Karnataka:ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ತೀವ್ರಗೊಳ್ಳುತ್ತಿದೆ. ಮೂರು ಪಕ್ಷಗಳು (karnataka election updates) ಅಧಿಕಾರಕ್ಕಾಗಿ ಭಾರೀ ಕಸರತ್ತುಗಳನ್ನೇ ನಡೆಸುತ್ತಿವೆ.
ಆದರೆ ಆರಂಭದಲ್ಲಿ ಇದ್ದ ಚುನಾವಣಾ ಲೆಕ್ಕಾಚಾರ ಇದೀಗ ನಿಧಾನವಾಗಿ ಬದಲಾಗುತ್ತಿರುವ ಲಕ್ಷಣ ಕಾಣುತ್ತಿದೆ.
ಆರು ತಿಂಗಳ ಹಿಂದೆ ವಿಪಕ್ಷ ಕಾಂಗ್ರೆಸ್ (Congress) ಆಡಳಿತ ಪಕ್ಷ ಬಿಜೆಪಿಯ ವಿರುದ್ದ ಜನಾಭಿಪ್ರಾಯವನ್ನು ರೂಪಿಸುವಲ್ಲಿ ಯಶಸ್ಸು ಕಂಡಿತ್ತು. ಅದೇ ರೀತಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ (JDS)ತನ್ನ ನೆಲೆಯನ್ನು
ವಿಸ್ತರಿಸಿಕೊಳ್ಳುವತ್ತ ಹೆಚ್ಚಿನ ಗಮನ ಕೇಂದ್ರೀಕಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಬ್ಬರದ ನಡುವೆ ಬಿಜೆಪಿ (karnataka election updates) ಸ್ವಲ್ಪ ಮಂಕಾದಂತೆ ಕಂಡು ಬಂದಿತ್ತು.

ಆದರೆ ಫೆಬ್ರುವರಿ ತಿಂಗಳ ಅಂತ್ಯದ ವೇಳೆ ರಾಜ್ಯ ರಾಜಕೀಯದ ಸನ್ನಿವೇಷ ಬದಲಾವಣೆಯಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಪ್ರಧಾನಿ ಮೋದಿಯವರ(Modi) ಸತತ ಭೇಟಿಯಿಂದಾಗಿ ಬಿಜೆಪಿ ಕರ‍್ಯರ‍್ತರದಲ್ಲಿ ಹೊಸ ಉತ್ಸಾಹ ಮೂಡಿದೆ.
ಸಂಘಟನಾತ್ಮಕವಾಗಿ ಬಿಜೆಪಿ ಇದೀಗ ಮತ್ತಷ್ಟು ಚುರುಕಾಗಿದೆ. ಇನ್ನೊಂದೆಡೆ ಜೆಡಿಎಸ್(JDS)ನಲ್ಲಿ ಹಾಸನ ಟಿಕೆಟ್‌ವಿಚಾರವಾಗಿ ಕುಟುಂಬ ಕಲಹವೇ ಹೆಚ್ಚು ಸದ್ದು ಮಾಡುತ್ತಿದ್ದು, ಕರ‍್ಯರ‍್ತರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಕಾಂಗ್ರೆಸ್‌ಆರಂಭದಲ್ಲಿ ಹೆಚ್ಚು ಸದ್ದು ಮಾಡುತ್ತಿತ್ತು,
ಇದನ್ನು ಓದಿ: ಮರಭೂಮಿ ಪಕ್ಕದಲ್ಲೇ ಸಮುದ್ರವಿರುವ ಅಪರೂಪದ ತಾಣ ಇಲ್ಲಿದೆ ನೋಡಿ!
ಆದರೆ ನಿಧಾನವಾಗಿ ಕಾಂಗ್ರೆಸ್‌ನ ಅಬ್ಬರ ಕಡಿಮೆಯಾದಂತೆ ಕಂಡು ಬರುತ್ತಿದೆ. ಕಾಂಗ್ರೆಸ್‌ಪಕ್ಷಕ್ಕೆ ನಿಷ್ಠಾವಂತ ಕರ‍್ಯರ‍್ತರದ್ದೇ ದೊಡ್ಡ ಸಮಸ್ಯೆಯಾಗಿದೆ. ರಾಜ್ಯಮಟ್ಟದ ನಾಯಕರು ರೂಪಿಸುತ್ತಿರುವ ಚುನಾವಣಾ ಕರ‍್ಯತಂತ್ರವನ್ನು
ತಳಮಟ್ಟದಲ್ಲಿ ಅನುಷ್ಠಾನಗೊಳಿಸುವಂತ ಕರ‍್ಯರ‍್ತರ ಪಡೆಯ ಕೊರತೆಯನ್ನು ಕಾಂಗ್ರೆಸ್‌ಎದುರಿಸುತ್ತಿದೆ.
ಇನ್ನೊಂದೆಡೆ ಕಾಂಗ್ರೆಸ್‌ಘೋಷಣೆ ಮಾಡಿರುವ ಗ್ಯಾರಂಟಿ ಘೋಷಣೆಗಳು ಮತದಾರರನ್ನು ಹೆಚ್ಚು ಆರ‍್ಷಣೆ ಮಾಡಿದಂತೆ ಕಾಣುತ್ತಿಲ್ಲ.

ರಾಜ್ಯದಲ್ಲಿ ಸದ್ಯದ ರಾಜಕೀಯ ಸನ್ನಿವೇಶವನ್ನು ಗಮಿನಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಈ ನಡುವೆ ಜೆಡಿಎಸ್40 ಸ್ಥಾನಗಳನ್ನು ಗೆಲ್ಲುವ ಮೂಲಕ ಕಿಂಗ್‌ಮೇಕರ್ (King maker) ಆಗುವ ಕನಸು ಕಾಣುತ್ತಿದೆ.
ಸದ್ಯದ ರಾಜಕೀಯ ಟ್ರೆಂಡ್‌ಗಮನಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಸಾಧ್ಯತೆ ಕಡಿಮೆ. ಬಿಜೆಪಿ ವಿರುದ್ದ ಮಾದ್ಯಮಗಳಲ್ಲಿ ಆಡಳಿತ ವಿರೋಧಿ ಕಾಣಿಸಿಕೊಳ್ಳುತ್ತಿಯಾದರೂ, ತಳಮಟ್ಟದಲ್ಲಿ ಬಿಜೆಪಿ ಗಟ್ಟಿಯಾಗಿದೆ.
ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿ ಸಂಘಟನಾತ್ಮಕ ಹೋರಾಟ ಕಂಡು ಬರುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ನಡುವೆ ಇದೀಗ ಇತರ ಅನೇಕ ನಾಯಕರು ಕೂಡಾ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವುದು
ಕಾಂಗ್ರೆಸ್‌ಪಕ್ಷದ ಆಂತರಿಕ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಒಟ್ಟಾರೆಯಾಗಿ ಫೆಬ್ರುವರಿ ತಿಂಗಳ ಅಂತ್ಯದ ವೇಳೆಗೆ ರಾಜ್ಯ ರಾಜಕೀಯದಲ್ಲಿ ಬಿಜೆಪಿ ನಿಧಾನವಾಗಿ ತನ್ನ ಸಂಘಟನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ, ಕಾಂಗ್ರೆಸ್‌ಕರ‍್ಯರ‍್ತರ ಕೊರತೆಯಿಂದಾಗಿ ಸ್ವಲ್ಪ ಮಂಕಾದಂತೆ ಕಂಡು ಬರುತ್ತಿದೆ.
ಈ ನಡುವೆ ಜೆಡಿಎಸ್‌ಹಾಸನ ವಿಚಾರದಲ್ಲಿಯೇ ತನ್ನ ಶಕ್ತಿಯನ್ನು ವ್ರ‍್ಥ ಮಾಡುತ್ತಿದೆ.
-ಮಹೇಶ್.ಪಿ.ಎಚ್