• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಗಮನ ಸೆಳೆದ ‘ಕಡಲ ತೀರದ ಭಾರ್ಗವ’ ಚಿತ್ರದ ಟೀಸರ್

Preetham Kumar P by Preetham Kumar P
in ಮನರಂಜನೆ
ಗಮನ ಸೆಳೆದ ‘ಕಡಲ ತೀರದ ಭಾರ್ಗವ’ ಚಿತ್ರದ ಟೀಸರ್
0
SHARES
0
VIEWS
Share on FacebookShare on Twitter

ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ನಾಯಕರಾಗಿ ನಟಿಸಿರುವ ‘ಕಡಲ ತೀರದ ಭಾರ್ಗವ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

“ಇದು ನಮ್ಮ ಚಿತ್ರ ಹಿರಿಯ ಸಾಹಿತಿ ಶಿವರಾಮ ಕಾರಂತರ ಕುರಿತಾದುದ್ದಲ್ಲ . ಇದರಲ್ಲಿ ನಾಯಕನ ಹೆಸರು‌‌ ಭಾರ್ಗವ; ಆತ ಕಡಲತೀರದವನು. ಇನ್ನೊಂದು ರೀತಿಯಲ್ಲಿ ವಿಷ್ಣುವಿನ ಆರನೇ ಅವತಾರ ಪರಶುರಾಮ. ಆತನನ್ನು ಭಾರ್ಗವ ರಾಮ‌ ಎಂತಲೂ ಕರೆಯುತ್ತಾರೆ. ಭಾರ್ಗವರಾಮ ಸಾವಿಲ್ಲದವ. ದುಷ್ಟ ಕ್ಷತ್ರಿಯರನ್ನು ದ್ವಂಸ ಮಾಡಿದವ. ನಮ್ಮ ನಾಯಕನ‌ ಪಾತ್ರದಲ್ಲೂ ಈ ಗುಣಗಳಿವೆ.‌ ಹಾಗಾಗಿ ಈ ಶೀರ್ಷಿಕೆ ಸೂಕ್ತ ಎನಿಸಿತು. ಸದ್ಯ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದೇವೆ‌. ನವೆಂಬರ್ ಮೊದಲವಾರದಲ್ಲಿ ಟ್ರೇಲರ್ ಬರಲಿದೆ.‌ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮದಲವಾರದಲ್ಲಿ ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ” ಎಂದರು ನಿರ್ದೇಶಕ ಪನ್ನಗ ಸೋಮಶೇಖರ್.

ನಾನು, ನಿರ್ದೇಶಕರು ಹಾಗೂ ಚಿತ್ರದ ಮತ್ತೊಬ್ಬ ನಾಯಕ ಭರತ್ ಗೌಡ ಹತ್ತುವರ್ಷಗಳ ಸ್ನೇಹಿತರು. ಹಿಂದೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದೆ.‌ ಆ ಸಮಯದಲ್ಲಿ ಈ ಕಥೆ ಕೇಳಿದೆ. ಹಾಗೆ ಚಿತ್ರ ಆರಂಭವಾಯಿತು. ಭಾರ್ಗವನ ಪಾತ್ರದಲ್ಲಿ ‌ನಾನು ನಟಿಸುತ್ತಿದ್ದೇನೆ. ಒಬ್ಬ ವ್ಯಕ್ತಿಯಲ್ಲಿ ಹೀರೋ ಹಾಗೂ ವಿಲನ್ ನ ಎರಡೂ ಗುಣಗಳಿರುತ್ತವೆ. ನನ್ನದು ಇದೇ ರೀತಿ ಪಾತ್ರ ಎಂದರು ನಾಯಕ ವರುಣ್ ರಾಜು ಪಟೇಲ್.

ನಾನು ಹಾಗೂ ಪನ್ನಗ ಸೋಮಶೇಖರ್ ಗೆಳೆಯರು. ಹಾಗೆ ನಿರ್ದೇಶಕರು ವರುಣ್ ಕೂಡ ಸ್ನೇಹಿತರು. ನಿರ್ದೇಶಕರು ಹೇಳಿದ ಕತೆ ಮನ ತಟ್ಟಿತು. ಆನಂತರ ನಿರ್ಮಾಪಕರ ಹುಡುಕಾಟ. ಕೊನೆಗೆ ವರುಣ್, ನಾನು ಸೇರಿ ನಿರ್ಮಾಣ ಆರಂಭಿಸಿದ್ದೆವು. ನನ್ನ ಸ್ನೇಹಿತರೊಬ್ಬರ ಬಳಿ ನಿರ್ಮಾಣ ಮಾಡುತ್ತಿದ್ದೆನೆ ಎಂದು ಹೇಳಿದಾಗ, ಇದೊಂದು ತಪ್ಪಸ್ಸಿನ ತರಹ ಎಂದರು. ಆಮೇಲೆ ಆ ಮಾತಿನ ಅರ್ಥವಾಯಿತು. ಎರಡು ವರ್ಷಗಳ ಹಿಂದೆ ಚಿತ್ರೀಕರಣ ಆರಂಭಿಸಿದಾಗ ಕಡಲತೀರದ ಕಡೆ ಎಂದು ಕೇಳರಿಯದ ಮಳೆ. ಡಿಸೆಂಬರ್ ತನಕ ಎಲ್ಲೋ ಅಲರ್ಟ್ ಘೋಷಣೆ. ‌ಆನಂತರ ಋಷಿಗಳ ತಪ್ಪಸ್ಸಿಗೆ ರಾಕ್ಷಸರು ಅಡ್ಡಿಪಡಿಸಿದಂತೆ, ನಮಗೆ ತೊಂದರೆ ಕೊಡಲು ಕೊರೋನ‌ ಬಂತು. ಈಗ ನಮ್ಮ ಚಿತ್ರ ಎಲ್ಲಾ ಅಡ್ಡಿ ಆತಂಕಗಳನ್ನು ದಾಟಿ ಬಿಡುಗಡೆ ಹಂತ ತಲುಪಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದರು ಮತ್ತೊಬ್ಬ ನಾಯಕ ಭರತ್ ಗೌಡ.

ಚಿತ್ರದ ನಾಯಕಿ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಮಾತನಾಡಿ,
ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಇಂಪನ.‌ ಸದಾ ಕೆಲಸದೊತ್ತಡದಲ್ಲಿರುವ ಅಪ್ಪ. ಎಲ್ಲದಕ್ಕೂ ಕಂಟ್ರೋಲ್‌ ಮಾಡುವ ಅಮ್ಮ. ಅದರಿಂದ ಆಕೆಗೆ ಚಿಕ್ಕಂದಿನಿಂದಲೂ ಕುಟುಂಬದ ಪ್ರೀತಿ ಸಿಕ್ಕಿರುವುದಿಲ್ಲ. ಆದರೆ‌ ಅವಳ ಭಾವನೆ ಹೇಳಿಕೊಳ್ಳಲು ಒಬ್ಬರು ಆಂಟಿ ಇರುತ್ತಾರೆ. ನಂತರ ಅವರು ಅಸುನೀಗುತ್ತಾರೆ. ಆನಂತರ ಇಂಪನಾಗೆ ನಾಯಕ ಭರತ್ ಸಿಗುತ್ತಾನೆ. ಮುಂದಿನದು ಚಿತ್ರದಲ್ಲಿ ನೋಡಬೇಕು ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.

ಕಳೆದ ಎರಡುವರ್ಷಗಳಿಂದ ಯಾರನ್ನು ಭೇಟಿಯಾಗಿರಲಿಲ್ಲ. ಎಲ್ಲರನ್ನೂ ನೋಡಿ ಸಂತೋಷವಾಗಿದೆ. ಇತ್ತೀಚಿನ ದಿನಗಳಲ್ಲಿ ನನಗೆ ತುಂಬಾ ಹಿಡಿಸಿರುವ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. ಚಿತ್ರತಂಡಕ್ಕೆ ಶುಭಾವಾಗಲಿ ಎಂದರು ನಟ ಈಟಿವಿ ಶ್ರೀಧರ್. ಚಿತ್ರದ ಶೀರ್ಷಿಕೆ ನನಗೆ ಬಹಳ ಹಿಡಿಸಿತು . ಮೂಲತಃ ನಿರ್ದೇಶಕರು ಗಿಟಾರ್ ಪ್ಲೇಯರ್. ಅವರಿಗೆ ಸಂಗೀತ ಜ್ಞಾನವಿರುವುದರಿಂದ ಉತ್ತಮ ಹಾಡುಗಳು ಮೂಡಿಬರಲು ಸಹಕಾರಿಯಾಯಿತು. ಒಂದು ಬಿಟ್ ಸಾಂಗ್ ಸೇರಿದಂತೆ ಒಂಬತ್ತು ಹಾಡುಗಳಿದೆ. ಖ್ಯಾತ ಗೀತರಚನೆಕಾರರು ಬರೆದಿರುವ ಈ ಚಿತ್ರದ ಹಾಡುಗಳನ್ನು ಪ್ರಸಿದ್ಧ ಗಾಯಕರು ಹಾಡಿದ್ದಾರೆ ಎಂದು ಚಿತ್ರದ ಸಂಗೀತದ ಬಗ್ಗೆ ಮಾಹಿತಿ ನೀಡಿದರು ಸಂಗೀತ ನಿರ್ದೇಶಕ ಅನಿಲ್ ಸಿ.ಜೆ.

ಚಿತ್ರದ ನಾಯಕರಾದ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ಈ ಚಿತ್ರದ ನಿರ್ಮಾಪಕರು ಹೌದು.
ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನಿಲ್ ಸಿ ಜೆ ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ , ಉಮೇಶ್ ಭೋಸಗಿ ಅವರ ಸಂಕಲನವಿದೆ.
ವರುಣ್ ರಾಜು ಪಟೇಲ್, ಭರತ್ ಗೌಡ, ಶೃತಿ ಪ್ರಕಾಶ್ , ಈಟಿವಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 28, 2023
ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.