Mumbai : ತುನಿಷಾ ಶರ್ಮಾ ಅವರ ಸಾವಿನ ಪ್ರಕರಣ ಕುರಿತು ಧ್ವನಿ ಎತ್ತಿದ ನಟಿ ಕಂಗನಾ (Kangana requested Narendra Modi), ಬಹುಪತ್ನಿತ್ವದ ವಿರುದ್ಧ ಬಲವಾದ ಕಾನೂನುಗಳ,ನ್ನು
ಮಾಡುವಂತೆ ನಾನು ಪ್ರಧಾನಿ ಮೋದಿ (Prime minister Modi) ಅವರಿಗೆ ವಿನಂತಿಸುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ನಟಿ ಕಂಗನಾ ರಣಾವತ್ ಇನ್ಸ್ಟಾಗ್ರಾಮ್(Instagram) ಪುಟದಲ್ಲಿ ಬರೆದುಕೊಂಡಿದ್ದು, ನಟಿ ತುನಿಷಾ ಶರ್ಮಾ (Tunisha Sharma) ಅವರ ಇತ್ತೀಚಿನ ಸಾವಿನ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಅಲಿಬಾಬಾ : ದಸ್ತಾನ್-ಎ-ಕಾಬೂಲ್ ಟಿವಿ ಶೋ ಸೆಟ್‌ನಲ್ಲಿ ತುನಿಷಾ ಶವವಾಗಿ ಪತ್ತೆಯಾಗಿದ್ದಾರೆ. ತುನಿಷಾ ಅವರ ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿರುವಾಗ, ನಟಿ ಕಂಗನಾ ‘ಬಹುಪತ್ನಿತ್ವ ಮತ್ತು ಆಸಿಡ್ ದಾಳಿ’ಯಿಂದ ಮಹಿಳೆಯರನ್ನು ರಕ್ಷಿಸಲು ಹೊಸ ಕಾನೂನುಗಳನ್ನು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: https://vijayatimes.com/messi-gave-special-gift/
ಸುದೀರ್ಘವಾಗಿ ಬರೆದಿರುವ ಕಂಗನಾ, ‘ತುನಿಷಾ ಶರ್ಮಾ’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಪ್ರಾರಂಭಿಸಿರುವ ನಟಿ, “ಒಬ್ಬ ಮಹಿಳೆ ಎಲ್ಲವನ್ನೂ ನಿಭಾಯಿಸಬಹುದು ಜೊತೆಗೆ ಪ್ರೀತಿ, ಮದುವೆ, ಸಂಬಂಧ ಅಥವಾ
ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ,ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ನಿಭಾಯಿಸು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
https://vijayatimes.com/eknath-shinde-statement/
ಕಂಗನಾ ಈ ಘಟನೆಯನ್ನು ಕೊಲೆ ಎಂದು ಮುಂದುವರೆಸಿದ ಅವರು, “ಅಂತಹ ಸ್ಥಿತಿಯಲ್ಲಿ ಅವಳು ತನ್ನ ಸ್ವಂತ ಗ್ರಹಿಕೆಯನ್ನು ನಂಬಲು ಸಾಧ್ಯವಿಲ್ಲ, ಎಲ್ಲಾ ಜೀವನವು ನಮ್ಮ ಗ್ರಹಿಕೆ ಮಾತ್ರ ಮತ್ತು ಅವಳು ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರೆ ಜೀವಂತವಾಗಿರುವುದು ಅಥವಾ,
ಸತ್ತಿರುವುದು ಯಾವುದೇ ವ್ಯತ್ಯಾಸವನ್ನು ಅನುಭವಿಸುವುದಿಲ್ಲ. ಅವಳು ಒಬ್ಬಳೇ ಇದನ್ನು ಮಾಡಿಲ್ಲ ಎಂದು ದಯವಿಟ್ಟು ತಿಳಿದುಕೊಳ್ಳಿ. ಇದೊಂದು ಕೊಲೆ! ನಾನು ಗೌರವಾನ್ವಿತ ಪ್ರಧಾನ ಮಂತ್ರಿ ಮೋದಿ ಜೀ ಅವರನ್ನು ವಿನಂತಿಸುತ್ತೇನೆ.

ಹೆಣ್ಣಿನ ಮೇಲೆ ನಡೆಯುವ ಇಂಥ ಆಸಿಡ್ ದಾಳಿ, ದೇಹವನ್ನು ತುಂಡಾಗಿ ಕತ್ತರಿಸುವ ಕೃತ್ಯ ಎಸಗುವವರಿಗೆ ಮರಣದಂಡನೆ ಎಂಬ ಕಠಿಣ ಶಿಕ್ಷೆ ವಿಧಿಸಬೇಕು. ವಿಚಾರಣೆಯಿಲ್ಲದೆ ತಕ್ಷಣವೇ ಮರಣದಂಡನೆ ವಿಧಿಸಲು ಚಿಂತಿಸಬೇಕು ಎಂದು ಹೇಳಿದ್ದಾರೆ.
ಈ ಮಧ್ಯೆ ತುನೀಶಾ ಸಾವಿನ ಪ್ರಕರಣದಲ್ಲಿ ಶಂಕಿತನಾಗಿರುವ ಮಾಜಿ ಗೆಳೆಯ ನಟ ಶೀಜಾನ್ ಖಾನ್ (Sheejan Khan) ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಆಕೆಯ ಮರಣದ ಒಂದು ದಿನದ ನಂತರ, ಶೀಜಾನ್ ಖಾನ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆಯ ಆರೋಪದ ಮೇಲೆ ಬಂಧಿಸಲಾಯಿತು.
ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ತುನಿಷಾ ಮತ್ತು ಶೀಜಾನ್ ಸಾಯುವ ಕೆಲವು ವಾರಗಳ ಮೊದಲು ಬೇರ್ಪಟ್ಟರು.