Bengaluru : ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶಿಸಿರುವ ಕಾಂತಾರ (Kantara Near To KGF 2) ಸಿನಿಮಾ ಪ್ರೇಕ್ಷಕರ ಮನಸೂರೆಗೊಂಡು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಕೇವಲ ಕನ್ನಡವಷ್ಟೇ ಅಲ್ಲದೇ, ಕಾಂತಾರದ ಇತರ ಡಬ್ಬಿಂಗ್ ಆವೃತ್ತಿಗಳು ಕೂಡ ಉತ್ತಮ ಗಳಿಕೆ ಮಾಡುತ್ತಿವೆ.

ಕೇವಲ ಭಾರತದಲ್ಲಿ ಮಾತ್ರವಲ್ಲದೇ, ಅಂತಾರಾಷ್ಟ್ರೀಯ (Kantara Near To KGF 2) ಮಾರುಕಟ್ಟೆಯಲ್ಲೂ ಈ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಪರಿಣಾಮವಾಗಿ,
ಕಾಂತಾರ ಚಿತ್ರವು ಈಗ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಕನ್ನಡ ಚಲನಚಿತ್ರವಾಗಿದೆ. ಆದಷ್ಟು ಶೀಘ್ರವೇ, ಕೆಜಿಎಫ್-1 ಗಳಿಕೆಯನ್ನೂ ಹಿಂದಿಕ್ಕುವ ನಿರೀಕ್ಷೆಯಿದೆ.
ಇನ್ನು, ಕಾಂತಾರ ಕನ್ನಡ ಆವೃತ್ತಿಯಲ್ಲಿ ಬ್ಲಾಕ್‌ಬಸ್ಟರ್(Blockbuster) ಆದ ನಂತರ, ರಿಷಬ್ ಶೆಟ್ಟಿ ಕಾಂತಾರ ಸಿನಿಮಾವನ್ನು ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡರು.
ಇದು ತಯಾರಕರು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಾಗಿ ಹೊರಹೊಮ್ಮಿದ್ದು, ಈಗ ಇತಿಹಾಸ.
https://fb.watch/ghX4znH5C1/ ಹೊಸ ಪಿಂಚಣಿ ಯೋಜನೆ ಬದಲು ಹಳೆ ಪಿಂಚಣಿ ಪದ್ಧತಿಗೆ ಒತ್ತಾಯ!
ಈಗಾಗಲೇ ದೊಡ್ಡ ವಾಣಿಜ್ಯ ಯಶಸ್ಸನ್ನು ಗಳಿಸಿರುವ ಈ ಡಬ್ಬಿಂಗ್ ಆವೃತ್ತಿಗಳು, ಚಿತ್ರಕ್ಕೆ ದೊಡ್ಡಮಟ್ಟದ ಉತ್ತೇಜನವನ್ನು ನೀಡಿದ್ದು ಇದರ ಪರಿಣಾಮವಾಗಿ ಸಿನಿಮಾ ಈಗ ಜಾಗತಿಕವಾಗಿ 200 ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ.
ಕಾಂತಾರ ಸಿನಿಮಾದ ಇತ್ತೀಚಿನ ಕಲೆಕ್ಷನ್ ಅಪ್‌ಡೇಟ್ ಕುರಿತು ಮಾತನಾಡುವುದಾದರೆ,
ಕಾಂತಾರ ಬಿಡುಗಡೆಯಾದ 20 ದಿನಗಳ ನಂತರ, ಎಲ್ಲಾ ಭಾಷೆಗಳಲ್ಲೂ ಸೇರಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 171.41 ಕೋಟಿ ಗಳಿಸಿದೆ. ಇದರೊಂದಿಗೆ, ಈ ಚಿತ್ರವು ಜಾಗತಿಕವಾಗಿ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದೆ.

ಈ ಮೂಲಕ, ವಿಕ್ರಾಂತ್ ರೋಣ, ಜೇಮ್ಸ್ ಮತ್ತು 777 ಚಾರ್ಲಿಯನ್ನು ದೊಡ್ಡ ಅಂತರದಿಂದ ಹಿಂದಿಕ್ಕಿದೆ. ಅತ್ಯಧಿಕ ಗಳಿಕೆ ಮಾಡಿದ ಚಿತ್ರಗಳಲ್ಲಿ,
ಮೊದಲ ಎರಡು ಸ್ಥಾನಗಳಲ್ಲಿ ಕೆಜಿಎಫ್ ಚಾಪ್ಟರ್-1 (240 ಕೋಟಿ) ಮತ್ತು ಕೆಜಿಎಫ್ ಚಾಪ್ಟರ್-2 (1230 ಕೋಟಿ) ಇದೆ. ಬಿಡುಗಡೆಯಾಗಿ 20 ದಿನಗಳ ನಂತರವೂ ಕಾಂತಾರ ನಾಗಲೋಟ ಮುಂದುವರಿದಿದ್ದು,
ಇದನ್ನೂ ಓದಿ : https://vijayatimes.com/health-tips-of-fruits/
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಜೋರಾಗಿಯೇ ಇದೆ. ಸಿನಿಪಂಡಿತರ ಪ್ರಕಾರ, ಕನಿಷ್ಠ ಪಕ್ಷ ಇನ್ನೂ ಒಂದೆರಡು ವಾರಗಳವರೆಗೆ ಕಾಂತಾರದ ಅಬ್ಬರ ಕಡಿಮೆಯಾಗುವ ಸಾಧ್ಯತೆಯಿಲ್ಲ. ಹಾಗಾಗಿ,
ಈ ಚಿತ್ರವು ಕೆಜಿಎಫ್-1ರ ಗಳಿಕೆಯಾದ 240 ಕೋಟಿಯನ್ನೂ ಮೀರಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ 2ನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮುವ ಸಾಧ್ಯತೆಯಿದೆ.
- ಪವಿತ್ರ