- ಕನ್ನಡ ತಮಿಳಿನಿಂದ ಹುಟ್ಟಿದೆ: ಕಮಲ್ ಹಾಸನ್ ಹೇಳಿಕೆಗೆ ಆಕ್ರೋಶ (Kannada is from Tamil kamal haasan)
- ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಕಮಲ್ ಹಾಸನ್
- ಹೊಸ ಸಿನೆಮಾ ಥಗ್ ಲೈಫ್ ಸಿನಿಮಾಗೆ ಎದುರಾಯ್ತು ಸಂಕಷ್ಟ
Chenai: ಇತ್ತೀಚಿಗೆ ಕನ್ನಡದ (Kannada) ಕುರಿತಾಗಿ ಅಡಿಕೊಳ್ಳೋದು ಸಾಮಾನ್ಯವಾಗಿ ಹೋಗಿದೆ. ಕೆಲ ದಿನಗಳ ಹಿಂದಷ್ಟೇ ಸೋನು ನಿಗಮ್ (Sonu Nigam) ಅವರು ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಿದ್ದರು.
ಆ ಬಳಿಕ ಕರ್ನಾಟಕದಲ್ಲಿ (Karnataka) ಅವರಿಗೆ ಅವಕಾಶ ನೀಡಬಾರದು ಎನ್ನುವ ನಿರ್ಧಾರಕ್ಕೆ ಬಂದಾಗಿದೆ.
ಈಗ ತಮಿಳು ನಟ ಕಮಲ್ ಹಾಸನ್ (Tamil actor Kamal Haasan) ಸರದಿ. ಅವರು ಕನ್ನಡದ ಬಗ್ಗೆ ನೀಡಿದ ಹೇಳಿಕೆ ಚರ್ಚೆಗೆ ಕಾರಣ (Reason for discussion) ಆಗಿದೆ.
ಶಿವರಾಜ್ಕುಮಾರ್ ಎದುರೇ ಕಮಲ್ ಹಾಸನ್ ಅವರು ತಮಿಳಿನಿಂದಲೇ ಕನ್ನಡ ಹುಟ್ಟಿದ್ದು (Kannada originated from Tamil) ಎನ್ನುವ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯಿಂದಾಗಿ ಅವರ ಹೊಸ ಚಿತ್ರ ಥಗ್ ಲೈಫ್ (Movie Thug Life) ಚಿತ್ರಕ್ಕೆ ಸಂಕಷ್ಟ ಉಂಟಾಗಿದೆ.
ಇನ್ನು ಥಗ್ ಲೈಫ್ ಚಿತ್ರದ ಪ್ರೀ-ರಿಲೀಸ್ ಈವೆಂಟ್ (Pre-release event) ಚೆನ್ನೈನಲ್ಲಿ ನಡೆಯಿತು. ಇದಕ್ಕೆ ಶಿವರಾಜ್ಕುಮಾರ್ (Shivrajkumar) ಅತಿಥಿಯಾಗಿ ತೆರಳಿದ್ದರು.
ಈ ವೇಳೆ ಮಾತನಾಡುವಾಗ ಕಮಲ್ ಹಾಸನ್ (Kamal Haasan) ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ. ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು (Kannada came from us) ಎಂದಿದ್ದಾರೆ.
ಕಮಲ್ ಹಾಸನ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಜೂನ್ 5ರಂದು ಥಗ್ ಲೈಫ್ (Thug Life) ಎಲ್ಲೆಡೆ ರಿಲೀಸ್ ಆಗುತ್ತಿದೆ.

ಕರ್ನಾಟಕದಲ್ಲೂ ಸಿನಿಮಾನ (cinema) ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ನಡೆದಿದೆ.
ಆದರೆ, ಈಗ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ (Thug Life movie) ರಿಲೀಸ್ ಆಗಬಾರದು ಎಂದು ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ (Praveen Shetty) ಹೇಳಿದ್ದಾರೆ.
ಸಿನಿಮಾ ರಿಲೀಸ್ ಹತ್ತಿರವಾದಂತೆ ಆಕ್ರೋಶ ಇನ್ನಷ್ಟು ಬಲಗೊಳ್ಳಬೇಕು ಎಂದಿದ್ದಾರೆ.
ಇನ್ನು ನಟ ಕಮಲ್ ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ (Social media) ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕನ್ನಡ ತಮಿಳಿನಿಂದ ಬಂದಿಲ್ಲ. ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು ಎಂದು ಕನ್ನಡಿಗರು ಕ್ಲಾಸ್ (Kannadigas Class) ತೆಗೆದುಕೊಂಡಿದ್ದಾರೆ.
ಈ ಹಿಂದೆ ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡುವುದಕ್ಕೂ ಮುನ್ನ ಹಿಂದಿ ಭಾಷಿಗರನ್ನು (Hindi speakers) ಕೆಣಕಿದ್ದರು. ಹಿಂದಿ ಕಲಿಯುವುದಕ್ಕೂ ಮುನ್ನ ಪಕ್ಕದ ರಾಜ್ಯದ ಭಾಷೆಗಳನ್ನು (State languages) ಕಲಿಯಿರಿ ಎಂದಿದ್ದರು.
ಇದರ ಬೆನ್ನಲ್ಲೇ ಕನ್ನಡ ಭಾಷೆ (Kannada language) ತಮಿಳಿನಿಂದ ಹುಟ್ಟಿದ್ದು ಎಂದು ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದು, ಇದು ಕನ್ನಡಿಗರ ನಿದ್ದೆ ಕೆಡಿಸಿದೆ.
ಅಲ್ಲದೇ ಕರ್ನಾಟಕದಲ್ಲಿ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗಳು (Protests against) ಶುರುವಾಗಿದ್ದು, (Kannada is from Tamil kamal haasan) ಕಮಲ್ ಹಾಸನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ