Mumbai : ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut)ಅವರು ಇದೀಗ ಮತ್ತೊಮ್ಮೆ ವಿವಾದದ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಅಂಗಳದಲ್ಲಿ (kangana vs bachchan) ತಾವು ನಟಿಸಿರುವ ಎಮರ್ಜೆನ್ಸಿ ಸಿನಿಮಾ ಬಿಡುಗಡೆಯ ದಿನವೇ ಅಮಿತಾಬ್ ಬಚ್ಚನ್(Amitabh Bachchan) ಮತ್ತು ಟೈಗರ್ ಶ್ರಾಫ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಗಣಪತ್ ಚಿತ್ರ ಕೂಡ ಮುಖಾಮುಖಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ.

2023 ರ ಅಕ್ಟೋಬರ್ 20 ರಂದು ನಟಿ ಕಂಗನಾ ರಣಾವತ್(Kangana Ranaut) ಅಭಿನಯದ ಎಮರ್ಜೆನ್ಸಿ ಚಿತ್ರ ಬಿಡುಗಡೆಯಾಗಲು ದಿನಾಂಕವನ್ನು ಖಚಿತಪಡಿಸಿಕೊಂಡಿದೆ.
ಆದ್ರೆ, ಅದರ ಬೆನ್ನಲ್ಲೇ ಬಾಲಿವುಡ್ ಹಿರಿಯ ನಟ, ಬಿಗ್ ಬಿ ಅಮಿತ್ ಬಚ್ಚನ್ ಮತ್ತು ಟೈಗರ್ ಶ್ರಾಫ್ ಅವರು ನಟಿಸಿರುವ ಗಣಪತ್(Ganapat) ಚಿತ್ರ ಕೂಡ ಅದೇ ದಿನಾಂಕದಂದು ಬಿಡುಗಡೆಯಾಗಲು ಸಜ್ಜಾಗಿದೆ.
ಈ ವಿಷಯವನ್ನು ತೀವ್ರವಾಗಿ ಖಂಡಿಸಿದ ನಟಿ ಕಂಗನಾ, ‘ಬಾಲಿವುಡ್ ಮಾಫಿಯಾ ಗ್ಯಾಂಗ್’ ಎಂದು ಉಲ್ಲೇಖಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಈ ಸಂಗತಿಯ ಬಗ್ಗೆ ಟ್ವಿಟರ್ ನಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಿರುವ ನಟಿ ಕಂಗನಾ ರಣಾವತ್(Kangana Ranaut),
ನನ್ನ ಮುಂಬರುವ ಎಮರ್ಜೆನ್ಸಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಒಂದು ತಿಂಗಳ ಅಂತರದಲ್ಲಿ ಪ್ರಕಟಿಸುವುದಾಗಿ ಹೇಳಿದ್ದಾರೆ.
ಟೈಗರ್ ಶ್ರಾಫ್ ಮತ್ತು ಅಮಿತಾಬ್ ಬಚ್ಚನ್ ಅವರ ಗಣಪತ್ ಮತ್ತು ಭೂಷಣ್ ಕುಮಾರ್
ಅವರ ಯಾರಿಯನ್ 2 ಚಿತ್ರಗಳು ಅಕ್ಟೋಬರ್ 20 ರ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿಕೊಂಡಿರುವ ಕಾರಣ (kangana vs bachchan) ನಾನು ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.
ನಾನು ನನ್ನ ಎಮರ್ಜೆನ್ಸಿ ಚಿತ್ರ ಬಿಡುಗಡೆ ದಿನಾಂಕವನ್ನು ಹುಡುಕುತ್ತಿರುವಾಗ ನಾನು ಈ ವರ್ಷದ ಚಲನಚಿತ್ರ ಕ್ಯಾಲೆಂಡರ್ ಅನ್ನು ನೋಡಿದ್ದೇನೆ,
ಬಹುಶಃ ಹಿಂದಿ ಉದ್ಯಮವು ಹೊಂದಿರುವ ಹಿನ್ನಡೆಗಳಿಂದಾಗಿ ಇದು ಸಾಕಷ್ಟು ಉಚಿತವಾಗಿದೆ.
“ಹಾ ಹಾ ಲಗ್ತಾ ಹೈ ಪ್ಯಾನಿಕ್ ಮೀಟಿಂಗ್‌ಗಳು ಹೋ ರಾಹಿ ಹೈ ಬಾಲಿವುಡ್ ಮಾಫಿಯಾ ಗ್ಯಾಂಗ್ಸ್ ಮೇ” ( ಬಾಲಿವುಡ್ ಮಾಫಿಯಾ ಗ್ಯಾಂಗ್‌ಗಳು ಪ್ಯಾನಿಕ್ ಮೀಟಿಂಗ್‌ಗಳನ್ನು ನಡೆಸುತ್ತಿರುವಂತೆ ತೋರುತ್ತಿದೆ) ಎಂದು ಅವರು ತಮ್ಮ ಸರಣಿ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.
ಈಗ ನಾನು ಎಮರ್ಜೆನ್ಸಿ ಬಿಡುಗಡೆಯ ದಿನಾಂಕವನ್ನು ನಾನು ಟ್ರೈಲರ್‌ನೊಂದಿಗೆ ಕೇವಲ ಒಂದು ತಿಂಗಳು ಮುಂಚಿತವಾಗಿ ಘೋಷಿಸುತ್ತೇನೆ!
ಇಡೀ ವರ್ಷ ಉಚಿತವಾಗಿದ್ದರೆ, ಪರಸ್ಪರ ಘರ್ಷಣೆಗೆ ಏಕೆ ತಲೆಕೆಡಿಸಿಕೊಳ್ಳಬೇಕು.
ಉದ್ಯಮವು ತುಂಬಾ ಬಳಲುತ್ತಿದೆ. ನೀವು ಹೇಗೆ ಸ್ವಯಂ-ವಿನಾಶಕಾರಿಯಾಗಿದ್ದೀರಿ? ನನ್ನ ಎಮರ್ಜೆನ್ಸಿ ಚಿತ್ರದ ಬಿಡುಗಡೆಯ ಹೊಸ ದಿನಾಂಕವನ್ನು ನಿಮಗೆ ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ನಟಿ ಕಂಗನಾ ಹೇಳಿದ್ದಾರೆ.