Visit Channel

ನಮ್ಮ ಕನ್ನಡದ ಸಿನಿಮಾ ಕೆಜಿಎಫ್ ಮೇಲೆ ಪರಭಾಷಿಗರಿಗೆ ಹೊಟ್ಟೆಕಿಚ್ಚಾ?

kgf2

ಇಡೀ ಭಾರತ(India) ಚಿತ್ರರಂಗವೇ ಸ್ಯಾಂಡಲ್ವುಡ್(Sandalwood) ನತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ಕೆಜಿಎಫ್(KGF).

ಕೆಜಿಎಫ್ ಹವಾ ಅದೆಷ್ಟರ ಮಟ್ಟಿಗೆ ಇದೆ ಅಂದ್ರೆ, ನಮ್ಮ ಕೆಜಿಎಫ್ 2 ಸಿನಿಮಾ(Cinema) ಮುಂದೆ ಕಾಂಪಿಟೇಶನ್ ಕೊಡೋಕಾಗದೇ ಅಮಿರ್ ಖಾನ್(Amir Khan) ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನೇ ಪೋಸ್ಟ್ ಪೋನ್ ಮಾಡಲಾಯ್ತು.

rocking star

ಆದ್ರೆ ಶಾಹಿದ್ ನಟನೆಯ ಬಾಲಿವುಡ್ ಸಿನಿಮಾ ಜೆರ್ಸಿ, ಕೆಜಿಎಫ್ 2 ಗೆ ಟಕ್ಕರ್ ಕೊಡಬಲ್ಲೇ ಅನ್ನೋ ಭ್ರಮೆಯಲ್ಲಿತ್ತು. ಆದ್ರೆ ಅದ್ಯಾವಾಗ ಕೆಜಿಎಫ್ 2 ಪ್ರಮೋಷನ್ ನ ತಾಕತ್ತು, ಹಾಗೇ ಮುಂಬೈನಲ್ಲಿ ಕೆಜಿಎಫ್ ಕ್ರೇಜ್ ಗೊತ್ತಾಯ್ತೋ ಜೆರ್ಸಿ ತಂಡಕ್ಕೆ ಕನ್ನಡ ಸಿನಿಮಾ ಹವಾ ಏನು ಎಂಬ ಅರಿವಾಯಿತು. ಹೀಗಾಗಿಯೇ ಕೇವಲ ಮೂರೇ ಮೂರು ದಿನಗಳಿರುವಾಗ್ಲೇ ಸಿನಿಮಾ ರಿಲೀಸ್ ದಿನಾಂಕವನ್ನೇ ಮುಂದೂಡಿಬಿಟ್ಟರು. ಈ ಮೂಲಕ KGF 2 ಮುಂದೆ ಕಾಂಪಿಟೇಷನ್ ಕೊಡೋದು ಸಾಧ್ಯನೇ ಇಲ್ಲ, ನಮ್ಮ ಸೇಫ್ಟಿ ಮುಖ್ಯ ಎನ್ನುವ ನಿಲುವನ್ನ ಮೇಕರ್ಸ್ ತಾಳಿದ್ದು, ಸಿನಿಮಾ ತಂಡಕ್ಕೆ ಈ ಮೂಲಕ ಮತ್ತಷ್ಟು ಮುಖಭಂಗವೇ ಆಗಿದೆ.


ಯಾಕಂದ್ರೆ ಈ ಹಿಂದೆ ರಿಲೀಸ್ ಡೇಟ್ (April 14) ಅನೌನ್ಸ್ ಮಾಡಿ ಎಲ್ಲರೂ ಹುಬ್ಬೇರಿಸಿ ಟೀಕಿಸುವಂತೆ ಮಾಡಿಕೊಂಡಿದ್ದ ಸಿನಿಮಾದ ನಿರ್ದೇಶಕರು ಜೆರ್ಸಿಗೆ KGF 2 ಕಾಂಪಿಟೇಷನ್ ಅಲ್ವೇ ಅಲ್ಲ ಎಂದಿದ್ದರು. ಇತ್ತೀಚೆಗೆ ಶಾಹಿದ್ ಕೂಡ ಇದೇ ಮಾತನ್ನೇ ಹೇಳಿದ್ರು. ಆದ್ರೆ ಈಗ ಕೆಜಿಎಫ್ ಕ್ರೇಜ್ ನೋಡಿ ಸೈಲೆಂಟ್ ಆಗಿ ಹಿಂದೆ ಸರಿದುಬಿಟ್ಟಿದ್ದಾರೆ. ಇನ್ನು, ತಮಿಳಿನ ಸೂಪರ್ ಸ್ಟಾರ್ ಥಳಪತಿ ವಿಜಯ್ ಅವರ ನಟನೆಯ ಬೀಸ್ಟ್ ಸಿನಿಮಾ ಕೂಡ ಏಪ್ರಿಲ್ 13 ಅಂದ್ರೆ KGF 2 ರಿಲೀಸ್ ಗೂ ಒಂದು ದಿನ ಮೊದಲು ಬಿಡುಗಡೆಯಾಗಿತ್ತು. ಕೆಜಿಎಫ್ ಚಾಪ್ಟರ್​​ 1​ ಸಿನಿಮಾ ಬಿಡುಗಡೆಯಾದಾಗ ಬಾಲಿವುಡ್​ನ ಬಾದ್​ಷಾ ಶಾರುಖ್​ ಖಾನ್​ ಅವರ ಜೀರೋ ಸಿನಿಮಾ ರಿಲೀಸ್​ ಆಗಿತ್ತು.
cinema
ಆದರೆ, ರಾಕಿ ಭಾಯ್​ ಅಬ್ಬರದ ಮುಂದೆ ಜೀರೋ ಜೀರೋ ಆಗಿಯೇ ಉಳಿದುಕೊಂಡಿತು. ಇನ್ನು ಕೆಜಿಎಫ್ 2 ಜೊತೆ ಠಕ್ಕರ್ ಗೆ ಇಳಿದಿದ್ದ ತಮಿಳು ಸೂಪರ್ ಸ್ಟಾರ್ ವಿಜಯ್ ರ ಬೀಸ್ಟ್ ಚಿತ್ರ ಗಳಿಕೆಯಲ್ಲಿ ಕೆಜಿಎಫ್ ಎದುರು ಅಕ್ಷರಶಃ ಮಕಾಡೆ ಮಲಗಿದೆ. ಕೆಜಿಎಫ್‌ ಸಿನಿಮಾ ಒಟ್ಟು 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಿಂದಲೂ ಉತ್ತಮ ರೆಸ್ಪಾನ್ಸ್‌ ಸಿಗುತ್ತಿದೆ. ಕೆಜಿಎಫ್‌ ಜೊತೆಯಲ್ಲಿ ರಿಲೀಸ್‌ ಆಗಿರುವ ಸಿನಿಮಾಗಳು ಸದ್ಯ ನೆಲಕಚ್ಚಿವೆ. ಒಂದು ಸಿನಿಮಾ ತಂಡ ಇಷ್ಟೆಲ್ಲಾ ಸಾಧನೆ ಮಾಡ್ತಿದೆ ಅಂದ್ರೆ ಹೊಟ್ಟೆಕಿಚ್ಚು ಪಡೋರಿಗೇನು ಕಡಿಮೆ ಇಲ್ಲ.

ರಾಕಿಂಗ್ ಸ್ಟಾರ್ ಯಶ್ ಅವರ ಅಬ್ಬರಕ್ಕೆ ಹೆದರಿ ತಮ್ಮ ಸಿನಿಮಾ ರಿಲೀಸ್ ದಿನಾಕವನ್ನೇ ಮುಂದೂಡಿದ ಚಿತ್ರಗಳ ಮೇಕರ್ಸ್ ಮನಸ್ಸಲ್ಲೇ ಸದ್ಯ ಬಚಾವಾದ್ವಿ ಅಂದ್ಕೊಳ್ತಾ ಇದ್ರೆ, ಕೆಜಿಎಫ್ 2 ಗೆ ಸೆಡ್ಡು ಹೊಡೆಯೋಕೆ ಬಂದ ಚಿತ್ರಗಳ ಮೇಕರ್ಸ್ ಸೋತು ಸುಣ್ಣವಾಗಿ ಒಳಗೊಳಗೆ ಹೊಟ್ಟೆಕಿಚ್ಚು ಪಡ್ತಿದ್ದಾರೆ. ಸ್ಯಾಂಡಲ್ವುಡ್ ಅಂದ್ರೆ ಹಗುರವಾಗಿ ಪರಿಗಣಿಸ್ತಿದ್ದ ಸಿನಿಮಾ ಮಂದಿ, ಕೆಜಿಎಫ್ 2 ಧೂಳೆಬ್ಬಿಸ್ತಾ ಮುನ್ನುಗ್ತಿರೋ ಪರಿಯನ್ನ ಕಂಡು ಸೈಡಿಗೆ ಸರಿದು ಬೆಕ್ಕಸ ಬೆರಗಾಗಿ ನೋಡ್ತಿದ್ದಾರೆ.

rocky bhai
ರಾಕಿಬಾಯ್ ನ ಮುಟ್ತೀನಿ ಅಂದ್ಕೊಳ್ಳೋದು ತಪ್ಪಲ್ಲ, ಆದ್ರೆ ಮುಟ್ಟಬಹುದು ಅಂತ ಅಂದ್ಕೊಳ್ಳೋದು ತಪ್ಪು ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದೆ ಕೆಜಿಎಫ್ ಚಾಪ್ಟರ್ 2 ಸಿನಿಮಾ!
  • ಪವಿತ್ರ ಸಚಿನ್

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.