Loksabha Election Result 2024: ಲೋಕಸಭಾ ಚುನಾವಣೆಯ ಸದ್ಯದ ಮತ ಎಣಿಕೆಯ ವಿವರದ ಮಾಹಿತಿಯಂತೆ ಕರ್ನಾಟಕದ (Kar Loksabha Election Result) 28 ಲೋಕಸಭಾ
ಕ್ಷೇತ್ರಗಳಲ್ಲಿ BJP 19, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳ (Kar Loksabha Election Result) ಮುನ್ನಡೆಯಲ್ಲಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಮುನ್ನಡೆ
ಬಳ್ಳಾರಿ (Bellary) ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂಗೆ ಮುನ್ನಡೆಯನ್ನು ಸಾಧಿಸಿದ್ದಾರೆ. ಆದ್ರೇ ಬಿಜೆಪಿ (BJP) ಅಭ್ಯರ್ಥಿ ಶ್ರೀರಾಮುಲುಗೆ ಹಿನ್ನಡೆಯನ್ನು
ಸಾಧಿಸಿದ್ದಾರೆ. ಕನಕಪುರದಲ್ಲಿ 6ನೇ ಸುತ್ತಿಗೆ ಕೇವಲ 4,390 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ (D K Suresh) ಮುನ್ನಡೆ
ಕನಕಪುರದಲ್ಲಿ (Kanakapura) 6ನೇ ಸುತ್ತಿಗೆ ಕೇವಲ 4,390 ಲೀಡ್ ಗಳನ್ನು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪಡೆದಿದ್ದಾರೆ. ಕನಕಪುರ ಹೊರತು ಪಡಿಸಿ ಬಹುತೇಕ ಕ್ಷೇತ್ರಗಳಲ್ಲಿ ಡಿ.ಕೆ. ಸುರೇಶ್ಗೆ
ಹಿನ್ನಡೆಯಾಗಿದೆ. ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ಗೆ ಮುನ್ನಡೆ
ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆಯ 16ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಕಾಂಗ್ರೆಸ್ 155,626 ಮತ ಪಡೆದ್ರೆ, ಬಿಜೆಪಿ ಅಭ್ಯರ್ಥಿ 1,33,122 ಮತ ಪಡೆದಿದ್ದಾರೆ.
ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಮನ್ಸೂಲ್ ಅಲಿ ಖಾನ್ 22,504 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ (BJP) ಮುನ್ನಡೆ
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕೋಟ ಶ್ರೀನಿವಾಸ್ ಪೂಜಾರಿ (Srinivas Poojary)ಗೆ ಒಂದು ಲಕ್ಷ ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ
ಉತ್ತರಕನ್ನಡದ 25000 ಮತಗಳ ಮುನ್ನಡೆ ಕಾಯ್ದುಕೊಂಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwara Hegde Kageri).
ಬೆಳಗಾವಿಯಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ
ಬೆಳಗಾವಿಯಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಂಡಿದೆ. ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ (Mrunal Hebbalkar) ಮತ ಕೇಂದ್ರದಿಂದ ಹೊರಗೆ ತೆರಳಿದ್ದಾರೆ.
ನಿರಂತರ 6 ಸುತ್ತುಗಳಲ್ಲಿ ಜಗದೀಶ್ ಶೆಟ್ಟರ್ಗೆ ಮುನ್ನಡೆಯಾಗಿದೆ.
ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ (Prajwal Revanna) ಮುನ್ನಡೆ
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣಗೆ 4028 ಮತಗಳ ಮುನ್ನಡೆಯಾಗಿದೆ. ಕಾಂಗ್ರೆಸ್‌ನ ಶ್ರೇಯಸ್ ಪಟೇಲ್ (Shreyas Patil) ಗೆ ಹಿನ್ನಡೆಯನ್ನು ಸಾಧಿಸಿದ್ದಾರೆ.
ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಮುನ್ನಡೆ
ಚಿಕ್ಕೋಡಿಯಲ್ಲಿ 8ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಕಾಂಗ್ರೆಸ್ ಭರ್ಜರಿ ಮುನ್ನೆಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ (Priyank Jarakiholi) 47880
ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಮುನ್ನಡೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಮುನ್ನಡೆ. 4ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ. ಬ್ರಿಜೇಶ್ ಚೌಟಗೆ 22 ಸಾವಿರ ಮತಗಳ ಮುನ್ನಡೆ. ಕಾಂಗ್ರೆಸ್‌ನ ಪದ್ಮರಾಜ್ ಪೂಜಾರಿ
(Padmaraj Poojari)ಗೆ ಹಿನ್ನಡೆ.
ಹೆಚ್.ಡಿ.ಕುಮಾರಸ್ವಾಮಿಗೆ 1,04,000 ಮತಗಳ ಮುನ್ನಡೆ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಡಿ ಕುಮಾರಸ್ವಾಮಿ (H D Kumaraswamy) ಅವರಿಗೆ ಭಾರಿ ಮುನ್ನಡೆಯಾಗಿದೆ. ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ –2,42,805 ಮತಗಳು ಕಾಂಗ್ರೆಸ್
ಅಭ್ಯರ್ಥಿ ಸ್ಟಾರ್ ಚಂದ್ರು- 1,43,694 ಮತಗಳು ಹೆಚ್ಡಿ ಕುಮಾರಸ್ವಾಮಿ 99,121 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ (Tejaswi Surya) ಮುನ್ನಡೆ
ಬೆಂಗಳೂರು ದಕ್ಷಿಣದಲ್ಲಿ ನಾಲ್ಕನೇ ಸುತ್ತಿನಲ್ಲಿಯೂ ತೇಜಸ್ವಿ ಸೂರ್ಯ ಮುನ್ನಡೆ ಸಾಧಿಸಿದ್ದಾರೆ. 50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ತೇಜಸ್ವಿ ಸೂರ್ಯ- 92,840 ಸೌಮ್ಯ
ರೆಡ್ಡಿ- 38,914 ಬಿಜೆಪಿ ಮುನ್ನಡೆ- 53,926 ಮತಗಳನ್ನು ಪಡೆದಿದೆ.
ಇದನ್ನು ಓದಿ: ಪ್ರಕೃತಿಯ ಮಕರಂದ, ಹಚ್ಚ ಹಸಿರಾಗಿರಲು ದೇಶವೇ ಚಂದ: ಏನಂತೀರಾ?