Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಇಂದು ರಾಜ್ಯ ಬಜೆಟ್ (Kar Budget 2024 Highlights) ಮಂಡಿಸಿದ್ದು, ಗ್ಯಾರಂಟಿಗಳು ಮತ್ತು ಬರದ
ನಡುವೆಯೂ ಮುಸ್ಲಿಂ ಸಮುದಾಯಕ್ಕೆ ಭರ್ಜರಿ ಕೊಡುಗೆಗಳನ್ನೇ ನೀಡಿದ್ದಾರೆ. ಮಂಗಳೂರಿನಲ್ಲಿ ವಿಶ್ವದರ್ಜೆಯ ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿಗಳ ಭರ್ಜರಿ ಅನುದಾನ
ಘೋಷಿಸಿದ್ದಾರೆ. ಇನ್ನೊಂದೆಡೆ ರಾಜ್ಯದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆಗೆ 100 ಕೋಟಿ ರೂಪಾಯಿ (Kar Budget 2024 Highlights) ನೀಡುವುದಾಗಿ ಘೋಷಿಸಿದ್ದಾರೆ.
ʻಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆʼ ಎಂಬ ಬಂಗಾರದ ಮನುಷ್ಯ ಸಿನಿಮಾ ಗೀತೆಯೊಂದಿಗೆ ಬಜೆಟ್ (Budget) ಆರಂಭಿಸಿದ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು, ತಮ್ಮ 15ನೇ ಪೂರ್ಣಾವಧಿ ಬಜೆಟ್ನಲ್ಲಿ, ಅಲ್ಪಸಂಖ್ಯಾತರು ಹಾಗೂ ಕ್ರಿಶ್ಚಿಯನ್ (Cristian) ಸಮಯದಾಯಗಳಿಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದಾರೆ.
ಬೀದರ್ (Bidar) ಶ್ರೀನಾನಕ್ ಗುರುದ್ವಾರ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂಪಾಯಿ
ವಿಶೇಷ ಅನುದಾನ, ಅಲ್ಲದೇ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗುವುದು.
100 ಹೊಸ ಮೌಲಾನಾ ಆಜಾದ್, 50 ಸಂಖ್ಯಾಬಲವುಳ್ಳ 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 100 ಸಂಖ್ಯಾಬಲವುಳ್ಳ 100 ಮೆಟ್ರಿಕ್, ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳು,
ಸ್ವಂತ ಕಟ್ಟಡವನ್ನು ಹೊಂದಿರುವ 25 ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಇದನ್ನು ಓದಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ BE ಪಾಸಾದವರಿಗೆ ಉದ್ಯೋಗಾವಕಾಶ