Belgaum: ಬೆಳಗಾವಿಯ ಬಾಳೇಕುಂದ್ರಿ ಗ್ರಾಮದಲ್ಲಿ (Balekundri village of Belgaum) ಮರಾಠಿ ಪುಂಡರು ಬಸ್ ಕಂಡಕ್ಟರ್ (Bus conductor) ನನಗೆ ಮಾರಾಠಿ ಬರಲ್ಲ ಕನ್ನಡ ಮಾತಾಡು (Speak Kannada) ಎಂದಿದಕ್ಕೆ ಆತನ ಮೇಲೇ ಹಲ್ಲೆ ನಡೆಸಿದ ಪ್ರಕರಣ ಈಗಾಗಲೇ ರಾಜ್ಯಾದ್ಯಂತ ಸುದ್ದಿಯಾಗಿ ಎಲ್ಲೆಡೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರ ಹೋರಾಟ,ಪ್ರತಿಭಟನೆ (Struggle, protest) ಜೋರಾಗಿರುವ ಸಂದರ್ಭದಲ್ಲೇ,ಅದೇ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Minister Lakshmi Hebbalkar) ಮಾರಾಠಿ (Marathi) ಮಾತಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.ಇದರಿಂದಾಗಿ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಂಡಕ್ಟರ್ (Conductor) ಒಬ್ಬರ ಮೇಲೆ ಹಲ್ಲೆ ನಡೆಸಿದ ಪುಂಡರ ಊರಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಮರಾಠಿ ಭಾಷೆಯಲ್ಲಿ ಭಾಷಣ (Speech in Marathi language) ಮಾಡಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.ಬಾಳೇಕುಂದ್ರಿ ಗ್ರಾಮದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ (Dharmaveera Sambhaji Maharaj) ಪುತ್ಥಳಿ ಲೋಕಾರ್ಪಣೆ (Putthali Lokarpane) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು, ಮರಾಠಿಯಲ್ಲಿ ಮಾತನಾಡಿದ್ದಾರೆ. ಈ ಘಟನೆ ನಡೆದು ಮೂರು ದಿನ ಕಳೆದರೂ ಸಚಿವೆ ಹೆಬ್ಬಾಳ್ಕರ್ ಮಾತ್ರ ಯಾವುದೇ ಖಂಡನೆ ವ್ಯಕ್ತಪಡಿಸಿಲ್ಲ ಆದ್ರೆ ಆ ಪುಂಡರ ಊರಲ್ಲಿ ಹೋಗಿ ಮರಾಠಿ ಪ್ರೇಮ ಮೆರೆದಿದ್ದಾರೆ.ಇನ್ನು ಸಚಿವೆ ಮಾರಾಠಿಯಲ್ಲಿ ಮಾತಾನಾಡಿರುವುದು ಸಾರ್ವಜನಿಕ ವಲಯದಲ್ಲಿ ಅಸಮಧಾನಕ್ಕೆ ವ್ಯಕ್ತವಾಗಿದೆ.
ಬೆಳಗಾವಿಯಲ್ಲಿ ಹೊಂದಾಣಿಕೆ ರಾಜಕೀಯವೇ (Conformity politics in Belgaum) ಇದೆ. ಕಂಡಕ್ಟರ್ ಮೇಲೇ ಹಲ್ಲೆ ನಡೆಸಿದ ವಿಷಯದ ಬಗ್ಗೆ ಸಚಿವೆ ಈವರೆಗೂ ಧನಿ ಎತ್ತಿಲ್ಲ ಎಂದು ಕನ್ನಡಪರ ಸಂಘಟನೆಗಳು (Pro-Kannada organizations) ಹಾಗೂ ಕನ್ನಡಿಗರಿಂದ ಭಾರೀ ವಿರೋಧ (Massive opposition from Kannadigas) ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಹೊಂದಾಣಿಕೆಯ ರಾಜಕೀಯ ಮುಂದುವರಿದಿದೆ. ಅದರಲ್ಲೂ ಬೆಳಗಾವಿಯಲ್ಲಿನ ಶಾಸಕರು ಈ ಬಗ್ಗೆ ಧ್ವನಿಯೇ ಎತ್ತುತ್ತಿಲ್ಲ ಎನ್ನುವ ಆರೋಪಗಳು ಇವೆ. ಆದರೆ ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಮರಾಠಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವುದಲ್ಲೇ ಮರಾಠಿಯಲ್ಲೇ ಭಾಷಣ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.