ಬೆಂಗಳೂರು, ಜ. 02: ದೇಶದಲ್ಲಿ ರೂಪಾಂತರಿ ಕೊರೊನಾ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂದು (ಜ.2) ಕೋವಿಡ್ ಲಸಿಕೆ ನೀಡುವ ಡ್ರೈ ರನ್ (ತಾಲೀಮು) ಆರಂಭವಾಗಲಿದೆ.
ಕೋವಿಡ್ ಲಸಿಕೆ ನೀಡುವಾಗ ಎದುರಾಗಬಹುದಾದ ಸಮಸ್ಯೆ, ಯೋಜನೆಯಲ್ಲಿ ಕಂಡುಬರುವ ನ್ಯೂನತೆಗಳನ್ನು ಅರಿತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದು ಉತ್ತಮ ವಿಧಾನ ಎಂದು ಹೇಳಲಾಗಿದೆ. ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಅನುಷ್ಠಾನಕ್ಕಾಗಿ ʻಕೋ-ವಿನ್ʼ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಸರ್ಕಾರದಿಂದ ನೇಮಕಗೊಂಡ ತಜ್ಞರ ಸಮಿತಿಯು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಆಕ್ಸ್‌ಫರ್ಡ್ ಸಿಒವಿಐಡಿ -19 ಲಸಿಕೆಯನ್ನು ಅನುಮೋದಿಸಲು ಶಿಫಾರಸು ಮಾಡಿದ ಒಂದು ದಿನದ ನಂತರ ಭಾರತದ ನಿಯಂತ್ರಕ ಡ್ರಗ್ಸ್ ಕಂಟ್ರೋಲ್ ಅಥಾರಿಟಿಗೆ ಶಿಫಾರಸು ಮಾಡಿದೆ.
ಇದು ದೇಶದಲ್ಲಿ ನಡೆಯುತ್ತಿರುವ ಎರಡನೇ ತಾಲೀಮು ಆಗಿದೆ. ಮೊದಲನೆಯದು ಡಿಸೆಂಬರ್ 28 ಮತ್ತು 29 ರಂದು ಅಸ್ಸಾಂ, ಆಂಧ್ರಪ್ರದೇಶ, ಪಂಜಾಬ್ ಮತ್ತು ಗುಜರಾತ್‌ನಲ್ಲಿ ನಡೆದಿತ್ತು.
ಇನ್ನೂ ಕರ್ನಾಟಕದ ಆಯ್ದ ಐದು ಜಿಲ್ಲೆಗಳಲ್ಲೂ ಕೊರೊನಾ ಲಸಿಕೆಯ ಡ್ರೈ ರನ್ ನಡೆಯಲಿದ್ದು, ಬೆಂಗಳೂರು ನಗರ, ಮೈಸೂರು, ಕಲ್ಬುರ್ಗಿ, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ತಾಲೀಮು ನಡೆಯಲಿದೆ.