Bengaluru : ಕನ್ನಡ ಚಿತ್ರರಂಗದಲ್ಲಿ ಈ ಬಾರಿ ಒಂದೇ ದಿನ ಬಿಡುಗಡೆಯಾದ ಒಟ್ಟು ಸಿನಿಮಾಗಳ ಸಂಖ್ಯೆ ೧೧! ಈ ೧೧ ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆಯಾಗಿದ್ದು, ಅವು ಯಾವುವು ಎಂದು (kannada new flim release) ನೋಡುವುದಾದರೆ ಹೀಗಿದೆ.

ಪ್ರತಿ ವಾರದಲ್ಲಿ ಶುಕ್ರವಾರ ಎಂದರೆ ಕನ್ನಡ ಚಿತ್ರರಂಗಕ್ಕೆ ಅಪಾರ ಪ್ರೀತಿ, ಸಂಭ್ರಮದ ದಿನ ಎಂದೇ ಹೇಳಬಹುದು. ಯಾಕಂದರೆ ಪ್ರತಿ ಶುಕ್ರವಾರ ಕನ್ನಡ ಚಿತ್ರರಂಗಕ್ಕೆ ಇದು ಒಂದು ರೀತಿ ಹಬ್ಬವಿದ್ದಂತೆ!
ಹೌದು, ಯಾಕಂದರೇ ಶುಕ್ರವಾರ ಹಲವು ಸ್ಟಾರ್ ನಟರ ವಿವಿಧ ಬಗೆಯ ಸಿನಿಮಾಗಳು ತೆರೆಕಾಣುತ್ತವೆ.
ಸಾಮಾನ್ಯವಾಗಿ ಪ್ರತಿ ಶುಕ್ರವಾರ ಒಂದು ಸಿನಿಮಾದ ಜೊತೆಗೆ ೨-೪ ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಪೈಪೋಟಿ ನಡೆಸುತ್ತವೆ. ಆದ್ರೆ,
ಈ ಬಾರಿ ಫೆ. ತಿಂಗಳಲ್ಲಿ ಬರೋಬ್ಬರಿ ೧೧ ಸಿನಿಮಾಗಳ ಏಕಕಾಲಕ್ಕೆ ಬಿಡುಗಡೆಯಾಗುವ ಮೂಲಕ ಸಿನಿಪ್ರೇಕ್ಷಕರಿಗೆ (kannada new flim release) ಅಚ್ಚರಿ ಮೂಡಿಸಿದೆ ಮತ್ತು ಆಯ್ಕೆಯನ್ನು ನೀಡಿದೆ!
ಯಾವ ಸಿನಿಮಾ ನೋಡಬೇಕು? ಎಂಬುದು ಸಿನಿಪ್ರೇಕ್ಷಕರಿಗೆ ಇದೀಗ ಗೊಂದಲ ಉಂಟಾಗಿದೆ ಎಂದೇ ಹೇಳಬಹುದು. ಸದ್ಯ, ಬಿಡುಗಡೆಯಾಗಿರುವ ಒಟ್ಟು ೧೧ ಸಿನಿಮಾಗಳು ಯಾವ ನಟರದ್ದು,
ಯಾವುವು ಎಂಬ ಮಾಹಿತಿ ಕೆಳೆಗೆ ತಿಳಿಸಲಾಗಿದೆ ನೋಡಿ.

ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಚಕ್ರವರ್ತಿ ಚಂದ್ರಚೂಡ್(Chakravarthy Chandrachud) ಅವರು ಇದೀಗ ನಾಯಕನಾಗಿ ಕಾಣಿಸಿಕೊಂಡಿರುವ 1975 ಚಿತ್ರ ಬಿಡುಗಡೆಯಾಗಿದೆ.
ಈ ಚಿತ್ರಕ್ಕೆ ನಟಿ ಸಿಂಧು ಲೋಕನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಸ ಪ್ರತಿಭೆಗಳ ತಂಡ ರಚಿಸಿರುವ ಅಸ್ಥಿರ ಎಂಬ ಸಿನಿಮಾ ಕೂಡ ಇಂದು ಬಿಡುಗಡೆಯಾಗಿದೆ.
ಸಂಜು ವೆಡ್ಸ್ ಗೀತಾ ಖ್ಯಾತಿಯ ನಟ ಶ್ರೀನಗರ ಕಿಟ್ಟಿ(Srinagar Kitty) ಅವರು ನಟಿಸಿರುವ ಗೌಳಿ ಚಿತ್ರ ಟ್ರೇಲರ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿತ್ತು. ಈ ಚಿತ್ರವೂ ಇಂದು ಬಿಡುಗಡೆಗೊಂಡಿದೆ.
ಈ ಬಾರಿ ಹೊಸ ತಂಡಗಳ ಮೋಡಿ ಹೆಚ್ಚಾಗಿದ್ದು, ಮತ್ತೊಂದು ಹೊಸ ತಂಡದ ʻಕ್ಯಾಂಪಸ್ ಕ್ರಾಂತಿʼ ಎಂಬ ಸಿನಿಮಾ ಶುಕ್ರವಾರ ರಿಲೀಸ್ ಆಗಿದೆ.
ಇನ್ನು ವಿಭಿನ್ನ ಕಥಾಹಂದರವನ್ನು ಹೊಂದಿರುವ ಸೌತ್ ಇಂಡಿಯನ್ ಹೀರೊ ಸಿನಿಮಾ ಚಿತ್ರರಂಗ ಹೇಗಿರಲಿದೆ? ಚಿತ್ರರಂಗದ ನಟ-ನಟಿಯರ ಶೈಲಿ ಹೇಗಿರಲಿದೆ ಎಂಬುದನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ. ಈ ಚಿತ್ರವೂ ಬಿಡುಗಡೆಯಾಗಿದೆ. ಇದರೊಟ್ಟಿಗೆ, ವಿಧಿ 370 ಅಂತರಂಗ, ಹೊಟ್ಟೆಪಾಡು, ಜೂಲಿಯಟ್ 2, ಪಾಲಾರ್, ಸಂಭ್ರಮ ಚಿತ್ರಗಳು ತೆರೆಕಂಡಿದೆ.