Visit Channel

ಕನ್ನಡದ ಬಿಗ್ ಬಾಸ್ ಸೀಸನ್ 09ರ ಸ್ಪರ್ಧಿಗಳ ಪಟ್ಟಿ ಅನಾವರಣ ; ಯಾರೆಲ್ಲಾ ಇರಬಹುದು?

biggboss

ಕನ್ನಡದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ರಿಯಾಲಿಟಿ ಶೋ ಎಂದರೆ ಅದು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ ಅವರು ನಡೆಸಿಕೊಡುವ ಬಿಗ್ ಬಾಸ್.

ಕಳೆದ 8 ವರ್ಷದಿಂದ ಸತತವಾಗಿ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಬಿಗ್ ಬಾಸ್ ಮನರಂಜನಾ ಕಾರ್ಯಕ್ರಮ, ಇದೀಗ 9ನೇ ಆವೃತ್ತಿಗೆ ಕಾಲಿಟ್ಟಿದೆ.

ಬಿಗ್ ಬಾಸ್ ಸೀಸನ್ 09 ಶುರುವಾಗಲು ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಸದ್ಯ ಜನರಲ್ಲಿ ಈಗಾಗಲೇ ಕುತೂಹಲ ಹೆಚ್ಚಾಗಿದ್ದು, ಯಾರು ಈ ಬಾರಿ ಬರಲಿದ್ದಾರೆ? ಯಾವ ಯಾವ ವೃತ್ತಿಯಿಂದ ಬರಲಿದ್ದಾರೆ? ಈ ಸಲ ಯಾರು ಸಿಕ್ಕಾಪಟ್ಟೆ ಸದ್ದು ಮಾಡಬಹುದು ಎಂಬ ಅನೇಕ ಪ್ರಶ್ನೆಗಳು ತಮ್ಮಲ್ಲೇ ಚರ್ಚೆಯಾಗುತ್ತಿದೆ. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಈ ಬಾರಿ ಯಾರೆಲ್ಲಾ ಇರಬಹುದು ಎಂಬ ಪಟ್ಟಿ ಬಿಡುಗಡೆಯಾಗಿದ್ದು, ಅದರ ವಿವರ ಹೀಗಿದೆ.

actor

ನಟ ಚೇತನ್ : ಕಳೆದ ಒಂದು ವಾರದ ಹಿಂದೆಯಿಂದ ನಟ ಚೇತನ್ ಅವರು ಬಹಳ ಸುದ್ದಿಯಲ್ಲಿದ್ದಾರೆ ಜೊತೆಗೆ ಚೇತನ್ ಕುರಿತು ಈ ಹಿಂದೆಯೂ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇತ್ತು. ಇದರ ಜೊತೆಗೆ(In addition) ನಟ ಚೇತನ್ ಅವರು ಹೆಚ್ಚಾಗಿ ಕಾಂಟ್ರೋವರ್ಸಿಯಲ್ಲಿ ಕಾಣಿಸಿಕೊಂಡಿರುವ ಕಾರಣ ಚೇತನ್, ಅವರು ಈ ಬಾರಿ ಎಂಟ್ರಿ ಕೊಟ್ಟರೆ ಸಾಕಷ್ಟು ವಿಷಯಗಳು ಕನ್ನಡಿಗರಿಗೆ ಪರಿಚಯವಾಗುತ್ತದೆ ಎಂಬುದು ಜನಾಭಿಪ್ರಾಯದಿಂದ ತಿಳಿದು ಬರುತ್ತಿದೆ. ಹೀಗಾಗಿ ಚೇತನ್ ಅವರ ಹೆಸರು ಕೂಡ ಪಟ್ಟಿಯಲ್ಲಿದೆ.

ಡಿ.ಕೆ.ಶಿವಕುಮಾರ್ : ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಪಾದಯಾತ್ರೆ ಹೋರಾಟ, ಮೇಕೆದಾಟು ಪಾದಯಾತ್ರೆ ಎಂದು ನಿರತರಾಗಿರುವ ಡಿ.ಕೆ ಶಿವಕುಮಾರ್ ಅವರು ಕೂಡ ಈ ಲಿಸ್ಟ್ ನಲ್ಲಿ ಇದ್ದಾರೆ.

ದಿವ್ಯಾ ವಸಂತ : ಬಿಟಿವಿ ಮಾಧ್ಯಮದ ಖ್ಯಾತ ನಿರೂಪಕಿ ದಿವ್ಯಾ ವಸಂತ ಹೆಸರು ಈ ಪಟ್ಟಿಯಲ್ಲಿ ಪ್ರಮುಖವಾಗಿದೆ. ಇಡೀ ರಾಜ್ಯವೇ ಸಂತಸ ಪಡುವ ಸುದ್ದಿಯೆಂದು ಶುರು ಮಾಡಿದ ಟೈಟಲ್ ನಿಂದ ಸಿಕ್ಕಾಪಟ್ಟೆ ವೈರಲ್ ಆದ ದಿವ್ಯಾ ವಸಂತ, ನಂತರದಲ್ಲಿ ಸಾಕಷ್ಟು ಟ್ರೋಲ್ ಗಳಿಗೆ ಒಳಗಾದರು. ಇದಾದ ಬಳಿಕ ಟ್ರೋಲ್ ಅವರ ವಿರುದ್ಧ ತಿರುಗಿಬಿದ್ದ ದಿವ್ಯಾ, ವಿಭಿನ್ನವಾಗಿ ಹಾಡೊಂದನ್ನು ಹಾಡಿದ್ದಾರೆ. ಅಂತೆಯೇ(Similarly)ಈ ಮೂಲಕ ಇಗಲೂ ಕೂಡ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ದಿವ್ಯಾ ವಸಂತ ಕೂಡ ಸೀಸನ್ 09ಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬುದು ತಿಳಿದುಬಂದಿದೆ.

sonu

ಸೋನು ಶ್ರೀನಿವಾಸ್ ಗೌಡ : ಟಿಕ್ ಟಾಕ್, ಇನ್ಸ್ಟಾಗ್ರಾಂ ನಲ್ಲಿ ತಮ್ಮ ವೀಡಿಯೋಗಳ ಮೂಲಕವೇ ಸಿಕ್ಕಾಪಟ್ಟೆ ಟ್ರೋಲ್ಗಳಿಗೆ ಒಳಗಾದವರು. ಉದಾಹರಣೆಗೆ(For instance)ಪ್ರತಿ ವೀಡಿಯೊದಲ್ಲೂ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡದೇ ಇರುವ ಕಾರಣವೇ ಸೋನು ಶ್ರೀನಿವಾಸ್ ಅತೀ ಹೆಚ್ಚು ಟ್ರೋಲರ್ಗಳ ಬಾಯಿಗೆ ಸಿಲುಕಲು ಕಾರಣ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಪುಟಗಳಲ್ಲಿ ಇವರ ಮುಖವೇ ಅತೀ ಹೆಚ್ಚು ಪ್ರದರ್ಶನವಾಗುತ್ತಿರುವುದು. ಸದ್ಯ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟರೆ ಮನರಂಜನೆ ಹೆಚ್ಚುತ್ತದೆ ಎಂಬ ಲೆಕ್ಕಾಚಾರ ಕೇಳಿಬರುತ್ತಿದೆ. ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ 09ರ ಪಟ್ಟಿಯಲ್ಲಿ ಇದ್ದಾರೆ.

lawyer

ಲಾಯರ್ ಜಗದೀಶ್ : ವೃತ್ತಿಯಲ್ಲಿ ವಕೀಲರಾದರೂ ಕೂಡ ತಮ್ಮ ವಿಭಿನ್ನ ಶೈಲಿಯಲ್ಲಿ ಡೈಲಾಗ್ ಹೊಡೆದು, ಫೇಸ್‌ಬುಕ್‌ ಲೈವ್ ಬಂದು ಒಂದಲ್ಲ ಒಂದು ವಿಚಾರಗಳನ್ನು ಮಾತನಾಡುವ ಮೂಲಕ ಸುದ್ದಿಯಲ್ಲಿರುವ ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರೆ ಸಾಕಷ್ಟು ಚರ್ಚೆಗಳು, ಕಾಂಟ್ರೋವರ್ಸಿ ಹುಟ್ಟಿಕೊಳ್ಳುವುದಂತು ಖಂಡಿತ!

ಆಲೋಕ್ (All Ok) : ಕನ್ನಡದ ಖ್ಯಾತ ರಾಪ್ ಹಾಡುಗಾರ ಆಲ್ ಒಕೆ ಎಂದೇ ಹೆಸರುವಾಸಿಯಾಗಿರುವ ಅಲೋಕ್ ಕನ್ನಡ ಮ್ಯೂಸಿಕಲ್ ಟ್ರೆಂಡ್ ಸೃಷ್ಟಿಕರ್ತರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಬಾರಿ ಒಂದು ಹಾಡು ಹೊರಬಿಡುವಾಗ ಆ ಹಾಡಿನಲ್ಲಿ ಸಮಾಜಕ್ಕೆ ಒಂದು ಸಂದೇಶ ನೀಡುವ ಮುಖೇನ ತಮ್ಮ ಹಾಡನ್ನು ಜನರಿಗೆ ತಲುಪಿಸುತ್ತಾರೆ. ಕನ್ನಡ ರಾಪ್ ವಿಭಾಗದಲ್ಲಿ ಅತೀ ಹೆಚ್ಚು ಜನರ ಪ್ರೀತಿಗೆ ಪಾತ್ರರಾಗಿರುವ ಆಲ್ ಓಕೆ ಅವರನ್ನು ಬಿಗ್ ಬಾಸ್ ಒಳಗೆ ನೋಡಲು ಜನರು ಇಷ್ಟಪಡುತ್ತಾರೆ ಎಂಬ ನಿಟ್ಟಿನಲ್ಲಿ ಅವರ ಹೆಸರು ಕೂಡ ಕೇಳಿಬಂದಿದೆ ಎಂಬುದು ಜನರ ಅಭಿಪ್ರಾಯ. ಸದ್ಯ ಆಲ್ ಓಕೆ ಹೆಸರು ಕೂಡ ಬಿಗ್ ಬಾಸ್ ಪಟ್ಟಿಯಲ್ಲಿ ಸೇರಿಕೊಂಡಿದೆ.

rupesh

ರೂಪೇಶ್ ರಾಜಣ್ಣ : ಕನ್ನಡ ಭಾಷೆ, ಕನ್ನಡ ವಿಚಾರ, ಕನ್ನಡಿಗರ ಬಗ್ಗೆ ಯಾವುದೇ ಕೆಟ್ಟ ವಿಷಯಗಳು ಕೇಳಿ ಬಂದರೆ ಅಲ್ಲಿ ರೂಪೇಶ್ ರಾಜಣ್ಣ ಅವರು ಮೊದಲಿರುತ್ತಾರೆ. ಕನ್ನಡ ಪರ ಧ್ವನಿಯಾಗಿ ರೂಪೇಶ್ ರಾಜಣ್ಣ ಅವರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ತದನಂತರ(After that)ಕನ್ನಡಿಗರಿಗೆ ಅವರು ಈ ಕೆಲಸಗಳಿಂದ ಇನ್ನಷ್ಟು ಹತ್ತಿರವಾಗಿದ್ದಾರೆ. ರೂಪೇಶ್ ರಾಜಣ್ಣ ಅವರನ್ನು ಬಿಗ್ ಬಾಸ್ ಮನೆಯಲ್ಲಿ ನೀವು ಮುಂದಿನ ದಿನಗಳಲ್ಲಿ ನೋಡಬೇಕು ಎಂದು ಬಯಸುವುದಾದರೆ ಸೀಸನ್ 09 ಗ್ರ್ಯಾಂಡ್ ಓಪನಿಂಗ್ ವರೆಗೂ ಕಾಯಬೇಕು.

najma

ನಜ್ಮಾ ಚಿಕ್ಕನೇರಳೆ : ಸದಾ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರಗಳ ಚರ್ಚೆಯಲ್ಲಿ ನಜ್ಮಾ ಕಾಣಿಸಿಕೊಳ್ಳುತ್ತಾರೆ. ಸಮಾಜದ ಸಾಕಷ್ಟು ವಿಚಾರಗಳಲ್ಲಿ ಅವರ ಮಾತುಗಳು ಬಹಳ ಖಾರವಾಗಿಯೇ ಇರುತ್ತದೆ. ಈ ಮೂಲಕ ಕೆಲ ವಿವಾದಗಳಲ್ಲಿ ಕಾಣಿಸಿಕೊಂಡಿದ್ದಾರೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಾತಿನ ಶೈಲಿಯಿಂದಲೇ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ನಜ್ಮಾ ಅವರ ಎಂಟ್ರಿ ಬಿಗ್ ಬಾಸ್ ಮನೆಯೊಳಗೆ ಇದ್ರೆ ಏನೆಲ್ಲಾ ವಿಷಯಗಳು ಬರಬಹುದು? ಯಾವ ರೀತಿ ಮಾತನಾಡುತ್ತಾರೆ ಎಂಬ ಕುತೂಹಲಗಳು ಕಾಡಬಹುದು. ಇವರ ಹೆಸರು ಕೂಡ ಸದ್ಯ ಪಟ್ಟಿಯಲ್ಲಿದೆ.

ಮಜಾಭಾರತ ರಾಘವೇಂದ್ರ : ಮಜಾಭಾರತ ಹಾಸ್ಯಮಯ ಕಾರ್ಯಕ್ರಮದಲ್ಲಿ ಹೆಂಗಸು ಪಾತ್ರದಲ್ಲಿ ಹೆಚ್ಚಾಗಿ ಮಿಂಚಿ ಹೆಸರುಗಳಿಸಿದ ನಟ ರಾಘವೇಂದ್ರ, ಈಗ ಬಿಗ್ ಬಾಸ್ ಮನೆಗೆ ಲಗ್ಗೆಯಿಡುವಲ್ಲಿ ಪ್ರಮುಖರಾಗಿದ್ದಾರೆ. ರಾಘವೇಂದ್ರ ಮಜಾಭಾರತದಲ್ಲಿ ಹೆಣ್ಣಿನ ವೇಷಭೂಷಣದಲ್ಲಿ ಸಖತ್ ಮಿಂಚಿ, ಜನರನ್ನು ನಗೆಗಡಲಲ್ಲಿ ತೇಲಿಸಿರುವ ಹಾಸ್ಯ ಕಲಾವಿದ. ಈ ಕಲಾವಿದ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟರೇ ಖಂಡಿತ ಕನ್ನಡಿಗರಿಗೆ ಮನರಂಜನೆಯ ಮಹಾಪೂರವೇ ದೊರೆಯುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಬಹುದು.

ಒಟ್ಟಿನಲ್ಲಿ(Above all) ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ, ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ತನಕ ಕಾಯಬೇಕಿದೆ.

Latest News

China
ದೇಶ-ವಿದೇಶ

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್ ಬ್ಯಾನ್?? ; ಭಾರತದಲ್ಲಿ ಚೀನಿ ಕಂಪನಿಗಳ ಪಾಲು ಎಷ್ಟಿದೆ?

ಚೀನಾದ ವಿವೋ, ಕ್ಸಿಯೋಮಿ, ಒಪ್ಪೋ ಕಂಪನಿಗಳು ಸ್ಮಾರ್ಟ್‍ಫೋನ್, ಮೊಬೈಲ್ ಉತ್ಪಾದನೆಯಲ್ಲಿ ಪ್ರಾಬಲ್ಯ ಸಾಧಿಸಿದ ಪರಿಣಾಮ ದೇಶೀಯ ಕಂಪನಿಗಳು ನಷ್ಟವನ್ನು ಅನುಭವಿಸಿ ಮಾರುಕಟ್ಟೆಯಿಂದಲೇ ಹಿಂದೆ ಸರಿದಿವೆ.

Lorry driver
ಪ್ರಮುಖ ಸುದ್ದಿ

ಕುಡಿದು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ ಪೊಲೀಸರು ; ಕೇಸ್ ದಾಖಲಿಸಿಕೊಳ್ಳದೆ ಕಾನೂನು ಉಲ್ಲಂಘನೆ!

ಕುಡಿದ ಆಮಲಿನಲ್ಲಿದ್ದ ಮೂವರು ಪೊಲೀಸರು, “ನೀನು ಯಾವ ಸೀಮೆ ಡ್ರೈವರ್ ___*****” ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಚಾಲಕನ ಕೈ, ಕಾಲು ಸೇರಿದಂತೆ ಗುಪ್ತಾಂಗದ ಜಾಗಕ್ಕೆ ಒದ್ದು, ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.