Ramnagar: ಬೊಂಬೆಗಳ ನಾಡು ಚೆನ್ನಪಟ್ಟಣ (Chennapatnam) ದೇಶ ವಿದೇಶಗಳಲ್ಲಿ ಜನಪ್ರಿಯತೆಗಳಿಸಿದೆ ಆದರೆ ಇಲ್ಲಿ ನಿರುದ್ಯೋಗ ಸಮಸ್ಯೆ (Unemployment problem) ಕಾಡುತ್ತಿದೆ.ಇಲ್ಲಿನ ಸಾಕಷ್ಟು ಯುವಕರು ಅವಕಾಶ ವಂಚಿತರಾಗಿದ್ದಾರೆ. ಕುಮಾರಸ್ವಾಮಿ (Kumaraswamy) ಪರವಾಗಿ ಯುವ ಸಮುದಾಯದ ಒಬ್ಬ ಯುವಕನಾಗಿ ನಿಮಗೆ ಮಾತು ಕೊಡುತ್ತಿದ್ದೇನೆ, ಯುವಕರ (youth) ದ್ವನಿಯಾಗಿ ನಾನು ಕೆಲಸ ಮಾಡುತೇನೆ, ಜಿಲ್ಲೆಯಲ್ಲಿ ಕನಿಷ್ಠ 25 ಸಾವಿರ ಯುವಕರಿಗೆ ಉದ್ಯೋಗ (Employment for youth) ಕೊಡಿಸುವಂತ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಯುವ ಪೀಳಿಗೆಗೆ ನಿಖಿಲ್ (Nikhil) ಅವರು ಭರವಸೆ ನೀಡಿದ್ದಾರೆ.
ಚನ್ನಪಟ್ಟಣ ನಗರ (Channapatnam city) ವ್ಯಾಪ್ತಿಯ ಹಲವಾರು ವಾರ್ಡ್ಗಳಿಗೆ ಭೇಟಿ ನೀಡಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಮತ ಯಾಚನೆ ಮಾಡಿದ, ನಂತರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ನಿಖಿಲ್ ಅವರು ಯುವ ಪೀಳಿಗೆಗೆ ಉದ್ಯೋಗ ಸೃಷ್ಟಿ ಕೊಡಿಸುವ ಭರವಸೆ ನೀಡಿದರು.ಕುಮಾರಸ್ವಾಮಿ (Kumarswamy) ಅವರು ಕೆಂದ್ರದ ಬೃಹತ್ ಸಚಿವರಾಗಿದ್ದಾರೆ. ಅದಕ್ಕೆ ನೀವು ಕಾರಣ, ಈಗ ನಿಮ್ಮ ಋಣವನ್ನ ತೀರಿಸುವ ಕೆಲಸ ಮಾಡುತೀನಿ ಎಂದರು.ಕುಮಾರಣ್ಣ ರೈತರ ಪರವಾಗಿ ಮಾತು ಕೊಟ್ಟು, ಕೊಟ್ಟ ಮಾತಿನಂತೆ ರೈತರ ಸಾಲ (Farmers’ loans)
ಮನ್ನ ಮಾಡಿದ್ದರೋ ಅದೇ ರೀತಿ ರಾಮನಗರ ಮತ್ತು ಚನ್ನಪಟ್ಟಣ (Ramanagara and Channapatnam) ಜನತೆಗೆ ಉದ್ಯೋಗ ಕಲ್ಪಿಸಿಕೊಡಿಸುತ್ತೇನೆ ಎಂದು ಜನರಿಗೆ ಹೇಳಿದ್ದಾರೆ.ಕೇಂದ್ರ ಸಚಿವ ಕುಮಾರಸ್ವಾಮಿ (Kumaraswamy) ಅವರು ಈಗಾಗಲೇ ದೆಹಲಿಯಲ್ಲಿ ನಾಲ್ಕುವರೆ ತಿಂಗಳಿಂದ ಸರಣಿ ಸಭೆ ಮಾಡುತ್ತಿದ್ದಾರೆ. ಅನೇಕ ಬೃಹತ್ ಕೈಗಾರಿಕಾ (Massive industrial) ಕಾರ್ಖಾನೆಯನ್ನ ರಾಮನಗರ ಜಿಲ್ಲೆಯಲ್ಲಿ (Ramnagar District) ಸ್ಥಾಪನೆ ಮಾಡವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಜನರ ಕಷ್ಟದ ಬಗ್ಗೆ ಅವರಿಗೂ ಅರಿವಿದೆ.ಬದಲಾದ ದಿನಗಳಲ್ಲಿ ಎಲ್ಲಾ ತಾಯಂದಿರಿಗೂ ಹಾಗೂ ಯುವಕರಿಗೆ (mothers and youth) ಬೇಕಾಗಿರುವುದು ಸ್ವಾಭಿಮಾನದ ಬದುಕು, ಸ್ವಂತ ಕಾಲಿನ ಮೇಲೆ ನಿಂತು ದುಡಿಯುವಂತ ಉದ್ಯೋಗ (Job) ಬೇಕಾಗಿದೆ. ಇವೆಲ್ಲಾವನ್ನು ಕುಮಾರಣ್ಣ ಅವರ ಜತೆಯಲ್ಲಿ ನಿಂತು ಮಾಡಿಸಿಕೊಡುತ್ತೇನೆ. ನಿಮ್ಮನ್ನ ನಂಬಿ ಬಂದಿದ್ದೇನೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದಾರೆ.