ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಕಾಜಲ್ ಅಗರ್ವಾಲ್ ಮದುವೆಯ ಬಳಿಕ ಇದೀಗ ಸಖತ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆರೇಂಜ್ ಡ್ರೆಸ್ ನಲ್ಲಿ ಕಾಜಲ್ ಸಖತ್ ಹೈಲೆಟ್ ಆಗಿದ್ದಾರೆ. ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು ಫೋಟೋ ವೈರಲಾಗೋದರ ಜೊತೆಗೆ ಒಳ್ಳೆ ಕಮೆಂಟ್‌ಗಳು ಕೂಡ ಬರ್ತಾ ಇದೆ . ಇನ್ನು ಈ ಸ್ಟೈಲೀಶ್ ಗೆ ಕಾರಣ ಯಾರು ಎಂಬುವುದನ್ನು ಕಾಜಲ್ ತಿಳಿಸಿದ್ದಾರೆ .
ಆಭರಣ ಅಲಂಕಾರವನ್ನು ಸುನಿತಾ ಶೇಕ್ವತ್ ಜೈಪುರ್ ಮಾಡಿದ್ದು ಮೇಕಪ್‌ಅಲ್ಲಿ ಕಂಗೊಳಿಸುವಂತೆ ವಿಶಾಲ ಚರಣ್ ಮಾಡಿದ್ದಾರೆ ವಸ್ತ್ರವಿನ್ಯಾಸವನ್ನು ಫಿಸ್ಸಿಗೋಬ್ಲೆಟ್ ಮಾಡಿದ್ದು ಮನಮೋಹಕವಾಗಿ ಕಂಡುಬಂದಿದೆ.
ಕಾಜಲ್ ಅಗರ್ ವಾಲ್ ಸಿನಿಮಾ ರಂಗದಲ್ಲಿ ಮಿಂಚುತ್ತಿರುವಾಗಲೇ ಉದ್ಯಮಿ ಗೌತಮ್ ಕಿಚಲು ಅವರ ಜೊತೆ ಅ. ೩೦ ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ . ಕೊರೋನಾ ಹಿನ್ನಲೆ ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆ ಜರುಗಿದೆ.