2024 ಮುಗಿಯಲು ಕೆಲವೇ ಕೆಲವು ದಿನಗಳು ಬಾಕಿ ಇವೆ.2025 ಪ್ರಾರಂಭವಾಗಲು ಕ್ಷಣಗಣನೆ ಆರಂಭವಾಗಿದೆ ಜನರೆಲ್ಲಾ ಹೊಸ ವರ್ಷ (New year) ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ವಿವಿಧ ರೀತಿಯಲ್ಲಿ ಹೊಸ ವರ್ಷವನ್ನು ಆಚರಿಸಲು ಅನೇಕ ಸಿದ್ಧತೆಗಳನ್ನು (Preparations) ಮಾಡಿಕೊಳ್ಳುತ್ತ ಇದಾರೆ.ಇನ್ನು ಸಿನಿ ಪ್ರೇಕ್ಷಕರು (Cinema audience) ಕೂಡ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.ಹೊಸ ವರ್ಷದಲ್ಲಿ ಯಾವ ಹೊಸ ಸಿನಿಮಾ (New movie) ಬರಲಿದೆ ಎಂದು ಕಾಯುತ್ತ ಇದ್ದಾರೆ.ಅನೇಕ ನಟರ ಸಿನಿಮಾಗಳು (Actors movies) 2025 ಕ್ಕೆ ರಿಲೀಸ್ ಆಗಲಿದೆ,ನೆಚ್ಚಿನ ನಟರ ಸಿನಿಮಾ ನೋಡಲು ಅಭಿಮಾನಿಗಳು (Fans) ಕೌಂಟ್ ಡೌನ್ ಹಾಕುತ್ತ ಇದಾರೆ.

ಇನ್ನು ಈ ವರ್ಷ ರಿಲೀಸ್ ಆದ ಸಿನಿಮಾಗಳಲ್ಲಿ ಪುಷ್ಪಾ-2 (Pushpa-2) ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.ಜನರ ಮೆಚ್ಚುಗೆ ಗಳಿಸಿ ಈ ವರ್ಷದ ಬಾಕ್ಸ್ ಆಫೀಸ್ನ (Box office) ಎಲ್ಲಾ ದಾಖಲೆಗಳನ್ನು ಮುರಿದು ಸಾವಿರ ಕೋಟಿಗೂ ದಾಟಿ ಕಲೆಕ್ಷನ್ (Collection) ಮಾಡಿದೆ.ಇನ್ನು ಈ ಸಿನಿಮಾದ ದಾಖಲೆಗಳನ್ನು ಮುರಿಯಲು ಯಾವ ಸಿನಿಮಾ ಹೊಸ ವರ್ಷದಲ್ಲಿ ಬರಲಿದೆ ಎಂದು ನೋಡುವುದಾದರೆ ಅದು ಸ್ಯಾಂಡಲ್ ವುಡ್ ನ (Sandalwood) ಕಾಂತಾರ-2 (Kantara-2) ಎಂದು ಹೇಳುತ್ತಾ ಇದ್ದಾರೆ.ರಿಷಬ್ ಶೆಟ್ಟಿ (Rishabh Shetty) ಅಭಿನಯದ ಕಾಂತಾರ ಮೂವಿ ಸಾಕಷ್ಟು ಜನಪ್ರಿಯತೆ (Popular) ಪಡೆದಿತ್ತು,ಅವರ ಸಿನಿಮಾ 2022 ರಲ್ಲಿ ತೆರೆ ಮೇಲೆ ಬಂದಿದ್ದು ಆ ಸಂದರ್ಭದಲ್ಲಿ ಬಾಕ್ಸ್ ಆಫೀಸ್ ಅನ್ನು ಆಶ್ಚರ್ಯಕರ ರೀತಿಯಲ್ಲಿ ಕೊಳ್ಳೆ ಹೊಡೆದಿತ್ತು ಜೊತೆಗೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿ ಆಸ್ಕರ್ (Oscars) ಪ್ರಶಸ್ತಿಗೂ ಕೂಡ ನಾಮಿನೇಟ್ (Nominate) ಆಗಿತ್ತು.

ಇನ್ನು 2025 ರಲ್ಲಿ ಕಾಂತಾರ-2 ಬಿಡುಗಡೆಯಾಗಲಿದ್ದು,ಈಗಾಗಲೇ ಕಾಂತಾರ-2 ಸಿನಿಮಾದ ಟೀಸರ್ (Teaser of the movie) ರಿಲೀಸ್ ಆಗಿದೆ. ಇತ್ತೀಚೆಗಷ್ಟೆ ಚಿತ್ರತಂಡ (film crew) ಸಿನಿಮಾ ಅಕ್ಟೋಬರ್ 2, 2025ಕ್ಕೆ ರಿಲೀಸ್ ಮಾಡುವುದಾಗಿಯೂ ಕೂಡ ಹೇಳಿದೆ.ಸಿನಿಮಾ ತಂಡ ಹೇಳುವ ಪ್ರಕಾರ ಇದು ಕದಂಬರ ಕಾಲದ ಕಥೆಯನ್ನು ಹೊಂದಿದೆ ಎಂದು ಹೇಳಲಾಗಿದೆ. ಕರ್ನಾಟಕವನ್ನು ಆಳಿದ ಪ್ರಮುಖ ವಂಶಗಳಲ್ಲಿ ಕದಂಬ ವಂಶವೂ ಕೂಡ ಒಂದು. ಕಲೆ ಹಾಗೂ ಸಂಸ್ಕೃತಿಯ ವಿಚಾರದಲ್ಲಿ ರಾಜ್ಯಕ್ಕೆ ಕದಂಬರ ಕೊಡುಗೆ ಅಪಾರವಿದೆ.ಸಿನಿಮಾದ ನಿರ್ದೇಶಕ (Director) ಹಾಗು ನಾಯಕ (Hero) ಆಗಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ.ಇನ್ನು 2025 ರ ಅತಿದೊಡ್ಡ ಹಿಟ್ ಸಿನಿಮಾ (Hit movie) ಕಾಂತಾರ-2 ಅನ್ನೋದು ಲೆಕ್ಕಾಚಾರ.