vijaya times advertisements
Visit Channel

ಕಾಂತಾರ OTT ಬೇಸರ : ನಿಮ್ಮ ಹಣದ ಆಸೆಗೆ ಚಿತ್ರದಲ್ಲಿ ‘ವರಾಹ ರೂಪಂ ಹಾಡು’ ಇಲ್ಲದ್ದಂತೆ ಮಾಡಿದ್ದೀರಿ!

kantara

Bengaluru : ಕನ್ನಡ ಚಿತ್ರರಂಗದ ಯಶಸ್ಸಿನ ಸಿನಿಮಾ, ದಾಖಲೆಗಳ ಸರದಾರ ಎಂಬ ಮೆಚ್ಚುಗೆ, ಶ್ಲಾಘನೆ ಪಡೆಯುತ್ತಿರುವ ಕಾಂತಾರ(Kantara OTT Fans) ಚಿತ್ರ ಇದೀಗ ಓಟಿಟಿ ವೇದಿಕೆಯಲ್ಲಿ ಇಂದಿನಿಂದ ಪ್ರದರ್ಶನ ಕಾಣುತ್ತಿದೆ.

kantara

ಆದ್ರೆ, ವಿವಾದಕ್ಕೆ ಸಿಲುಕಿದ ಕಾಂತಾರ ವಿವಾದದ ಬಳಿಕ ತನ್ನ ರೂಪವನ್ನು ಕಳೆದುಕೊಂಡಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು, ಕಾಂತಾರ ಚಿತ್ರ ಈಗ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಆಗುತ್ತಿದ್ದು, ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಬೇಸರ ಹೊರಹಾಕುತ್ತಿದ್ದಾರೆ.

ಅಷ್ಟಕ್ಕೂ ವೀಕ್ಷಕರ ಬೇಸರಕ್ಕೆ ಕಾರಣವೇನು ಎಂದು ನೋಡುವುದಾದರೆ,

ಈ ಹಿಂದೆ ಕಾಂತಾರ ಚಿತ್ರತಂಡ ‘ವರಾಹ ರೂಪಂ’(Varaha Roopam) ಹಾಡನ್ನು ತೈಕುಡಂ ಬ್ರಿಡ್ಜ್ ಎಂಬ ಮ್ಯೂಸಿಕ್ ಸಂಸ್ಥೆ ತಾವು ನಿರ್ಮಿಸಿದ ನವರಸಂ ಮ್ಯೂಸಿಕ್ ನಿಂದ ವರಾಹ ರೂಪಂ ಹಾಡನ್ನು ತಯಾರಿಸಿಕೊಂಡಿದ್ದಾರೆ ಎಂದು ಆರೋಪಿಸಿತ್ತು.

https://youtu.be/ll7iOphVDBw

ಈ ಆರೋಪವನ್ನು ಎಸಗಿದ ತೈಕುಡಂ ಬ್ರಿಡ್ಜ್ ತಂಡ, ಇದನ್ನು ನ್ಯಾಯಲಯದ ಮೂಲಕ ನಾವು ಹೋರಾಡುತ್ತೇವೆ ಎಂದು ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ತಂಡಕ್ಕೆ ಎಚ್ಚರಿಕೆಯನ್ನು ನೀಡಿತು.

15 ದಿನಗಳ ಕಾಲಾವಕಾಶ ನೀಡಿದ ತೈಕುಡಂ ಬ್ರಿಡ್ಜ್ ತಂಡ, ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ತಂಡದವರು ಚಿತ್ರದ ಪ್ರಾರಂಭದಲ್ಲಿ ವರಾಹ ರೂಪಂ ಹಾಡು ಬರುವ ಮುನ್ನ ನಮಗೆ ಕ್ರೆಡಿಟ್ಸ್ ಕೊಟ್ಟರೆ ಒಳಿತು,

ಇಲ್ಲದಿದ್ದರೆ ನಾವು ನ್ಯಾಯಾಲಯದ ಮೂಲಕ ಹೋರಾಡುತ್ತೇವೆ ಎಂಬ ಎಚ್ಚರಿಕೆ ನೀಡಿತು.

ಇದ್ಯಾವ ಆರೋಪಗಳಿಗೂ ಕಿವಿಗೊಡದ ಕಾಂತಾರ ಚಿತ್ರತಂಡದ ವಿರುದ್ಧ ಸಿಡಿದೆದ್ದ ತೈಕುಡಂ ಬ್ರಿಡ್ಜ್ ತಂಡ ಕೇರಳ ಹೈಕೋರ್ಟ್ ಮೂಲಕ ತಮ್ಮ ನಿಲುವನ್ನು ಸಾಧಿಸಿಕೊಂಡಿದೆ.

OTT

ವರಾಹ ರೂಪಂ ಹಾಡನ್ನು ಚಿತ್ರದಿಂದ ತೆಗೆದು ಹಾಕಿಸಿದೆ ಹಾಗೂ ಇತರೆ ಮ್ಯೂಸಿಕ್ ಆಪ್ಗಳಲ್ಲಿ ಕೂಡ ತೆಗೆದು ಹಾಕಿಸಿದೆ.

ಸದ್ಯ ಇದು ತೈಕುಡಂ ಬ್ರಿಡ್ಜ್ ತಂಡಕ್ಕೆ ಗೆಲುವು ಎಂದು ಕಾಣಿಸಿದೆ. ಆದ್ರೆ, ಈ ಒಂದು ನಿಲುವು ಕಾಂತಾರ ಚಿತ್ರದ ಅನೇಕ ಅಭಿಮಾನಿಗಳನ್ನು ಕೆಂಡಾಮಂಡಲವಾಗಿಸಿದೆ.

ಇದನ್ನೂ ಓದಿ : https://vijayatimes.com/kantara-beats-kgf-2-record/

ಕಾಂತಾರ ಪ್ರಸ್ತುತ OTT ಪ್ಲಾಟ್‌ಫಾರ್ಮ್‌ನಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಕಿ

ಲಾಡಿ ನಟ, ಪ್ರತಿಭಾವಂತ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಅರಳಿದ ಕಾಂತಾರ ಚಿತ್ರಮಂದಿರಗಳಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನವು ಕಂಡು, ಇದೀಗ OTTಗೆ ಹೆಜ್ಜೆಯಿಟ್ಟಿದೆ.

Blockbuster cinema

“ವರಾಹ ರೂಪಂ” ಹಾಡಿನ ವಿವಾದ ಹುಟ್ಟುಹಾಕಿದವರ ಅರ್ಜಿಯ ಪ್ರಕಾರ, ಕಾಂತಾರ ಸಿನಿಮಾವನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಥಿಯೇಟರ್‌ಗಳಲ್ಲಿ ಪ್ರದರ್ಶಿಸಲು,

ವರಾಹ ರೂಪಂ ಹಾಡನ್ನು ಪ್ರದರ್ಶಿಸಲು ನಮ್ಮ ಥೈಕ್ಕುಡಮ್ ಬ್ರಿಡ್ಜ್ ತಂಡದ ಅನುಮತಿ ಪಡೆಯಬೇಕು ಎಂದು ತಿಳಿಸಿತ್ತು.

ಇದನ್ನೂ ಓದಿ : https://vijayatimes.com/10k-google-employees/

ಕೇರಳದ ನ್ಯಾಯಾಲಯವು ಬ್ಯಾಂಡ್ ಪರವಾಗಿ ತೀರ್ಪು ನೀಡಿದ್ದು, ಇದೀಗ ಅಮೆಜಾನ್ ಸೇರಿದಂತೆ ಯೂಟ್ಯೂಬ್, ಸ್ಪಾಟಿಫೈ ಮತ್ತು ಜಿಯೋಸಾವನ್ ಯಾವುದೇ ವೇದಿಕೆಯಲ್ಲೂ ವರಾಹ ರೂಪಂ ಹಾಡು ಲಭ್ಯವಿಲ್ಲ!

ಬ್ಯಾಂಡ್‌ನ ಅನುಮೋದನೆಯಿಲ್ಲದೆ ಆ ಹಾಡನ್ನು ಪ್ಲೇ ಮಾಡುವುದನ್ನು ಕೋರ್ಟ್ ನಿ‍ಷೇಧಿಸಿದೆ.

Kantara

ಈಗ ಕಾಂತಾರ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದ್ದರೂ ಕೂಡ ಸಿನಿಮಾ ನೋಡಿದ ಪ್ರೇಕ್ಷಕರು ಅಸಮಾಧಾನಗೊಂಡಿದ್ದಾರೆ.

ಕಾರಣ, ಚಿತ್ರದ ಪ್ರಾರಂಭದಲ್ಲಿದ್ದ ವರಾಹ ರೂಪಂ ಹಾಡು ಈಗ ಇಲ್ಲ! ಹಲವಾರು ನೆಟಿಜನ್‌ಗಳು ಈ ಕಾರಣವನ್ನು ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್ಬುಕ್, ಟ್ವಿಟರ್‌ ನಲ್ಲಿ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನೋಡಲು : https://twitter.com/AlisonajayKumar/status/1595522541493579777?s=20&t=W1F-FkY3qprY5nyXZQrH_w

ಥೈಕ್ಕುಡಮ್ ಬ್ರಿಡ್ಜ್ ತಂಡದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು, ಈಗ KantaraOnPrime, AmazonPrimeVideo ನಲ್ಲಿ ಎಂಬ ಹ್ಯಾಶ್ ಟ್ಯಾಗ್ ಬಳಸಿ ಕಾಂತಾರದ ಕ್ಲೈಮ್ಯಾಕ್ಸ್ ಅನ್ನು ಮತ್ತೊಮ್ಮೆ ವೀಕ್ಷಿಸಿದೆ.

ಆದ್ರೆ, ‘ವರಾಹ ರೂಪಂ’ ಹಾಡಿಲ್ಲ! ಇದಕ್ಕೆ @thaikudambridge ಅವರಿಗೆ ಧನ್ಯವಾದಗಳು.

ಟ್ವೀಟ್ ನೋಡಲು : https://twitter.com/Charan06740540/status/1595513047246045185?s=20&t=-zmim7XTO8gIocpKOvZiMQ

ನಿಮ್ಮ ಹಣದ ದಾಹಕ್ಕೆ, 15 ನಿಮಿಷಗಳ ಬಹು ಮನರಂಜನೆಯನ್ನು,

ಆನಂದವನ್ನು ಕೋಟ್ಯಾಂತರ ವೀಕ್ಷಕರಿಗೆ ನೀಡಿದ್ದ ಭಾಗವನ್ನು ನೀವು ಕಿತ್ತುಕೊಂಡಿದ್ದೀರಾ, ನಿಮಗೆ ಧಿಕ್ಕಾರ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Latest News

ದೇಶ-ವಿದೇಶ

ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

“ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ

ರಾಜಕೀಯ

“ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ

ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್  ಎಂಬುದು ಜನರೇ ನೀಡಿರುವ ಬಿರುದು,

ರಾಜಕೀಯ

‘ಇದು ನನ್ನ ಸವಾಲು, ಕಾಂಗ್ರೆಸ್ಸಿಗರೇ ನಿಮ್ಮ ರಾಹುಲ್ ಗಾಂಧಿಯ ಒಂದೇ ಒಂದು ಸಾಧನೆಯನ್ನು ಹೇಳಿ ನೋಡೋಣ’ : ಸಿ.ಟಿ ರವಿ

ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaih) ಅವರ ವಿರುದ್ಧ ಸಿಡಿದೇಳುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(C.T.Ravi),

ದೇಶ-ವಿದೇಶ

ಭಾರತ್ ಜೋಡೋ ಯಾತ್ರೆಯಲ್ಲಿ ‘ಮೋದಿ, ಮೋದಿ’ ಎಂದು ಕೂಗಿದವರಿಗೆ ಮುತ್ತು ಕೊಟ್ಟ ರಾಹುಲ್ ಗಾಂಧಿ

ಜನ ಸಮೂಹ ಕೂಗುತ್ತಿದ್ದ ಜೈಕಾರಗಳನ್ನು ಆಲಿಸಿದ ರಾಹುಲ್ ಗಾಂಧಿ ಅವರ ಬಳಿ ಮೊದಲು ಕೈಬೀಸುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.