Bengaluru: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ (B Y Vijayendra) ಆಯ್ಕೆಯಾಗುತ್ತಿದ್ದಂತೆ (Kar BJP President – BY Vijayendra) ರಾಜ್ಯ ಕೇಸರಿ ಕಾರ್ಯಕರ್ತರದಲ್ಲಿ
ರಣೋತ್ಸಾಹ ಮುಗಿಲು ಮುಟ್ಟಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ರಣತಂತ್ರ ರೂಪಿಸುತ್ತಿದ್ದು, ಆಡಳಿತರೂಢ ಕಾಂಗ್ರೆಸ್ಗೆ
(Congress) ಸೆಡ್ಡು ಹೊಡೆಯಲು ಬಿಜೆಪಿ ಸಜ್ಜಾಗಿದೆ. 25ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮಹತ್ವದ ಹೊಣೆಗಾರಿಕೆ ಇದೀಗ ವಿಜಯೇಂದ್ರ ಹೆಗಲಿಗೆ ಬಿದ್ದಿದೆ.

ಚಿಕ್ಕ ವಯಸ್ಸಿನಲ್ಲೇ ಸಿಕ್ಕಿರುವ ದೊಡ್ಡ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವ ಅವಕಾಶ ವಿಜಯೇಂದ್ರ
ಮುಂದಿದೆ. ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಿಸಿದರೆ, 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ
ಅವಕಾಶವು ವಿಜಯೇಂದ್ರ (Kar BJP President – BY Vijayendra) ಮುಂದಿದೆ.
ಆದರೆ ರಾಜ್ಯ ಬಿಜೆಪಿಯಲ್ಲಿ (BJP) ಬಣ ರಾಜಕೀಯ ಜೋರಾಗಿದ್ದು, ಅದೆಲ್ಲವನ್ನೂ ನಿಭಾಯಿಸಿಕೊಂಡು, ಅಸಮಾಧಾನಗೊಂಡಿರುವ ಹಿರಿಯ ನಾಯಕರನ್ನು, ಸಂಘ ಪರಿವಾರದ ಪ್ರಮುಖರನ್ನು
ವಿಶ್ವಾಸಕ್ಕೆ ತೆಗೆದುಕೊಂಡುವ ಹೋಗುವ ನಿಟ್ಟಿನಲ್ಲಿ ವಿಜಯೇಂದ್ರ ಮುಂದೆ ಅನೇಕ ಸವಾಲುಗಳಿವೆ. ಅವುಗಳೆಂದರೆ,

- ರಾಜ್ಯದ 11 ಲೋಕಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಬಲ ಲಿಂಗಾಯತ ಸಮುದಾಯದ ಮತಗಳು ಚದುರಿ ಹೋಗದಂತೆ ಮಾಡಿ, ಲಿಂಗಾಯತ ಸಮುದಾಯ ಬಿಜೆಪಿಗೆ
ಬೆಂಬಲವಾಗಿ ನಿಲ್ಲುವಂತೆ ಮಾಡುವುದು. - ಬಿಜೆಪಿ ಪಕ್ಷದಲ್ಲಿರುವ ಹಿರಿಯ ಲಿಂಗಾಯತ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ನೇತೃತ್ವದಲ್ಲಿ ಕ್ಷೇತ್ರವಾರು ಸಂಘಟನೆ ಮಾಡುವುದು.
- ಮೈತ್ರಿ ಪಕ್ಷವಾದ ಜೆಡಿಎಸ್ನೊಂದಿಗೆ (JDS) ಉತ್ತಮ ಬಾಂಧವ್ಯ ಸಾಧಿಸುವುದು ಮತ್ತು ಜೆಡಿಎಸ್ ನಾಯಕರೊಂದಿಗೆ ಸೇರಿ ಚುನಾವಣೆ ನಡೆಸುವುದು.
- ಲೋಕಸಭಾ ಚುನಾವಣೆಯ ಟಿಕೆಟ್ (Ticket) ಹಂಚಿಕೆ.
- ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಡಗೊಳಿಸುವುದು.
- ಅಸಮಾಧಾನಗೊಂಡಿರುವ ಕೆಲ ಹಿರಿಯ ನಾಯಕರ ಮನವೊಲಿಸುವುದು.
- ಪಕ್ಷ ತೊರೆಯಲು ನಿರ್ಧರಿಸಿರುವ ಕೆಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು.
- ಕರಾವಳಿ ಭಾಗದಲ್ಲಿ ಉಂಟಾಗಿರುವ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವುದು.
- ಹೊಸ ಪದಾಧಿಕಾರಿಗಳು, ಮೋರ್ಚಾಗಳ ಅಧ್ಯಕ್ಷರ ನೇಮಕ ಮಾಡುವುದು.
- ಹಿರಿಯರಿಗೆ ಹೊಸ ಜವಾಬ್ದಾರಿಗಳನ್ನು ನೀಡಿ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು.
ಇದನ್ನು ಓದಿ: ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ