Bengaluru : ಕನ್ನಡ ಚಿತ್ರರಂಗದಲ್ಲಿ(Kannada Film Industry) ಹೆಚ್ಚು ನಿರೀಕ್ಷೆಗಳಿಲ್ಲದೆ ಪ್ರೇಕ್ಷಕರ ಮುಂದೆ ಬಂದ ಸಂವೇದನಾಶೀಲ ಸಿನಿಮಾ ಕಾಂತಾರ(Kantara To OTT), ಪ್ರೇಕ್ಷಕರ ಮನಗೆದ್ದ ಪರಿ ಎಲ್ಲರಿಗೂ ತಿಳಿದೇ ಇದೆ. ಬಿಡುಗಡೆಯಾಗಿ ಒಂದು ತಿಂಗಳು ಮೀರಿದರೂ ಕಾಂತಾರದ ಅಬ್ಬರ ಇನ್ನೂ ಕಡಿಮೆಯಾಗಿಲ್ಲ, ಅಕ್ಷರಶಃ ಗಲ್ಲಾಪೆಟ್ಟಿಗೆಯನ್ನಂತೂ ಸೂರೆಯೇ ಮಾಡಿದೆ.
ಈ ಸಿನಿಮಾ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ನಿರೀಕ್ಷೆಗೂ ಮೀರಿದ ಗಳಿಕೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿತು.
ಅದರಲ್ಲೂ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ, ಹಾಕಿದ ಬಂಡವಾಳಕ್ಕೆ ಕೇವಲ ಎರಡು ಮೂರು ದಿನಗಳಲ್ಲಿಯೇ ಲಾಭ ನೀಡಿತ್ತು. ಇನ್ನೂ ಸಹ ಕಾಂತಾರದ ನಾಗಾಲೋಟ ಮುಂದುವರಿದಿದೆ.
ಕಾಂತಾರ ಸಿನಿಮಾ ಬಿಡುಗಡೆಗೂ ಮುನ್ನ ಅಷ್ಟೇನೂ ಸುದ್ದಿಯಲ್ಲಿರಲಿಲ್ಲ. ಬಿಡುಗಡೆಯಾಗಿ ಸ್ವಲ್ಪ ಮಟ್ಟಿಗೆ ಜನ ಮೆಚ್ಚುಗೆ ದೊರಕಿದ ನಂತರವೇ ಚಿತ್ರದ ಯೂನಿಟ್ ಸದಸ್ಯರು ಪ್ರಚಾರವನ್ನು ಪ್ರಾರಂಭಿಸಿದರು, ಸಿನಿಮಾ ದಿನ ಕಳೆದಂತೆ ಸುದ್ದಿ ಮಾಡಲಾರಂಭಿಸಿತು.
ಇನ್ನು, ಸಿನಿಮಾ ನೋಡಿದ ಜನರ ಮೆಚ್ಚುಗೆಯ ಮೂಲಕವೇ ಪ್ರಚಾರ ಪಡೆದ ಕಾಂತಾರ ಬಾಕ್ಸಾಫೀಸ್(Kantara To OTT) ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿ ಸಂಚಲನ ಮೂಡಿಸಿದೆ ಎಂದೇ ಹೇಳಬಹುದು.
ಇದನ್ನೂ ಓದಿ : https://vijayatimes.com/pak-cricketers-mention-virat/
ತೆಲುಗಿನಲ್ಲಿ ನಿರ್ಮಾಪಕ ಅಲ್ಲು ಅರವಿಂದ್ ಗೆ ಈಗಾಗಲೇ 20 ಕೋಟಿಯವರೆಗೂ ಲಾಭ ತಂದುಕೊಟ್ಟಿರುವ ಈ ಚಿತ್ರ 50 ಕೋಟಿಯವರೆಗೂ ಗ್ರಾಸ್ ಕಲೆಕ್ಷನ್ ಪಡೆಯುವ ಲೆಕ್ಕಾಚಾರವೂ ಇದೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ಹಿಂದಿಯಲ್ಲಿಯೂ ಕಾಂತಾರ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತಿದ್ದು, ಸದ್ಯ ಬೇರೆ ಭಾಷೆಗಳಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ.
ಇದನ್ನೂ ಓದಿ : https://youtu.be/Uba9-oFEVvg PROMO | RTO ಸೇಲಾಗಿದೆ ! ಯಾರಿಗೆ? ಬ್ರೋಕರ್‌ಗಳಿಗೆ
ವಾರಾಂತ್ಯ ಬಂದರೆ ಸಾಕು ಕಾಂತಾರ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಹೀರೋಗಳ ಚಿತ್ರಗಳು ಪೈಪೋಟಿ ನೀಡಿದರೂ ಕಾಂತಾರದ ಕಲೆಕ್ಷನ್ ಕಡಿಮೆಯಾಗುತ್ತಿಲ್ಲ.
ಹೀಗೆ, ಇಲ್ಲಿಯವರೆಗೂ ಕಾಂತಾರ ಬಾಕ್ಸಾಫೀಸ್‌ನಲ್ಲಿ(Kantara Box Office) ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಪ್ರತಿದಿನ ಕೋಟಿ ಕೋಟಿ ಕಲೆಕ್ಷನ್ ಹಣ ಬಾಚುತ್ತಿದೆ.
ಹೆಚ್ಚಿನ ರಾಜ್ಯಗಳಲ್ಲಿ ಕಾಂತಾರ ಟ್ರೆಂಡಿಂಗ್ ನಂ.1 ಆಗಿದ್ದು, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಚಿತ್ರವು ಎಲ್ಲಾ ಭಾಷೆಗಳಲ್ಲಿಯೂ ಯಶಸ್ವಿಯಾಗಿ ಓಡುತ್ತಿದೆ.
ಸದ್ಯ, ಕಾಂತಾರ ಸಿನಿಮಾ 300 ಕೋಟಿ ಕ್ಲಬ್ ಸೇರಿದ್ದು, ತಯಾರಕರು ಚಿತ್ರವನ್ನು OTT ಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
ಆದರೆ ಸಿನಿಪಂಡಿತರ ಪ್ರಕಾರ(Cini Experts), ಕಾಂತಾರ ಚಿತ್ರವನ್ನು OTT ಯಲ್ಲಿ ಈಗಲೇ ಬಿಡುಗಡೆ ಮಾಡದಿದ್ದರೆ, ಸುಲಭವಾಗಿ ಇನ್ನೂ 100 ಕೋಟಿ ಗಳಿಸುವ ಸಾಧ್ಯತೆಯಿದೆ ಎಂಬ ಲೆಕ್ಕಾಚಾರವಿದೆ.
ಕಾಂತಾರ ಸಿನಿಮಾ ನವೆಂಬರ್ 4 ರಿಂದಲೇ OTT ನಲ್ಲಿ ಸ್ಟ್ರೀಮ್ ಆಗಲಿದೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡುತ್ತಿತ್ತು.
ಇದನ್ನೂ ಓದಿ : https://vijayatimes.com/siddaramaiah-slams-bc-nagesh/
ಆದರೆ ಥಿಯೇಟರ್ ಗಳಲ್ಲಿ ಇನ್ನೂ ಚೆನ್ನಾಗಿಯೇ ಓಡುತ್ತಿರುವ, OTT ಯಲ್ಲಿ ಚಲನಚಿತ್ರವನ್ನು ಕನಿಷ್ಟ ಪಕ್ಷ ಒಂದು ತಿಂಗಳ ನಂತರ ಬಿಡುಗಡೆ ಮಾಡುವುದು ಸೂಕ್ತ ಎನ್ನುವುದು ತಜ್ಞರು ಮತ್ತು ಪ್ರೇಕ್ಷಕರು ಅಭಿಪ್ರಾಯ.
- ಪವಿತ್ರ