Mumbai : ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ (Kantara Gushes In Bollywood) ಚಿತ್ರ ಸೆಪ್ಟೆಂಬರ್ 30 ರಂದು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಂಡು ಸಿನಿಪ್ರೇಕ್ಷಕರನ್ನು ನಿಬ್ಬೆರಗಾಗಿಸಿತು.

ಅಭಿಮಾನಿಗಳ ಸಂತಸಕ್ಕೆ ಕಾರಣವಾದ ಕಾಂತಾರ ಸಿನಿಮಾ, ಸಿನಿಪ್ರೀಯರಿಗೆ ಸಿನಿಮಾ ಕಥಾಹಂದರವೇನು? ಮಂಗಳೂರು ಮಣ್ಣಿನ ಸೊಗಡು, ಭಾಷೆ,
ಸಂಸ್ಕೃತಿಯನ್ನು ಪರಿಚಯಿಸುವ ಮೂಲಕ ಸಿನಿ (Kantara Gushes In Bollywood) ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ ಎಂಬುದಕ್ಕೆ ಕಿಂಚಿತ್ತು ಅನುಮಾನವೇ ಇಲ್ಲ.
ಸದ್ಯ ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾದ ಕಾಂತಾರ, ಕನ್ನಡ ಭಾಷೆಗಿಂತಲೂ ಅನ್ಯ ಭಾಷೆಗಳ ತವರಿನಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಕನ್ನಡ ಸಿನಿಮಾಗೆ ಸಿಕ್ಕ ಅದ್ಬುತ ಹಿರಿಮೆಯಾಗಿದೆ.
ಅಕ್ಟೋಬರ್ 14 ರಂದು ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ವ್ಯಾಪಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : https://vijayatimes.com/dating-website-fraud/
ಬಾಕ್ಸ್ ಆಫೀಸ್ ಕಲೆಕ್ಷನ್ (Box Office Collection) ಬಗ್ಗೆ ತಿಳಿಯುವುದಾದರೆ, ಕಾಂತಾರ ಆಕ್ಷನ್-ಥ್ರಿಲ್ಲರ್ ಸಿನಿಮಾವಾಗಿದ್ದು, ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿದ್ದಾರೆ.
ಇದನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದು, ಹೊಂಬಾಳೆ ಫಿಲಂಸ್(Hombale Films) ನೇತೃತ್ವ ವಹಿಸಿದೆ.
ಕಾಂತಾರ ಚಿತ್ರವು ಯಶ್ ಅವರ ಕೆಜಿಎಫ್ ಅನ್ನು ಹಿಂದಿಕ್ಕಿ, ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ ಎಂಬುದು ಶ್ಲಾಘನೀಯ.
ಇದನ್ನೂ ಓದಿ : https://vijayatimes.com/state-govt-responds-to-kantara/
ಅಕ್ಟೋಬರ್ 20 ರಂದು, ಕಾಂತಾರ ಹಿಂದಿ ಆವೃತ್ತಿಯು ಚಿತ್ರಮಂದಿರಗಳಲ್ಲಿ 7ನೇ ದಿನವನ್ನು ಪೂರೈಸಿ, ಯಶಸ್ವಿಯಾಗಿ ಮುನ್ನುಗುತ್ತಿದೆ.
ಸದ್ಯದಲ್ಲೇ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 15 ಕೋಟಿ ರೂಪಾಯಿಗಳ ಗಡಿ ದಾಟಲಿದೆ ಎಂದು ವರದಿಗಳು ತಿಳಿಸಿವೆ. ಈ ಅಬ್ಬರದಲ್ಲಿ ಕಾಂತಾರ ಚಿತ್ರ, ಹಿಂದಿ ಭಾಷೆಯಲ್ಲೂ ಹೆಚ್ಚಿನ ದಿನಗಳು ಕಾಲ ಮುಂದುವರೆಯುವ ಸಾಧ್ಯತೆ ಬಲವಾಗಿದೆ.

ಕಾಂತಾರ ಚಿತ್ರದಲ್ಲಿ ನಟ ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮತ್ತು ನವೀನ್ ಡಿ ಪಡೀಲ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.