download app

FOLLOW US ON >

Monday, August 8, 2022
Breaking News
ನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!
English English Kannada Kannada

ಕನ್ನಿಕೇರಿ ಹುಡುಗಿ’ ವಿಡಿಯೋ ಸಾಂಗ್ ಬಿಡುಗಡೆ

ಕಳೆದ ಒಂದಷ್ಟು ವರ್ಷಗಳಿಂದ ಚಿತ್ರರಂಗ ಹಾಗೂ ಸಾಂಸ್ಕೃತಿಕ ರಂಗದ ಹಲವು ಕಾರ್ಯಕ್ರಮಗಳ ನಿರೂಪಣೆಯ ಮೂಲಕ ಗುರುತಿಸಿಕೊಂಡವರು ದಿವ್ಯ ಆಲೂರು.
ಇದೀಗ ಅವರು ‘ಕನ್ನಿಕೇರಿ ಹುಡುಗಿ’ ಎಂಬ ಮೂಲ ಜನಪದ ಹಾಡನ್ನು ಈಗಿನ ಯುವಜನತೆಯ ಮನಸ್ಸಿಗೆ ಹಿಡಿಸುವ ಹಾಗೆ ಹಾಡಿದ್ದು ಅದರ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಸುದ್ದಿಗೋಷ್ಠಿ ಇತ್ತೀಚೆಗೆ ನೆರವೇರಿತು.

ದಿವ್ಯಾ ಅಲೂರು ಅವರು ಹಾಡನ್ನು ಅವರೇ ಹಾಡುವುದರ ಜೊತೆಗೆ ಅಭಿನಯಿಸಿರುವುದು ವಿಶೇಷ.
“ನಾನು ಖ್ಯಾತ ಜಾನಪದ ಗಾಯಕ ಹಾಗೂ ಸಾಹಿತಿ ಆಲೂರು ನಾಗಪ್ಪ ಅವರ ಪುತ್ರಿ. ಮೊದಲಿನಿಂದಲೂ ಗಾಯನದಲ್ಲಿ ಆಸಕ್ತಿ. ಚಿಕ್ಕಂದಿನಲ್ಲಿ ಅಪ್ಪನೊಂದಿಗೆ ಹಾಡುತ್ತಿದೆ. ಜನಪದದಲ್ಲಿ ಡಿಗ್ರಿ ಸಹ ಮಾಡಿದ್ದೇನೆ. ನಂತರ ನಿರೂಪಣೆಯ‌ ಒತ್ತಡದಿಂದ ಹಾಡು ಹೆಚ್ಚು ಹೇಳುತ್ತರಲಿಲ್ಲ. ಈ ವಿಷಯವನ್ನು ನನ್ನ ಪತಿ ಆದರ್ಶ್ ಬಳಿ ಹೇಳಿದೆ. ಅವರು ನನ್ನ ತಂದೆಯವರು ಜನಪ್ರಿಯಗೊಳಿಸಿದ ‘ಕನ್ನಿಕೇರಿ ಹುಡುಗಿ’ ಹಾಡನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸೋಣ ನೀನು ಹಾಡು ಎಂದರು‌. ಪ್ರಶಾಂತ್ ಕುಮಾರ್ ಈ ಹಾಡನ್ನು ನಿರ್ದೇಶಿಸಿದ್ದಾರೆ.

ಅರುಣ್ ಆಂಡ್ರ್ಯೂ ಸಂಗೀತ ನೀಡಿದ್ದಾರೆ‌. ರಾಜಶೇಖರ್ ಛಾಯಾಗ್ರಹಣ ಹಾಗೂ ವಿಶ್ವ ಸಂಕಲನ ಈ ವಿಡಿಯೋ ಸಾಂಗ್ ಗಿದೆ. ಬಿಲಿವ್ ಸಂಸ್ಥೆ ಪ್ರದೀಪ್ ಅವರ ಉಪಕಾರ ಮರೆಯಲಾಗದು. ನನ್ನ ತಂದೆ ಆಲೂರು ನಾಗಪ್ಪ, ಮಹಿಳಾ ಸಮಾಜದ ಶಾಂತ ರಾಮಸ್ವಾಮಿ, ನಿರ್ಮಾಪಕ ಚಂದನ್ ಗೌಡ ಹಾಗೂ ಕನ್ನಡವೇ ಸತ್ಯ ರಂಗಣ್ಣ ಅವರು ಇಲ್ಲಿಗೆ ಆಗಮಿಸಿ, ಶುಭ ಹಾರೈದಿದ್ದಕ್ಕೆ ತಂಬು ಹೃದಯದ ಧನ್ಯವಾದಗಳು” ಎಂದರು ದಿವ್ಯ ಆಲೂರು.

ದಿವ್ಯ ಅವರ ಈ ಪ್ರಯತ್ನಕ್ಕೆ ಆದಿಚುಂಚನಗಿರಿ ಶ್ರೀಗಳು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಮುಂತಾದ ಗಣ್ಯರು ಶಭ ಕೋರಿದ್ದಾರೆ.
ಆದರ್ಶ್ ತಮ್ಮ ಹಾಡಿನ ಮೂಲಕ ಕಾರ್ಯಕ್ರಮ ಆರಂಭಿಸಿದರು. ವಿಡಿಯೋ ಸಾಂಗ್ ಗೆ ಕಾರ್ಯ ನಿರ್ವಹಿಸಿರುವ ತಂಡದವರು ಹಾಗೂ ಮುಖ್ಯ ಅತಥಿಗಳು ಹಾಡಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article