- ಹಾರರ್ ಕಾಮಿಡಿಗೆ ಹೊಸ ರೂಪ ಕೊಟ್ಟ ‘ಸು ಫ್ರಮ್ ಸೋ’ ಚಲನಚಿತ್ರ
- ನಗೆ ಕಡಲಲ್ಲಿ ತೇಲಾಡುವ ವೀಕ್ಷಕರು
- ಆಗಸ್ಟ್ 1 ಕ್ಕೆ ಕೇರಳದಲ್ಲೂ ಬಿಡುಗಡೆಯಾಗಲಿರುವ ‘ಸು ಫ್ರಮ್ ಸೋ’
Bengaluru: ಕನ್ನಡ ಚಲನಚಿತ್ರಗಳ ಕುರಿತು ಆಸಕ್ತಿ ಕಡಿಮೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುವ ಹೊತ್ತಿನಲ್ಲಿ ಎಲ್ಲರ ಚಿತ್ತವನ್ನು ಸೆಳೆದಿರುವ ಚಿತ್ರವೆಂದರೆ ಅದು – ‘ಸು ಫ್ರಮ್ ಸೋ’.
ಈ ಹಾರರ್ ಕಾಮಿಡಿ ಸಿನಿಮಾವೆಂಬ ಹಳೆಯದಾದ ಫಾರ್ಮುಲಾ ಹೊಸ ತಾಜಾ ಲುಕ್‌ನಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟಿದೆ.
ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಎಲ್ಲರೂ ಇದರ ಕುರಿತಾಗಿ ಮಾತಾಡುವಂತೆ ಮಾಡಿದೆ ಸಿನಿ ಪ್ರೇಮಿಗಳಿಗೆ ಹೊಸ ಟೇಸ್ಟ್ ಕೊಟ್ಟಿರುವ ಈ ಚಿತ್ರ,
ನಿರೀಕ್ಷೆಗಿಂತಲೂ ಹೆಚ್ಚಾಗಿ ಬಾಕ್ಸ್ ಆಫೀಸ್‌ನಲ್ಲಿ(Box office) ಹಣದ ಕಲೆಕ್ಷನ್ ಕೂಡ ಮಾಡಿದೆ.

ಹೊಸ ಹೀರೋ, ಹೊಸ ಕಥೆ, ಹೊಸ ಅಣಕು – ಎಲ್ಲವೂ ಹೊಸತು
ಇನ್ನು ‘ಸು ಫ್ರಮ್ ಸೋ’ ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರು ನಟಿಸಿದ್ದಾರೆ. ಆದರೆ ಅವರ ಅಭಿವ್ಯಕ್ತಿ, ನಟನೆ, ಡೈಲಾಗ್ ಡೆಲಿವರಿ ಎಲ್ಲವೂ ಪ್ರೇಕ್ಷಕರ ಮನ ಗೆದ್ದಿದೆ. ಹಿರಿಯ ನಟರಿಲ್ಲದಿದ್ದರೂ,
ಹೊಸಬರು ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ . ಹಾರರ್ ಕಥಾ ಹಂದರ ಹೊಂದಿರುವ ಹಲವು ಚಿತ್ರಗಳು ಕನ್ನಡದಲ್ಲಿ ಬಿಡುಗಡೆ ಹೊಂದಿದ್ದರೂ ಇದರಲ್ಲಿ ನಗು ತರಿಸುವ
ಕಾಮಿಡಿ ಮಿಕ್ಸ್ ಆಗಿರುವುದೇ ಈ ಚಿತ್ರದ ಸೂಪರ್ ಹಿಟ್ ರಹಸ್ಯ.
ಬಾಕ್ಸ್ ಆಫೀಸ್‌ನಲ್ಲಿ ಸದ್ದು
ಪ್ರಥಮ ದಿನ 88 ಲಕ್ಷ ರೂಪಾಯಿಗಳಷ್ಟು ಕಲೆಕ್ಷನ್ ಮಾಡಿದ್ದ ಈ ಸಿನಿಮಾ, ಎರಡನೇ ದಿನವೇ ಅಚ್ಚರಿಯ ರೀತಿ 2.44 ಕೋಟಿ ರೂಪಾಯಿ ಬಾಚಿದೆ.
ಮೊದಲ ಎರಡು ದಿನಗಳಲ್ಲಿ 3.32 ಕೋಟಿ ರೂಪಾಯಿ ಗಳಿಸಿರುವ ಚಿತ್ರ, ಮೂರನೇ ದಿನವಾದ ಭಾನುವಾರ ಶೋಗಳ ಸಂಖ್ಯೆ ಹೆಚ್ಚಿಸಿಕೊಂಡು ಫುಲ್ ಹೌಸ್ ಪ್ರದರ್ಶನಗಳತ್ತ ಸಾಗುತ್ತಿದೆ.
ರವಿವಾರ ಬೆಳಗ್ಗೆ 6.30ರಿಂದಲೇ ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋ ಶುರುವಾಗಿರುವುದು, ಪ್ರೇಕ್ಷಕ ಪ್ರಭುವಿನ ಮನಗೆದ್ದಿರುವುದನ್ನು ತೋರಿಸುತ್ತದೆ.
ಮಾತು ಮಾತಿನಲ್ಲಿ ಮೆಚ್ಚುಗೆ :
ಹಾಗೆ ನೋಡೋಕೆ ಹೋದರೆ ಇದೇನು ಹೈ ಬಜೆಟ್ ಚಿತ್ರವೂ ಅಲ್ಲ, ವಿದೇಶಗಳಲ್ಲಿ ಶೂಟ್ ಮಾಡಿಲ್ಲ.VFX ಅಂತಹ ಹೈ ಟೆಕ್ನಾಲಜಿ ಬಳಸಿಲ್ಲ.
ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸಿದ ಹೀರೋ, ಹಿರೋಯಿನ್ ಇದರಲ್ಲಿ ಇಲ್ಲ ಆದರೂ ಸಾಮಾಜಿಕ ಜಾಲತಾಣಗಳಲ್ಲಿ ‘ಸು ಫ್ರಮ್ ಸೋ’ ಟ್ರೆಂಡಿಂಗ್ ಆಗಿದೆ.
ಯಾರು ನೋಡಿದರೂ ಸಿನಿಮಾ ಬಗ್ಗೆ ಖುಷಿಯಿಂದ ಒಳ್ಳೆಯ ಅಭಿಪ್ರಾಯ ಶೇರ್ ಮಾಡುತ್ತಿದ್ದಾರೆ. ಸಿನಿಮಾ ನೋಡಿದವರು ತಮ್ಮ ಸ್ನೇಹಿತರು, ಕುಟುಂಬದವರಿಗೂ ಇದರ ಬಗ್ಗೆ ಹೇಳುತ್ತಿದ್ದಾರೆ.
ಈ ಬಾಯಿ ಮಾತಿನ ಪ್ರಚಾರವೇ ಈ ಸಿನಿಮಾ ಟ್ರೆಂಡ್ ಆಗೋಕೆ ಕಾರಣವಾಗಿದೆ.
ವ್ಯಾಪಕ ಪ್ರಭಾವ – ಹೊಸ ಇತಿಹಾಸ ನಿರ್ಮಾಣದ ದಾರಿ:
ಮಲೆಯಾಳಂ ಸಿನಿಮಾ ನೋಡಿ ಕನ್ನಡಿಗರು ಕಲಿಯಬೇಕು ಎಂದು ಹೇಳುತ್ತಿದ್ದ ಕೆಲ ಸಿನಿಮಾ ಪ್ರಿಯರಿಗೆ ಈ ಸಿನಿಮಾ ನೆತ್ತಿಯ ಮೇಲೆ ಸುತ್ತಿಗೆ ಏಟು ನೀಡಿದೆ.
ಅಂದರೆ ಕೇವಲ ಕರ್ನಾಟಕವಲ್ಲದೆ, ಈ ಚಿತ್ರ ಈಗ ಕೇರಳದಲ್ಲಿ ಕೂಡ ಬಿಡುಗಡೆ ಆಗಲಿದೆ.
ಆಗಸ್ಟ್ 1ರಂದು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಖ್ಯಾತ ನಟ ದುಲ್ಕರ್ ಸಲ್ಮಾನ್ ವಿತರಿಸುತ್ತಿದ್ದಾರೆ.
ಇದು ಚಿತ್ರತಂಡಕ್ಕೆ ಮತ್ತೊಂದು ಹೆಮ್ಮೆಯ ವಿಚಾರವಾಗಿದೆ.ಇನ್ನೊಂದೆಡೆ, ತೆಲುಗಿನ ‘ಹರಿ ಹರ ವೀರ ಮಲ್ಲು’ ಚಿತ್ರಕ್ಕೂ ಈ ಸಿನಿಮಾ ತೀವ್ರ ಪೈಪೋಟಿ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಟ್ಟಿನಲ್ಲಿ ಹೇಳುವುದಾದರೆ ಹೊಸದನ್ನು ಸ್ವೀಕರಿಸಿದ ಪ್ರೇಕ್ಷಕರು ಉತ್ತಮ ಕಥಾ ಹಂದರ ಹೊಂದಿರುವ ‘ಸು ಫ್ರಮ್ ಸೋ’ ಸಿನಿಮಾಗೆ ಮನ ಸೋತಿದ್ದಾರೆ.
ಇದನ್ನು ಓದಿ : ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ: 3 ಜಿಲ್ಲೆಗೆ ರೆಡ್ ಹಾಗೂ 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಹಾಗಾಗಿ ಮೊದಲ ವಾರಾಂತ್ಯದಲ್ಲಿ 7-8 ಕೋಟಿ ಕಲೆಕ್ಷನ್ ಆಗಬಹುದು ಎಂಬ ನಿರೀಕ್ಷೆ ಇದೆ. ಸದ್ಯ ಉತ್ತಮ ಸಿನಿಮಾಗಳಿಲ್ಲ ಎಂದು ಸೊರಗುತ್ತಿದ್ದ ಸ್ಯಾಂಡಲ್‌ವುಡ್‌ಗೆ ‘ಸು ಫ್ರಮ್ ಸೋ’ ಡಬ್ಬಲ್ ಎನರ್ಜಿ ನೀಡುವುದಂತೂ ಪಕ್ಕಾ!