ಕನ್ನಡ ಆಯ್ತು ಈಗ ವರನಟ ಡಾ. ರಾಜ್‌ಕುಮಾರ್‌ ಹೆಸರಿನಲ್ಲೂ ಗೂಗಲ್ ಎಡವಟ್ಟು: ಮತ್ತೆ ಹೆಚ್ಚಾಯ್ತು ಕನ್ನಡಿಗರ ಸಿಟ್ಟು

ಬೆಂಗಳೂರು,ಜೂ.22: ಇತ್ತೀಚೆಗೆ ಕನ್ನಡ ಭಾಷೆಗೆ ಅವಮಾನಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಗೂಗಲ್ ಇದೀಗ ಮತ್ತೊಂದು ಎಡವಟ್ಟು ಮಾಡಿದ್ದು, ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರ ಫೋಟೋ ತಮಿಳು ಸಿನಿಮಾದ ತಾರಾಗಣದ ಪಟ್ಟಿಯಲ್ಲಿ ಹಾಕುವ ಮೂಲಕ ಕನ್ನಡಿಗರನ್ನ ಕೆರಳಿಸಿದೆ.

ಹೌದು, ತಮಿಳಿನಿ ಸಿನಿಮಾ ವಿಕ್ರಂ ವೇದ ಚಿತ್ರದ ತಾರಾಗಣದ ಪಟ್ಟಿಯಲ್ಲಿ ಡಾ. ರಾಜ್‌ಕುಮಾರ್ ಅವರ ಫೋಟೋ ಸಹ ಕಾಣಿಸಿಕೊಂಡಿದೆ. ಈ ಮೂಲಕ ಕನ್ನಡ ಹಾಗೂ ವರನಟ ಡಾ. ರಾಜಕುಮಾರ್ ಅವರಿಗೆ ಅವಮಾನ ಮಾಡಿದೆ ಎಂದು ಕನ್ನಡಿಗರು ಮತ್ತೆ ಸಿಟ್ಟಿಗೆದಿದ್ದಾರೆ.

2017ರಲ್ಲಿ ತಮಿಳಿನಲ್ಲಿ ʻವಿಕ್ರಮ್ ವೇದʼ ಸಿನಿಮಾ ತೆರೆಕಂಡಿತ್ತು. ಅದರಲ್ಲಿ ವಿಜಯ್ ಸೇತುಪತಿ, ಆರ್. ಮಾಧವನ್ ಮತ್ತು ಕನ್ನಡಿಗರಾದ ಶ್ರದ್ಧಾ ಶ್ರೀನಾಥ್, ಅಚ್ಯುತ್‌ ನಟಿಸಿದ್ದರು.

ಇತ್ತೀಚೆಗೆ ಅಗ್ಲಿ ಭಾಷೆ ಎಂದು ಗೂಗಲ್‌ನಲ್ಲಿ ಹುಡುಕಿದರೆ ಕನ್ನಡ ಎಂದು ಉತ್ತರ ಬರುತ್ತಿತ್ತು. ಇದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿ ನಂತರ ಗೂಗಲ್‌ ಕ್ಷಮೆಯಾಚಿಸಬೇಕಾಯಿತು.

Latest News

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.

ರಾಜಕೀಯ

`ನನ್ನಲ್ಲೂ ದಾಖಲೆಗಳಿವೆ ; `ಸರ್ಟಿಫಿಕೇಟ್ ಕೋರ್ಸ್ʼಗಿಂತ ಬೃಹತ್ ಚಾಪ್ಟರ್ 1, 2, 3 ಆಗುತ್ತವೆ, ಬಿಚ್ಚಲೇ? : ಹೆಚ್.ಡಿಕೆ

ಕಟ್ಟಡಗಳ ಹೆಸರಿನಲ್ಲಿ ಕಮೀಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್ ಮಾಡುವ ಅಶ್ವತ್ ನಾರಾಯಣ್, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ?