Bengaluru: ರಾಜ್ಯದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ (Rajyotsava Award) ಪ್ರಕಟವಾಗಿದ್ದು, 68 ಜನರಿಗೆ ಈ ಬಾರಿ ಪ್ರಶಸ್ತಿ ಲಭಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟ ಮಾಡಿದೆ.

ಇನ್ನು ಈ ಬಾರಿ 68 ಮಂದಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ನೀಡಿದರೆ, ಕನ್ನಡ ನಾಡಿಗಾಗಿ ಗಣನೀಯ ಸೇವೆ ಸಲ್ಲಿಸಿದ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಗೆ ಬಾಜನರಾದ 68 ಗಣ್ಯರದಲ್ಲಿ 13 ಮಹಿಳೆಯರು, 54 ಪುರುಷರು ಹಾಗೂ ಒಬ್ಬರು ಮಂಗಳಮುಖಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಪಡೆದವರಿಗೆ 5 ಲಕ್ಷ ರೂ. ನಗದು ಹಾಗೂ 25 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ.
ಪ್ರಶಸ್ತಿ ಪಟ್ಟಿ:
ಸಂಗೀತ/ನೃತ್ಯ ಕ್ಷೇತ್ರ: ಶ್ರೀ ಶಬ್ಬೀರ್ ಅಹಮದ್, ಡಾ. ನಯನ ಎಸ್ ಮೋರೆ, ಡಾ. ಎಸ್ ಬಾಳೇಶ ಭಜ್ರಂತಿ (Dr. S Balesha Bhajantri), ಶ್ರೀಮತಿ ನೀಲಾ ಎಂ ಕೊಡ್ಲಿ
ಚಲನಚಿತ್ರ ಕ್ಷೇತ್ರ: ಬಿ. ಜನಾರ್ದನ (B Janardhan) , ಡಿಂಗ್ರಿ ನಾಗರಾಜ
ರಂಗಭೂಮಿ ಕ್ಷೇತ್ರ: ವಿಶ್ವನಾಥ್ ವಂಶಾಕೃತ ಮಠ, ಪಿ ತಿಪ್ಪೇಸ್ವಾಮಿ (P Tippeswamy), ಎಜಿ ಚಿದಂಬರ ರಾವ್ ಜಂಬೆ, ಗಂಗಾಧರ ಸ್ವಾಮಿ ಪಿ, ಹೆಚ್ಬಿ ಸರೋಜಮ್ಮ, ತಯ್ಯಬಖಾನ್ ಎಂ ಇನಾಮದಾರ,.

ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ ಕ್ಷೇತ್ರ: ಕಾಳಪ್ಪ ವಿಶ್ವಕರ್ಮ, ಮತ್ತು ಪಿ ಗೌರಯ್ಯ, ಟಿ ಶಿವಶಂಕರ್ (T Shivashankar), ಮಾರ್ಥಾ ಜಾಕಿಮೋವಿಚ್
ಯಕ್ಷಗಾನ/ಬಯಲಾಟ ಕ್ಷೇತ್ರ: ಅರ್ಗೋಡು ಮೋಹನದಾಸ್ ಶೆಣೈ (Argodu Mohandas shennai), ದಳವಾಯಿ ಸಿದ್ದಪ್ಪ ಕೇಶಪ್ಪ, ಕೆ ಲೀಲಾವತಿ ಬೈಪಾಡಿತ್ತಾಯ, ಶಿಳ್ಳಿಕ್ಯಾತರ,
ಜಾನಪದ ಕ್ಷೇತ್ರ: ಹುಸೇನಬಿ ಬುಡೆನ್ ಸಾಬ್ ಸಿದ್ದಿ, ಶಕುಂತಲಾ ದೇವಲಾನಾಯಕ ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ (Narasappa), ಗುಂಡಪ್ಪ, , ಹೆಚ್ಕೆ ಕಾರಮಂಚಪ್ಪ, ಶಂಭು ಬಳಿಗಾರ, ವಿಭೂತಿ ಚೌಡಮ್ಮ.
ಸಮಾಜಸೇವೆ ಕ್ಷೇತ್ರ: ಹುಚ್ಚಮ್ಮ ಬಸಪ್ಪ ಚೌದ್ರಿ, ನಿಜಗುಣಾನಂದ ಮಹಾಸ್ವಾಮಿಗಳು ಚಾರ್ಮಾಡಿ, ನಾಗರಾಜು ಜಿ.ಹಸನಬ್ಬ, ರೂಪಾ ನಾಯಕ್ (Roopa Nayak)