download app

FOLLOW US ON >

Monday, August 8, 2022
Breaking News
ನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!
English English Kannada Kannada

ಆನ್ ಲೈನ್ ಜೂಜು ನಿಷೇಧ ಮಸೂದೆ ಅಂಗೀಕಾರ, ಆರೋಪ ಸಾಬೀತಾದರೆ 3 ವರ್ಷ ಜೈಲು

ಆನ್‌ಲೈನ್‌ ಜೂಜು, ಆನ್‌ಲೈನ್‌ ಗೇಮ್‌ಗಳ ಮೂಲಕ ಆಡುವ ಜೂಜು, ಬೆಟ್ಟಿಂಗ್‌ಗಳಿಗೆ ಕಡಿವಾಣ ಹಾಕುವ ಸಲುವಾಗಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರಲು ಹಿಂದೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು

ಬೆಂಗಳೂರು ಸೆ 24 : ರಾಜ್ಯದಲ್ಲಿ ಆನ್‌ಲೈನ್‌ನ ಎಲ್ಲಾ ರೀತಿಯ ಜೂಜು ಹಾಗೂ ಬೆಟ್ಟಿಂಗ್‌ ನಿಷೇಧಿಸುವ ಮಹತ್ವದ 2021ನೇ ಸಾಲಿನ ಕರ್ನಾಟಕ ಪೊಲೀಸ್‌ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

ಜೂಜಾಟದಲ್ಲಿ ತೊಡಗಿದ ಆರೋಪ ಸಾಬೀತಾದವರಿಗೆ 3 ವರ್ಷ ಜೈಲು ಶಿಕ್ಷೆ, ಕನಿಷ್ಠ 25 ಸಾವಿರದಿಂದ ಗರಿಷ್ಠ 1 ಲಕ್ಷ ರು.ವರೆಗೆ ದಂಡ ವಿಧಿಸುವ ಅಂಶ ಈ ಮಸೂದೆಯಲ್ಲಿದೆ. ಸದ್ಯ ಇಂತಹ ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರು. ದಂಡವಿದೆ.

ಆನ್‌ಲೈನ್‌ ಜೂಜು, ಆನ್‌ಲೈನ್‌ ಗೇಮ್‌ಗಳ ಮೂಲಕ ಆಡುವ ಜೂಜು, ಬೆಟ್ಟಿಂಗ್‌ಗಳಿಗೆ ಕಡಿವಾಣ ಹಾಕುವ ಸಲುವಾಗಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರಲು ಹಿಂದೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯ್ದೆಯಲ್ಲಿ ಆನ್‌ಲೈನ್‌ ಜೂಜನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಲ್ಲದೆ, ಜಾಮೀನುರಹಿತ ಅಪರಾಧವನ್ನಾಗಿ ಪರಿಗಣಿಸಲು ಅವಕಾಶ ಕಲ್ಪಿಸಿದ್ದು, ವಿಧೇಯಕದ ಬಗ್ಗೆ ಉಭಯ ಸದನಗಳಲ್ಲಿ ಚರ್ಚೆಯಾದ ಬಳಿಕ ಅಂಗೀಕಾರ ಆಗಬೇಕಿದೆ.
ಆನ್‌ಲೈನ್‌ ಗೇಮ್‌ಗಳು ಎಂದರೆ, ಹಣ ಅಥವಾ ಟೋಕನ್‌ ರೂಪದಲ್ಲಿ ಜೂಜು ಕಟ್ಟಿಆಡುವ ಎಲ್ಲಾ ರೀತಿಯ ಗೇಮ್‌ಗಳು ನಿಷೇಧಗೊಳ್ಳಲಿವೆ. ಗೇಮ್‌ಗೆ ಮೊದಲು ಅಥವಾ ನಂತರ ಹಣ ಪಾವತಿಸುವುದು. ಕೇವಲ ಹಣ ಮಾತ್ರವಲ್ಲದೆ ಮೌಲ್ಯ ಹೊಂದಿರುವ ವರ್ಚುಯಲ್‌ ಕರೆನ್ಸಿ, ಫಂಡ್‌ ಟ್ರಾನ್ಸ್‌ಫರ್‌ ಸೇರಿದಂತೆ ಎಲ್ಲಾ ರೀತಿಯ ಜೂಜು ಆಧಾರಿತ ಹಣಕಾಸು ವ್ಯವಹಾರಗಳಿಗೂ ನಿಷೇಧ ಹೇರಲಾಗಿದೆ.

ಆನ್‌ಲೈನ್‌ನಲ್ಲಿ ಆಡುವ ಪಂದ್ಯಗಳು, ಮೊಬೈಲ್‌ ಆ್ಯಪ್‌ ಮೂಲಕ ಆಡುವ ಆಟಗಳು, ಕಂಪ್ಯೂಟರ್‌, ಇಂಟರ್‌ನೆಟ್‌, ಯಾವುದೇ ಸಂವಹನ ಸಾಧನ ಮೂಲಕ ವರ್ಚುಯಲ್‌ ವೇದಿಕೆಯಲ್ಲಿ ಆಡುವ ಎಲ್ಲಾ ಗೇಮ್‌ಗಳು ಇದರ ವ್ಯಾಪ್ತಿಗೆ ಬರುತ್ತವೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಆನ್‌ಲೈನ್‌ ಕ್ಯಾಸಿನೊ, ಡ್ರೀಮ್‌ ಇಲೆವೆನ್‌, ರಮ್ಮಿ ಸರ್ಕಲ್‌, ಜಂಗ್ಲಿ ರಮ್ಮಿಯಂತಹ ಆನ್‌ಲೈನ್‌ ಜೂಜು ಆಟಗಳಿಗೆ ನಿರ್ಬಂಧ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಆನ್‌ಲೈನ್‌ ಮೂಲಕ ನಡೆಯುವ ಕ್ರಿಕೆಟ್‌ ಸೇರಿದಂತೆ ಕ್ರೀಡಾ ಬೆಟ್ಟಿಂಗ್‌ಗಳಿಗೂ ಕಡಿವಾಣ ಬೀಳಲಿದೆ.

ಕುದುರೆ ಬಾಜಿ ಮತ್ತು ಲಾಟರಿ ಈ ವ್ಯಾಪ್ತಿಗಿಲ್ಲ

ಈ ಆನ್‌ಲೈನ್‌ ಜೂಜಾಟ ನಿಷೇಧ ಕಾಯ್ದೆಯಡಿ ಲಾಟರಿ ಮತ್ತು ಕುದುರೆ ರೇಸ್‌ಗಳು ಬರುವುದಿಲ್ಲ. ಲಾಟರಿ ಮತ್ತು ಕುದುರೆ ರೇಸ್‌ ಅನ್ನು ಹೊರತುಪಡಿಸಿ ಉಳಿದೆಲ್ಲಾ ರೀತಿಯ ಆನ್‌ಲೈನ್‌ ಜೂಜಾಟವನ್ನು ನಿಷೇಧಿಸುವ ಅಂಶಗಳು ಈ ವಿಧೇಯಕದಲ್ಲಿ ಸೇರಿಸಲಾಗಿದೆ.

ಶಿಕ್ಷೆ ಪ್ರಮಾಣ ಎಷ್ಟು ?

ಆನ್‌ಲೈನ್‌ ಜೂಜಾಟದಲ್ಲಿ ತೊಡಗುವ ಪ್ರಕರಣವನ್ನು ಜಾಮೀನು ರಹಿತ ಅಪರಾಧವನ್ನಾಗಿ ಪರಿಗಣಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಜೂಜಾಟದಲ್ಲಿ ತೊಡಗಿರುವವರು ಅಪರಾಧ ಸಾಬೀತಾದರೆ ಈ ಹಿಂದೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರು. ದಂಡವಿತ್ತು. ಈಗ ಅದನ್ನು ಮೂರು ವರ್ಷಕ್ಕೆ ಶಿಕ್ಷೆ ಹೆಚ್ಚಿಸಲಾಗಿದೆ ಹಾಗೂ ಕನಿಷ್ಠ 25 ಸಾವಿರ ರು.ಗಳಿಂದ ಗರಿಷ್ಠ 1 ಲಕ್ಷ ರು. ದಂಡಕ್ಕೆ ಅವಕಾಶ ನೀಡಿ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.

ಯಾವ ಮಾದರಿಯ ಜೂಜು ನಿಷೇಧ ?

ಜೂಜಾಟದ ಹಾವಳಿಯನ್ನು ನಿಗ್ರಹಿಸುವುದಕ್ಕೆ ಸೈಬರ್‌ ತಾಣ, ಮೊಬೈಲ್‌ ಆ್ಯಪ್‌ ಮೂಲಕ ಜೂಜಾಟದ ಪ್ರಕ್ರಿಯೆಯಲ್ಲಿ ಮಾಹಿತಿ ತಂತ್ರಜ್ಞಾನ ಅಧಿನಿಯಮ-2000ರಲ್ಲಿ ಸೂಚಿಸಿರುವ ಎಲ್ಲಾ ಸಂವಹನ ಸಾಧನಗಳ ಬಳಕೆÜಯನ್ನೂ ನಿಷೇಧ ಮಾಡಲಾಗಿದೆ. ಹೀಗಾಗಿ ಕಂಪ್ಯೂಟರ್‌, ಕಂಪ್ಯೂಟರ್‌ ಸಿಸ್ಟಂ, ಮೊಬೈಲ್‌ ಆ್ಯಪ್‌, ಇಂಟರ್‌ನೆಟ್‌, ಸೈಬರ್‌ತಾಣ ಸೇರಿ ಯಾವುದೇ ಆನ್‌ಲೈನ್‌ ಹಾಗೂ ವರ್ಚುಯಲ್‌ ವೇದಿಕೆಗಳಲ್ಲೂ ಜೂಜು ಸಂಪೂರ್ಣ ನಿಷೇಧಿಸಲಾಗಿದೆ.ಎಂದು ಮಸೂದೆಯಲ್ಲಿ ತಿಳಿಸಲಾಗಿದೆ

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article