Bengaluru : ಕಾಂತಾರ 2 (Kanthara Part1 come 2024)ಚಿತ್ರದ ತಯಾರಿ ಬಗ್ಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishab Shetty) ಅವರು ಕೆಲ ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಕಾಂತಾರ 2 ಇದು ಪ್ರಿಕ್ವೆಲ್ ಆಗಿರುತ್ತದೆ! ಸರಿಯಾಗಿ ಹೇಳಬೇಕು ಅಂದ್ರೆ ನೀವು ನೋಡಿದ್ದು ಕಾಂತಾರ ಭಾಗ 1 ಅಲ್ಲ ಬದಲಾಗಿ ಕಾಂತಾರ ಭಾಗ 2, ನೀವು ಕಾಂತಾರ ಭಾಗ 1 (Kanthara 1) ಅನ್ನು
ಮುಂದಿನ ವರ್ಷ 2024 ರಲ್ಲಿ ತೆರೆ ಮೇಲೆ ನೋಡಬಹುದು ಎಂದು ನಟ ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಹಾಗೂ ಸಿನಿ ಪ್ರೇಕ್ಷಕರಿಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿರುವ ಕಾಂತಾರ ಚಿತ್ರವು ಪ್ರಿಕ್ವೆಲ್ (Prequel) ಅನ್ನು ಪಡೆಯಲಿದೆ ಎಂದು ರಿಷಬ್ ಹೇಳಿರುವುದು ಇದೀಗ ಸಿನಿ ಪ್ರೇಕ್ಷಕರಲ್ಲಿ ಕೌತುಕ ಹೆಚ್ಚಿಸಿದೆ ಎಂದೇ ಹೇಳಬಹುದು.
ಕಳೆದ ವರ್ಷ ಸೆಪ್ಟಂಬರ್ (September) ತಿಂಗಳಲ್ಲಿ ಬಿಡುಗಡೆಯಾದ ಕಾಂತಾರ ಭಾಗ 1 ಚಿತ್ರವು, ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಪೂರೈಸಿದ ಹಿನ್ನೆಲೆ ಆ ಯಶಸ್ಸನ್ನು ಆಚರಿಸಲು ಬೆಂಗಳೂರಿನಲ್ಲಿ ಆಯೋಜಿಸಲಾದ
ಸಮಾರಂಭದಲ್ಲಿ ಮಾತನಾಡಿದ ನಟ ರಿಷಬ್,
ಇದನ್ನೂ ಓದಿ: ಪುನೀತ್ ರಸ್ತೆ ನಾಮಕರಣ ಪ್ಲೆಕ್ಸ್‌ನಲ್ಲಿ ಪುನೀತ್ ಪೋಟೋ ಮಾಯ ; ಆಭಿಮಾನಿಗಳ ಆಕ್ರೋಶ
ಕಾಂತಾರ 2 ಖಂಡಿತ ಬೇರೆ ರೀತಿಯೇ ಇರಲಿದೆ ಮತ್ತು 2024 ರಲ್ಲಿ ಕಾಂತಾರ ೨ ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಹೇಳಿದರು. ನಾನು ಹೇಳುವುದೇನು ಅಂದ್ರೆ ಕಾಂತಾರ ಚಿತ್ರದಲ್ಲಿ ಸಿನಿ ಪ್ರೇಕ್ಷಕರು ವಾಸ್ತವವಾಗಿ
ನೋಡಿದ್ದು ಎರಡನೇ ಭಾಗ! ಕಾಂತಾರ 2 ಮೂಲ ಕಥೆಯ ಪೂರ್ವಭಾವಿಯಾಗಿರಲಿದ್ದು, ಇದು ಮೊದಲ ಭಾಗವಾಗಿದೆ ಎಂದು ಹೇಳಿದರು. ಸದ್ಯ ನಟ ರಿಷಬ್ ಶೆಟ್ಟಿ ಅವರು, ಕಾಂತಾರ 2 ಚಿತ್ರದ ಸ್ಕ್ರಿಪ್ಟಿಂಗ್ ವಿಭಾಗದಲ್ಲಿ
ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಚಿತ್ರ ಕಥೆಯ ಕೆಲಸಗಳನ್ನು ಈಗಾಗಲೇ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ.
ಕಾಂತಾರ ಚಿತ್ರಕ್ಕೆ ಅಪಾರ ಪ್ರೀತಿ ಮತ್ತು ಬೆಂಬಲ ನೀಡಿದ ನಮ್ಮೆಲ್ಲಾ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಪರಮಾತ್ಮನ ಆಶೀರ್ವಾದದಿಂದ,
ಚಿತ್ರವು ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ ಮತ್ತು ಚಿತ್ರದ ಪೂರ್ವಭಾಗವನ್ನು ಘೋಷಿಸಲು ನಾನು ಈ ಸಮಯವನ್ನು ಅವಕಾಶವನ್ನಾಗಿ ಬಳಸಿಕೊಳ್ಳುತ್ತೇನೆ.
ಚಿತ್ರೀಕರಣದ ವೇಳೆ ನನ್ನ ಮನಸ್ಸಿಗೆ ಈ ಐಡಿಯಾ ಬಂತು. ಏಕೆಂದರೆ ಕಾಂತಾರ ಇತಿಹಾಸವು ಅದರ ಆಳವನ್ನು ಹೊಂದಿದೆ. ಪ್ರಸ್ತುತ, ನಾವು ಹೆಚ್ಚಿನ ವಿವರಗಳನ್ನು ಹುಡುಕುವ ಮುಂಚೂಣಿಯಲ್ಲಿದ್ದೇವೆ.
ಸಂಶೋಧನೆಯು ಇನ್ನೂ ನಡೆಯುತ್ತಿರುವುದರಿಂದ, ಚಿತ್ರದ ಬಗ್ಗೆ ಹೆಚ್ಚು ವಿವರಗಳನ್ನು ಸದ್ಯ ಬಹಿರಂಗಪಡಿಸುವುದು ಕಷ್ಟಸಾಧ್ಯ (Kanthara Part1 come 2024) ಎಂದು ರಿಷಬ್ ಹೇಳಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಮೊದಲ ಭಾಗವು ಜಾಗತಿಕವಾಗಿ 400 ಕೋಟಿ ಗಳಿಸಿ, ಕರ್ನಾಟಕದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿತು. ಕಾಂತಾರ ಚಿತ್ರವನ್ನು ದೇಶ-ವಿದೇಶದ
ಸಿನಿ ಪ್ರೇಕ್ಷಕರು ಒಪ್ಪಿ, ಮೆಚ್ಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ(Social Media) ಚಿತ್ರಕ್ಕೆ ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ಸದ್ಯ ಕಾಂತಾರ 2ನೇ ಭಾಗ ಹೇಗಿರಲಿದೆ? ಯಾವೆಲ್ಲಾ ದಾಖಲೆಗಳನ್ನು ಪುಡಿ ಮಾಡಲಿದೆ
ಎಂಬುದನ್ನು 2024 ರವರೆಗೂ ಕಾದು ನೋಡಬೇಕಿದೆ.