Kangana Ranaut Slams Rahul Gandhi
New Delhi: ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡನ್ಬರ್ಗ್ ರೀಸರ್ಚ್ (American Short Seller Hindenburg Research) ಮಾಡಿರುವ ಅದಾನಿ ಸಮೂಹದ ಕುರಿತ ಇತ್ತೀಚಿನ ವರದಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ವಾಗ್ದಾಳಿ ನಡೆಸಿದ್ದಾರೆ.
ಹಿಂಡನ್ಬರ್ಗ್ ರೀಸರ್ಚ್ನ ಇತ್ತೀಚಿನ ವರದಿ ಹಾಗೂ ಸೆಬಿ ಅಧ್ಯಕ್ಷೆ ಮಾಧವಿ ಬುಚ್ (SEBI Chairperson Madhavi Buch) ವಿರುದ್ಧದ ಆರೋಪಗಳನ್ನು ‘ಅನುಮೋದಿಸುತ್ತಿರುವ’ ರಾಹುಲ್ ಗಾಂಧಿ’ (Rahul Gandhi) ಅಪಾಯಕಾರಿ ವ್ಯಕ್ತಿ’ ಎಂದು ಕಂಗನಾ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಅವರು ದೇಶವನ್ನು ಹಾಗೂ ಅದರ ಭದ್ರತೆ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಿಮಾಚಲ ಪ್ರದೇಶ (Himachala Pradesh) ದ ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಆರೋಪಿಸಿದ್ದಾರೆ.
“ರಾಹುಲ್ ಗಾಂಧಿ ಒಬ್ಬ ದ್ವೇಷಿ, ವಿಷಕಾರಿ ಮತ್ತು ವಿನಾಶಕಾರಿ” ಎಂದು ಕರೆದಿರುವ ಕಂಗನಾ, ಅವರನ್ನು ದೇಶವು ತನ್ನ ನಾಯಕ ಎಂದು ಯಾವತ್ತೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಹಿಂಡನ್ಬರ್ಗ್ ವರದಿಯು ನಮ್ಮ ಷೇರು ಮಾರುಕಟ್ಟೆಯನ್ನು ಗುರಿ ಮಾಡಿಕೊಂಡಿದೆ. ಅದಕ್ಕೆ ಕಳೆದ ರಾತ್ರಿ ರಾಹುಲ್ ಗಾಂಧಿ ನೀಡಿದ ಬೆಂಬಲವು ಠುಸ್ ಪಟಾಕಿಯಂತಾಗಿದೆ” ಮತ್ತು ರಾಹುಲ್ ಗಾಂಧಿ ಅತಿ (Controversy) ಅಪಾಯಕಾರಿ ಮನುಷ್ಯ. ಅವರೊಬ್ಬ ದ್ವೇಷಿ, ವಿಷಕಾರಿ ಮತ್ತು ವಿನಾಶಕಾರಿ, ತನಗೆ ಪ್ರಧಾನ ಮಂತ್ರಿ ಆಗುವುದು ಸಾಧ್ಯವಿಲ್ಲ ಎಂದಾದರೆ ಈ ದೇಶವನ್ನು ನಾಶಪಡಿಸುತ್ತೇನೆ ಎನ್ನುವುದು ಅವರ ಅಜೆಂಡಾ. ಎಂದು ಕಂಗನಾ ಲೇವಡಿ ಮಾಡಿದ್ದಾರೆ.
Rahul Gandhi is the ‘most dangerous’ man: Kangana Ranaut criticizes him.
ರಾಹುಲ್ ಗಾಂಧಿ, ಈ ದೇಶ, ಇದರ ಭದ್ರತೆ ಮತ್ತು ಆರ್ಥಿಕತೆ ಅಸ್ಥಿರಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಮಿ. ಗಾಂಧಿ, ನಿಮ್ಮ ಜೀವಮಾನದುದ್ದಕ್ಕೂ ವಿರೋಧ ಪಕ್ಷದ ಸ್ಥಾನದಲ್ಲಿಯೇ ಕುಳಿತುಕೊಳ್ಳಲು ಸಿದ್ಧರಾಗಿರಿ. ನೀವು ಈಗ ಪರದಾಡುತ್ತಿರುವಂತೆ ಈ ದೇಶದ ವೈಭವವನ್ನು, ಬೆಳವಣಿಗೆಯನ್ನು ಮತ್ತು ಜನರ ರಾಷ್ಟ್ರೀಯತೆಯನ್ನು ನೋಡಿ ಪರಿತಪಿಸಲು ಸಿದ್ಧರಾಗಿರಿ. ಅವರು ನಿಮ್ಮನ್ನು ಎಂದಿಗೂ ನಾಯಕರನ್ನಾಗಿ ಮಾಡುವುದಿಲ್ಲ. ನೀವೊಬ್ಬರು ಕಳಂಕ” ಎಂದು ಕಿಡಿಕಾರಿದ್ದಾರೆ.
ಕಂಗನಾ ರಣಾವತ್ ಮಾತ್ರವಲ್ಲದೆ, ಬಿಜೆಪಿಯ ಅನೇಕ ನಾಯಕರು ಹಿಂಡೆನ್ಬರ್ಗ್ ವರದಿ ಬಳಿಕ ರಾಹುಲ್ ಗಾಂಧಿ ಬಿಡುಗಡೆ ಮಾಡಿರುವ ವಿಡಿಯೋ ವಿರುದ್ಧ ಹರಿಹಾಯ್ದಿದ್ದಾರೆ
New Delhi: Actress and BJP MP Kangana Ranaut has lashed out at Congress leader Rahul Gandhi, who has made a statement regarding the latest report on the Adani group by the American short seller Hindenburg Research.
Kangana criticized the recent Hindenburg Research report and the charges against SEBI Chairperson Madhavi Buch as 'Rahul Gandhi is a dangerous person' who is 'endorsing'.
Kangana Ranaut, Member of Parliament from Mandi Constituency of Himachal Pradesh, has alleged that Rahul Gandhi is making all efforts to destabilize the country and its security and economy.
Calling Rahul Gandhi a hater, toxic and destructive, Kangana said the country will never accept him as its leader.
The Hindenburg Report targeted our stock market. "Rahul Gandhi's support last night was like a firecracker and Rahul Gandhi is a very dangerous man. He is a hater, toxic and destructive. His agenda is to destroy this country if he cannot become the Prime Minister," Kangana joked.
Rahul Gandhi is making every effort to destabilize this country, its security and economy. Mr. Gandhi, be prepared to sit in opposition for the rest of your life. Be prepared to marvel at the glory of this country, the growth and the nationalism of the people as you wander about. They will never make you a leader. "You are a stain," he shouted.
Not just Kangana Ranaut, many BJP leaders have come out against the video released by Rahul Gandhi after the Hindenburg report.