Karnataka : ಕನ್ನಡ ಚಿತ್ರರಂಗದಲ್ಲಿ (Kantara Hits in Telugu Industry) ದೈವ ಕಥಾಹಂದರದ ವಿಶಿಷ್ಟತೆ, ವಿಭಿನ್ನತೆಯಲ್ಲಿ ಮೂಡಿಬಂದ ಸಿನಿಮಾ ಕಾಂತಾರ, ಇದೀಗ ನಮ್ಮ ರಾಜ್ಯವನ್ನು ಮೀರಿ ಪರಭಾಷೆಗಳಲ್ಲೂ ಭರ್ಜರಿ ಪ್ರದರ್ಶನ ಕಾಣುವ ಮುಖೇನ ಭಾರಿ ಸದ್ದು ಮಾಡುತ್ತಿದೆ.

ಜಾಗತಿಕವಾಗಿ 100 ಕೋಟಿ ರೂ. ಗಳಿಸಿದ ಕನ್ನಡ ಚಿತ್ರ ಕಾಂತಾರ, ವಾರಾಂತ್ಯದಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿದೆ.
ಸಿನಿಮಾ ಬ್ಯುಸಿನೆಸ್ ಅಂಕಿ ಅಂಶ ವರದಿಗಳ ಪ್ರಕಾರ, ಚಿತ್ರವು ಕನ್ನಡ ಚಿತ್ರರಂಗದಲ್ಲಿ ಯಾವ ರೀತಿ ಪ್ರದರ್ಶನ ಕಂಡಿತೋ, ಅದೇ ರೀತಿ ಇತರ ಭಾಷೆಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ವಿಶೇಷವೆಂದರೆ ನಿರೀಕ್ಷೆಗಳನ್ನು ಮೀರಿ ಪ್ರದರ್ಶನ ಕಾಣುತ್ತಿದೆ ಮತ್ತು ಪರಭಾಷೆಯ ಸಿನಿಪ್ರೀಯರು ಚಿತ್ರಮಂದಿರಕ್ಕೆ ಭಾರಿ ಪ್ರಮಾಣದಲ್ಲಿ ನುಗ್ಗುತ್ತಿರುವುದರಿಂದ ಸಿನಿಮಾದ ಕಲೆಕ್ಷನ್‌ಗೆ ಉತ್ತಮ ಬೆಂಬಲ ಲಭಿಸುತ್ತಿದೆ.
ತೆಲುಗು ರಾಜ್ಯಗಳಲ್ಲಿ ಕನ್ನಡದ ಕಾಂತಾರ ಸಿನಿಮಾವೂ ಬಿಡುಗಡೆಗೊಂಡ ಕೇವಲ ಎರಡೇ ದಿನಗಳಲ್ಲಿ 10 ಕೋಟಿ ರೂ. ಗಳಿಕೆ ಮಾಡಿದ್ದು, ಈಗಾಗಲೇ ಲಾಭದ ವಲಯಕ್ಕೆ ಯಶಸ್ವಿಯಾಗಿ ಪ್ರವೇಶಿಸಿದೆ.
ಇದನ್ನೂ ಓದಿ : https://vijayatimes.com/seer-basavaprabhu-to-murugha-mutt/
ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ (Rishab Shetty) ನಾಯಕನಾಗಿ ಅಮೋಘ ಪ್ರದರ್ಶನ ನೀಡಿರುವುದು ಚಿತ್ರಪ್ರೇಮಿಗಳ ಮನ ಗೆಲ್ಲುತ್ತಿದೆ. ಅತೀಂದ್ರಿಯ ಅರಣ್ಯ ಎಂದು ಭಾಷಾಂತರಿಸುವ ಕಾಂತಾರ,
ಸ್ಥಳೀಯ ದೇವಮಾನವನೊಬ್ಬನ ಕಥೆಯನ್ನು ಹೇಳುತ್ತದೆ, ಅವನು 1870 ರಲ್ಲಿ ಬುಡಕಟ್ಟಿನ (Kantara Hits in Telugu Industry) ಜನರಿಗೆ ಸಂತೋಷಕ್ಕಾಗಿ ರಾಜನೊಂದಿಗೆ ಅರಣ್ಯ ಭೂಮಿಯನ್ನು ವ್ಯಾಪಾರ ಮಾಡುತ್ತಾನೆ. https://youtu.be/2_awcZytkDQ
ಅನೇಕ ವರ್ಷಗಳ ನಂತರ, ರಾಜನ ಮಗ ದುರಾಸೆಯಿಂದ ಬೆಳೆದು ಭೂಮಿಯನ್ನು ಮರಳಿ ಬಯಸಿದಾಗ, ಅವನು ದೈವದ ಕೋಪದಿಂದ ಸಾಯುತ್ತಾನೆ ಎಂಬುದು ಚಿತ್ರದ ಎಳೆಯಾಗಿದೆ.
ವ್ಯಾಪಾರದ ಮೂಲಗಳ ಮಾಹಿತಿ ಅನುಸಾರ, ಕಾಂತಾರ ಚಿತ್ರದ ತೆಲುಗು ಮತ್ತು ಹಿಂದಿ ಆವೃತ್ತಿಗಳು ಘನ ಸಂಖ್ಯೆಯನ್ನು ದಾಖಲಿಸಿವೆ ಮತ್ತು ನಿರೀಕ್ಷೆಗಳನ್ನು ಮೀರಿ ಭರ್ಜರಿ ಪ್ರದರ್ಶನ ಕಾಣುತ್ತಿವೆ.

ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್(Taran Adarsh) ಟ್ವಿಟ್ಟರ್ ನಲ್ಲಿ ಸಿನಿಮಾ ಬಗ್ಗೆ ಉಲ್ಲೇಖಿಸಿದ್ದು, ಕಾಂತಾರಾ ಹಿಂದಿ ಆವೃತ್ತಿಯು ಎರಡನೇ ದಿನದಲ್ಲಿ ಭಾರಿ ಬೆಳವಣಿಗೆಯನ್ನು ಕಂಡಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಎರಡು ದಿನಗಳಲ್ಲಿ 4.2 ಕೋಟಿ ರೂ. ಗಳಿಸಿದೆ.
ಇದನ್ನೂ ಓದಿ :https://vijayatimes.com/pm-kisan-samman-sammelan-2022/
ತೆಲುಗು ರಾಜ್ಯಗಳಲ್ಲಿ, ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಪೋರ್ಟಲ್ ಆಂಧ್ರ ಬಾಕ್ಸ್ ಆಫೀಸ್ ಪ್ರಕಾರ, ಚಿತ್ರದ ತೆಲುಗು ಆವೃತ್ತಿಯು ಎರಡು ದಿನಗಳಲ್ಲಿ ಸುಮಾರು 10 ಕೋಟಿ ರೂ. ಗಳಿಸಿದೆ.
ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಜೊತೆಗೆ ಬಿಡುಗಡೆಯಾದ ಕಾಂತಾರ ಸಿನಿಮಾವೂ ಗಲ್ಲಾಪೆಟ್ಟಿಗೆಯಲ್ಲಿ ಪೈಪೋಟಿ ಕೊಡುವುದರ ಜೊತೆಗೆ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.

ಕೇವಲ ಕನ್ನಡ ಸಿನಿಪ್ರೀಯರ ಮನಸ್ಸನ್ನು ಗೆಲ್ಲುವುದಲ್ಲದೇ, ಪರಭಾಷಾ ಸಿನಿಪ್ರೇಮಿಗಳ ಮನವನ್ನು ಕೂಡ ಗೆದ್ದು ಬೀಗುತ್ತಿರುವುದು ನಿಜಕ್ಕೂ ಖುಷಿ ಸಂಗತಿ.
ಕಾಂತಾರ ಚಿತ್ರದಲ್ಲಿ ನಟ ಕಿಶೋರ್, ಅಚ್ಯುತ್ ಕುಮಾರ್, ನಾಯಕಿ ಸಪ್ತಮಿ ಗೌಡ ಮತ್ತು ಪ್ರಮೋದ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದ ಹೊರತಾಗಿ ರಿಷಬ್ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ.
ಇದನ್ನೂ ಓದಿ : https://vijayatimes.com/pm-kisan-samman-sammelan-2022/
ಪರಭಾಷಾ ಚಿತ್ರರಂಗದ ನಟ-ನಟಿಯರಾದ ಧನುಷ್, ಪ್ರಭಾಸ್, ಶಿಲ್ಪಾ ಶೆಟ್ಟಿ ಮುಂತಾದ ಸೆಲೆಬ್ರಿಟಿಗಳು ಕನ್ನಡದ ಕಾಂತಾರ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ.