ಬಾಲಿವುಡ್ ಚಿತ್ರರಂಗದ(Bollywood Industry)ವಿವಾದಾತ್ಮಕ(Controversy) ಹೇಳಿಕೆಯ ನಟಿ ಎಂದೆ ಹೆಸರಾಗಿರುವ ಕಂಗನಾ ರಣಾವತ್(Kangana Ranaut)ಅವರ ಇತ್ತೀಚಿನ ಢಾಕಡ್(Dhaakad) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಲಿಲ್ಲ.

ಈ ಚಿತ್ರ ಬಿಡುಗಡೆಯಾದ ಎಂಟು ದಿನಕ್ಕೆ ಸುಮಾರು 4500 ರೂಪಾಯಿಗಳ ವ್ಯಾಪಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕಂಗನಾ ರಣಾವತ್ ಅವರನ್ನು ಬಾಲಿವುಡ್ ಕ್ವೀನ್ ಎಂದು ಕರೆಯುವ ಅಭಿಮಾನಿಗಳ ನಡುವೆ ದಾಕಡ್ ಸಿನಿಮಾ ಸೋಲಿನ ಕುರಿತು ಟ್ರೋಲ್ ಸುರಿಮಳೆಯೇ ಹರಿದುಬಂದಿದೆ. ಕಂಗನಾ ರಣಾವತ್, ತಮ್ಮ ಮುಂಬರುವ ಚಲನಚಿತ್ರ ‘ಎಮರ್ಜೆನ್ಸಿ’(Emergency) ಸಿನಿಮಾಗಾಗಿ ಪೂರ್ವ ತಯಾರಿಗಾಗಿ ದೆಹಲಿಗೆ ಹೊರಟಿದ್ದಾರೆ.
ಕಂಗನಾ ಈ ಸಿನಿಮಾವನ್ನು ನಿರ್ದೇಶನ ಮಾಡುವುದಲ್ಲದೆ, ಮಾಜಿ ಪ್ರಧಾನಿ ಇಂದಿರಾಗಾಂಧಿ(IndiraGandhi) ಅವರ ಮುಖ್ಯ ಪಾತ್ರದಲ್ಲಿಯೂ ನಟಿಸಲಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದರಿಂದ ಚಿತ್ರಕ್ಕಾಗಿ ತಯಾರಿ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ. ಕಂಗನಾ ‘ಎಮರ್ಜೆನ್ಸಿ’ ಸಿನಿಮಾಗಾಗಿ ದೆಹಲಿಗೆ ಹೊರಟಿದ್ದಾರೆ ಎನ್ನಲಾಗಿದೆ. 2014ರ ರಿವಾಲ್ವರ್ ರಾಣಿ ಚಿತ್ರಕ್ಕಾಗಿ ರಣಾವತ್ ಅವರೊಂದಿಗೆ ಕೆಲಸ ಮಾಡಿದ ನಿರ್ದೇಶಕ ಸಾಯಿ ಕಬೀರ್ ಈ ಯೋಜನೆಯನ್ನು ನಿರ್ದೇಶಿಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

ಆದಾಗ್ಯೂ, ನಂತರ ದಾಕಡ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಕಂಗನಾ, ತನಗಿಂತ ಉತ್ತಮವಾಗಿ ಯಾರೂ ಈ ಯೋಜನೆಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ನಂಬಿರುವ ಕಾರಣ ತಾವೇ ಈ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿದ್ದಾರೆ. ಮತ್ತೆ ನಿರ್ದೇಶಕರ ಕ್ಯಾಪ್ ಧರಿಸಲು ಸಂತೋಷವಾಗಿದೆ, ಒಂದು ವರ್ಷಕ್ಕೂ ಹೆಚ್ಚು ಕಾಲ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಕೆಲಸ ಮಾಡಿದ ನಂತರ, ಅಂತಿಮವಾಗಿ ನಾನು ನನಗಿಂತ ಉತ್ತಮವಾಗಿ ಈ ಸಿನಿಮಾವನ್ನು ನಿರ್ದೇಶಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಂಡುಕೊಂಡಿದ್ದೇನೆ, ಅಸಾಧಾರಣ ಬರಹಗಾರ ರಿತೇಶ್ ಷಾ ಅವರೊಂದಿಗೆ ಸಹಕರಿಸಿ,
ಹಲವಾರು ನಟನಾ ಭಾಗಗಳನ್ನು ತ್ಯಾಗ ಮಾಡುವ ಮೂಲಕ ಈ ಕೆಲಸದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಕೂ ಆಪ್‌ನಲ್ಲಿ ಬರೆದುಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಈ ಹಿಂದೆ ಮಾತನಾಡಿ, ಎಮರ್ಜೆನ್ಸಿ ಸಿನಿಮಾ ಬಯೋಪಿಕ್ ಅಲ್ಲ, ಆದರೆ ರಾಜಕೀಯ ನಾಟಕ ಎಂದು ಸ್ಪಷ್ಟಪಡಿಸಿದ್ದರು. “ಇದು ಇಂದಿರಾ ಗಾಂಧಿಯವರ ಜೀವನಚರಿತ್ರೆ ಅಲ್ಲ. ಇದೊಂದು ಗ್ರ್ಯಾಂಡ್ ಪೀರಿಯಡ್ ಚಿತ್ರ ಅಷ್ಟೇ. ನಿಖರವಾಗಿ ಹೇಳುವುದಾದರೆ, ಇದು ಪ್ರಸ್ತುತ ಭಾರತದ ಸಾಮಾಜಿಕ-ರಾಜಕೀಯ ಭೂದೃಶ್ಯವನ್ನು ಅರ್ಥಮಾಡಿಕೊಳ್ಳಲು ನನ್ನ ಪೀಳಿಗೆಗೆ ಸಹಾಯ ಮಾಡುವ ರಾಜಕೀಯ ನಾಟಕವಾಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆ ಕಂಗನಾ ರಣಾವತ್ ಅವರ ಈ ಸಿನಿಮಾಗೆ ನೆಟ್ಟಿಗರು ಟ್ರೋಲ್ ಮೂಲಕ ವಿಭಿನ್ನವಾಗಿ ಬೆಂಬಲ ನೀಡುತ್ತಿದ್ದಾರೆ. ಕಂಗನಾ ರಣಾವತ್ ಅವರ ದಕಾಡ್ ಸಿನಿಮಾವನ್ನು ಮೀಮ್ ಹಾಗೂ ಟ್ರೋಲ್ ಮಾಡುವ ಮೂಲಕ ಸೋಲು ಸಿನಿಮಾಗಳ ರಾಣಿ ಎಂದೆಲ್ಲಾ ಹೇಳಿ ಟ್ರೋಲ್ ಮಾಡುತ್ತಿದ್ದಾರೆ.