Bengaluru : ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ತುಳುನಾಡಿನ ದೈವ ಕೊರಗಜ್ಜನ ನೇಮೋತ್ಸವದ(Kantara Effect) ಹೆಸರಿನಲ್ಲಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ.

ಈಗಾಗಲೇ ಬೆಂಗಳೂರಿನಲ್ಲಿ ಕೊರಗಜ್ಜನ ನೇಮೋತ್ಸವ ನಡೆಸಲು(Kantara Effect) ಕೆಲವರು ಮುಂದಾಗಿದ್ದು, ಇದಕ್ಕೆ ತುಳುನಾಡಿನ ದೈವಾರಾಧಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಕಾಂತಾರ(Kantara) ಚಿತ್ರ ತೆರೆಕಂಡ ನಂತರ ಇಷ್ಟು ದಿನಗಳ ಕಾಲ ತುಳುನಾಡಿಗೆ ಸೀಮಿತವಾಗಿದ್ದ, ತುಳುನಾಡಿನ ದೈವಾರಾಧನೆಯೂ ಇದೀಗ ರಾಜ್ಯಾದ್ಯಂತ ಅನೇಕರ ಗಮನ ಸೆಳೆದಿದೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ತುಳುನಾಡಿನ(Tulunadu) ದೈವಾರಾಧನೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿದ್ದಾರೆ. ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಕೊರಗಜ್ಜನ ದೈವಕಟ್ಟೆ ಸ್ಥಾಪಿಸಿ, ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ : https://vijayatimes.com/state-govt-requests-highcourt/
ಇನ್ನು ತುಳುವರ ಪ್ರತಿಯೊಂದು ಕುಟುಂಬದ ಮೂಲಕ್ಕೂ ದೈವಗಳಿವೆ. ದೈವಗಳ ಜೊತೆ ತುಳುವರಿಗೆ ಭಕ್ತಿಯೊಂದಿಗೆ ಒಂದು ರೀತಿಯ ಸಲುಗೆಯ ಸಂಬಂಧವಿದೆ.
ತುಳುವ ಸಂಸ್ಕೃತಿಯ ಮೂಲ ಮೂರು ಬೇರುಗಳಾದ ದೈವಾರಾಧನೆ/ಭೂತಾರಾಧನೆ , ನಾಗಾರಾಧನೆ ಮತ್ತು ಸಿರಿ ಆರಾಧನೆ ವೈಧಿಕ ಸಂಸ್ಕೃತಿಯನ್ನೂ ಮೀರಿ ತುಳುವರನ್ನು ಆವರಿಸಿಕೊಂಡಿರುವಂತಹದ್ದು.
ತುಳುವರ ಪ್ರತಿಯೊಂದು ಕಾರ್ಯವೂ ದೈವಗಳ ಮುಂದಾಳತ್ವದಲ್ಲೇ ನಡೆಯುತ್ತದೆ. ಇನ್ನು ಮನುಷ್ಯನಿಗೆ ಯಾವ ವಿಷಯ ಬದುಕಿಗೆ ಭರವಸೆ, ಭದ್ರತೆ ಮತ್ತು ಸಮಾಧಾನವನ್ನು ನೀಡುತ್ತದೋ ಅದಕ್ಕೆ ಆತ ಹೆಚ್ಚಿನ ಮಹತ್ವ ನೀಡುತ್ತಾನೆ. ತುಳುವರಿಗೆ ದೇವರಿಗಿಂತ ಹೆಚ್ಚು ಈ ವಿಚಾರಗಳಲ್ಲಿ ಹೊಂದಿಕೊಂಡದ್ದು ದೈವಗಳು.

ದೇವರಿಗೆ ಎಲ್ಲವೂ ಏಕಮುಖವಾಗಿತ್ತು, ಆದರೆ ದೈವಗಳು ಮನುಷ್ಯನ ಮೇಲೆ ಬಂದು ವ್ಯವಹರಿಸುವುದರಿಂದ ದ್ವಿಮುಖ ಸಂವಹನ ಉಂಟಾಗಿ ಕಷ್ಟಗಳಿಗೆ ಪರಿಹಾರ ಒದಗಿಸುವುದರಿಂದ ದೈವಗಳು ಹತ್ತಿರವಾದವು. ದೇವರು ಮೌನದ ಒಂದು ಮೂರ್ತಿಯಂತೆ ಕಂಡರೆ ದೈವಗಳು ನಮ್ಮ ನಡುವೆಯೇ ಇರುವ ನಮ್ಮೊಂದಿಗೆ ವ್ಯವಹರಿಸುವ,
ಇದನ್ನೂ ಓದಿ : https://vijayatimes.com/kantara-ott-fans/
ನಮ್ಮ ಅಳಲಿಗೆ ಸ್ಪಂದಿಸುವ ಅಲೌಕಿಕ ಶಕ್ತಿಗಳಾಗಿ ತುಳುನಾಡಲ್ಲಿ ಮೆರೆದವು. ಇದರಿಂದ ತುಳುವರು ದೈವಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದರು. ಇದೀಗ ಇದನ್ನೇ ಕೆಲವರು ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ.
- ಮಹೇಶ್.ಪಿ.ಎಚ್