Thiruvanthapuram : ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಿಷಬ್ ಶೆಟ್ಟಿ(Rishab Shetty) ನಿರ್ದೇಶನದ “ಕಾಂತಾರ”(Kantara Gets In Trouble) ಚಿತ್ರಕ್ಕೆ ಇದೀಗ ಕಾನೂನು ತೊಡಕು ಎದುರಾಗಿದೆ. ಕಾಂತಾರ ಚಿತ್ರದಲ್ಲಿ ಬರುವ ‘ವರಾಹ ರೂಪಂ’(Varaha Roopam) ಹಾಡನ್ನು ಬಳಸದಂತೆ ಕೇರಳದ ಕೊಯಿಕ್ಕೋಡು ಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಕೇರಳದ ಸಂಗೀತ ಬ್ಯಾಂಡ್ “ತೈಕುಡಂ ಬಿಡ್ಜ್ ಬ್ಯಾಂಡ್” ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬರುವ ‘ವರಾಹ ರೂಪಂ’ಹಾಡನ್ನು ನಮ್ಮ ಬ್ಯಾಂಡ್‌ನಿಂದ ಕದ್ದಿರುವುದಾಗಿ(Kantara Gets In Trouble) ಆರೋಪ ಮಾಡಿತ್ತು.
ಈ ಕುರಿತು ಕಾನೂನು ಹೋರಾಟ ನಡೆಸುವುದಾಗಿಯೂ ಹೇಳಿಕೊಂಡಿತ್ತು.
https://vijayatimes.com/tweets-to-dear-appu/
ಇದೀಗ ನ್ಯಾಯಾಲಯದಿಂದ ‘ವರಾಹ ರೂಪಂ’ ಹಾಡನ್ನು ಸಿನಿಮಾದಲ್ಲಿ ಬಳಸದಂತೆ ತಡೆಯಾಜ್ಞೆ ತಂದಿದೆ.
ಈ ಕುರಿತು ವಿಚಾರಣೆ ನಡೆಸಿದ ಕೇರಳದ ಕೊಯಿಕ್ಕೋಡು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ, ತೈಕ್ಕುಡಂ ಬ್ರಿಡ್ಜ್ನ ಅನುಮತಿ ಇಲ್ಲದೇ, ಕಾಂತಾರ ಚಿತ್ರ ತಂಡವು “‘ವರಾಹ ರೂಪ” ಹಾಡನ್ನು ಬಳಸುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ.
https://youtu.be/w3nJxaDhgtM Ms Vijayalakshmi Shibaruru Live
ತೈಕುಡಂ ಬ್ರಿಡ್ಜ್ ಬ್ಯಾಂಡ್ನ “ನವರಸಂ” ಹಾಡಿನ ಟ್ಯೂನ್ ಕದ್ದು, “ವರಾಹ ರೂಪಂ” ಹಾಡನ್ನು ಮಾಡಲಾಗಿದೆ. ಹೋಲಿಕೆಯಲ್ಲಿ ನಮ್ಮ ಸಂಗೀತವನ್ನು ಕದಿಯಲಾಗಿದೆ.
ಕಾಂತಾರ ಚಿತ್ರತಂಡ ನಮ್ಮ “ನವರಸಂ” ಹಾಡನ್ನು ಪ್ರೇರಿತವಾಗಿ ತಗೆದುಕೊಂಡಿಲ್ಲ, ಕೃತಿಚೌರ್ಯ ಮಾಡಿದೆ ಎಂದು ಆರೋಪಿಸಿದೆ.
ಆದರೆ ಈ ಆರೋಪವನ್ನು ಕಾಂತಾರ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ತಳ್ಳಿಹಾಕಿದ್ದಾರೆ. ಅದೇ ರೀತಿ ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಅವರು ಕೂಡಾ “ನಾವು ಹಾಡನ್ನು ಕೃತಿಚೌರ್ಯ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
- ಮಹೇಶ್.ಪಿ.ಎಚ್