕೆ ಸರಿ ಎಂದು ಹೇಳುವ ಮೂಲಕ ಅಜಯ್ ದೇವಗನ್ಗೆ ಸಾಥ್ ನೀಡಿರುವ ನಟಿ ಕಂಗನಾ, ಹಿಂದಿ ನಮ್ಮ ರಾಷ್ಟ್ರಭಾಷೆ ಆದ್ರೆ, ಸಂಸ್ಕೃತ ಭಾಷೆಯನ್ನು ನಮ್ಮ ರಾಷ್ಟ್ರಬಾಷೆಯನ್ನಾಗಿ ಮಾಡುವುದು ಉತ್ತಮ ಎಂದು ಹೇಳಿದ್ದಾರೆ. ನಟಿ ಕಂಗನಾ ಈ ರೀತಿಯ ಹೇಳಿಕೆ ಕೊಡುವ ಮೂಲಕ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಈ ಹೇಳಿಕೆ ತೀವ್ರ ಚರ್ಚೆಯಾಗುತ್ತಿದೆ.