Karnataka : ಭಾರತ ಸರ್ಕಾರದ (Government of India) ಪ್ರಮುಖ ಆದಾಯ ಮೂಲಗಳಲ್ಲಿ ಜಿಎಸ್ಟಿ ಒಂದಾಗಿದೆ. 2023ರ ಏಪ್ರಿಲ್ ತಿಂಗಳಲ್ಲಿ ಜಿಎಸ್ಟಿ (GST) ಬೃಹತ್ ಕಲೆಕ್ಷನ್ಸ್ ಕಂಡಿದೆ.ಈ ಏಪ್ರಿಲ್ನಲ್ಲಿ 1.87 ಲಕ್ಷ ಕೋಟಿ ರೂನಷ್ಟು ಜಿಎಸ್ಟಿ ತೆರಿಗೆ ಒಟ್ಟು ಸಂಗ್ರಹವಾಗಿದೆ. ಇದು ಇಷ್ಟು ವರ್ಷದಲ್ಲಿ ಇಲ್ಲಿಯವರೆಗೆ (Karnataka GST Collection) ಭಾರತದಲ್ಲಿ ಶೇಖರಣೆಯಾದ ಅತಿಹೆಚ್ಚು ಜಿಎಸ್ಟಿ ತೆರಿಗೆಯಾಗಿದೆ.
ಅದರಲ್ಲೂ ನಮ್ಮ ಕರ್ನಾಟಕದಿಂದ 2023ರಲ್ಲಿ ಸುಮಾರು 14,593 ಕೋಟಿ ಜಿಎಸ್ಟಿ ಸಂಗ್ರಹವಾಗಿರುವುದು ಹೊಸ ದಾಖಲೆಯಾಗಿದೆ.

ಮಹಾರಾಷ್ಟ್ರ (Maharashtra) ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ (GST tax collection) ಯಾವಾಗಲೂ ನಂಬರ್ ಒನ್ ಆಗಿರುತ್ತಿತ್ತು .ಇದಕ್ಕೆ ಮುಖ್ಯ ಕಾರಣ ವಾಣಿಜ್ಯ ನಗರಿ ಮುಂಬೈ.
ಮುಂಬೈನಿಂದಾಗಿ ಮಹಾರಾಷ್ಟ್ರ ಅತಿಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯವಾಗಿತ್ತು . ಆದರೆ ಕರ್ನಾಟಕ ರಾಜ್ಯವು ಬಹುತೇಕವಾಗಿ ಯಾವಾಗಲೂ ಜಿಎಸ್ಟಿ ಕಲೆಕ್ಷನ್ನಲ್ಲಿ ಎರಡನೇ ಸ್ಥಾನದಲ್ಲಿ ಇರುತ್ತಿತ್ತು.
ಇಲ್ಲಿಯವರೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯ ಮಾತ್ರ 10,000 ಕೋಟಿ ರೂ ಗಿಂತಲೂ ಜಾಸ್ತಿ ಜಿಎಸ್‌ಟಿ ಸಂಗ್ರಹವಾಗುತ್ತಿತು.
ಆದರೆ ಇದೇ ಮೊದಲ ಬಾರಿಗೆ 2023ರಲ್ಲಿ ಒಟ್ಟು 6 ರಾಜ್ಯಗಳು ಅಂದರೆ ಮಹಾರಾಷ್ಟ್ರ,
ಕರ್ನಾಟಕ, ಗುಜರಾತ್, ತಮಿಳುನಾಡು, ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯಗಳು (State of Haryana) 2023ರ ಏಪ್ರಿಲ್ ತಿಂಗಳಲ್ಲಿ 10,000ಕ್ಕೂ
ಹೆಚ್ಚು ಜಿಎಸ್ಟಿ ಕಲೆಕ್ಷನ್ಸ್ ಮಾಡಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಕಳೆದ 7 ತಿಂಗಳಿಂದ ಅಂದರೆ 2022 ಅಕ್ಟೋಬರ್ ತಿಂಗಳಿಂದಲೂ ಕರ್ನಾಟಕ
10,000 ಕೋಟಿ ರೂಪಾಯಿಗೂ ಅಧಿಕ ಜಿಎಸ್ಟಿ ಸಂಗ್ರಹ ಮಾಡುತ್ತಿದೆ.
ಇದನ್ನೂ ಓದಿ : https://vijayatimes.com/karnataka-congress-manifesto/
ಕರ್ನಾಟಕದ ರಾಜ್ಯದ ಕಳೆದ 7 ತಿಂಗಳ ಹಿಂದಿನ ಜಿಎಸ್ಟಿ ಸಂಗ್ರಹದ ಮಾಹಿತಿ :
2023ರ ಏಪ್ರಿಲ್: 14,593 ಕೋಟಿ ರೂ
2023ರ ಮಾರ್ಚ್: 10,360 ಕೋಟಿ ರೂ
2023ರ ಫೆಬ್ರುವರಿ: 10,809 ಕೋಟಿ ರೂ
2023ರ ಜನವರಿ: 11,317 ಕೋಟಿ ರೂ
2022ರ ಡಿಸೆಂಬರ್: 10,061 ಕೋಟಿ ರೂ
2022ರ ನವೆಂಬರ್: 10,238 ಕೋಟಿ ರೂ
2022ರ ಅಕ್ಟೋಬರ್: 10,996 ಕೋಟಿ ರೂ
ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯದಲ್ಲಿ ಜಿಎಸ್ಟಿ ಕಲೆಕ್ಷನ್ಸ್ ಹೇಗಿದೆ?
ಜಿಎಸ್ಟಿ ಸಂಗ್ರಹದಲ್ಲಿ ದೇಶದ ಟಾಪ್ ರಾಜ್ಯಗಳ ಪಟ್ಟಿಯಲ್ಲಿ ಉತ್ತರಪ್ರದೇಶ (Uttar Pradesh) ಮತ್ತು ಹರ್ಯಾಣ ರಾಜ್ಯಗಳು ಇವೆ.
ಇವೆರಡು ರಾಜ್ಯಗಳ ಹೆಸರು ಕಂಡು ಯಾರಿಗಾದರೂ ಅಚ್ಚರಿ ಮೂಡಬಹುದು ಏಕೆಂದರೆ ಉತ್ತರಪ್ರದೇಶ (Karnataka GST Collection) ಮತ್ತು ಹರ್ಯಾಣ ರಾಜ್ಯವು ದೇಶದ ಅತಿದೊಡ್ಡ ರಾಜ್ಯವಾಗಿದೆ
ಆದರೆ ಈಗಲೂ ತುಸು ಹಿಂದುಳಿದಿರುವ ಸ್ಥಿತಿಯಲ್ಲಿರುವ ಪ್ರದೇಶವಾಗಿದೆ .
ಇದನ್ನೂ ಓದಿ : https://vijayatimes.com/v-somanna-vs-siddaramaiah/
ಆದರೂ ಈ ಎರಡೂ ರಾಜ್ಯಗಳ ಜಿಎಸ್ಟಿ ಕಲೆಕ್ಷನ್ಸ್ ಮೇಲ್ಮಟ್ಟದಲ್ಲಿರಲು ಪ್ರಮುಖ ಕಾರಣವಾಗಿರುವುದು ನವದೆಹಲಿ. ಬೆಂಗಳೂರಿನ ಸಮೀಪದಲ್ಲಿರುವ ಹೊಸೂರು
ಈಗ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬೆಳೆದು ತಮಿಳುನಾಡಿನ (Tamil Nadu) ಆರ್ಥಿಕತೆಗೆ ಆರ್ಥಿಕವಾಗಿ ಹೇಗೆ ಪುಷ್ಟಿ ಕೊಡುತ್ತಿದೆಯೋ
ಅದೇ ರೀತಿ ಈಗ ರಾಷ್ಟ್ರ ರಾಜಧಾನಿ ದೆಹಲಿ ಸಮೀಪ ನೆಲಸಿರುವ ಹಲವು ಉದ್ಯಮಗಳು,
ಮತ್ತು ಕೈಗಾರಿಕೆಗಳು ಉತ್ತರಪ್ರದೇಶ ಮತ್ತು ಹರಿಯಾಣದ ರಾಜ್ಯದ ವ್ಯಾಪ್ತಿಗೆ ಬರುತ್ತವೆ. ಪ್ರಮುಖ ಪ್ರದೇಶವಾದ ನೋಯ್ಡಾ, ಘಾಜಿಯಾಬಾದ್ ಪ್ರದೇಶಗಳು
ಯುಪಿಗೆ ಸೇರುತ್ತವೆ. ಅಂತೆಯೇ ಗುರುಗ್ರಾಮ್ ನಗರ ಹರ್ಯಾಣಕ್ಕೆ ಸೇರುತ್ತವೆ. ನವದೆಹಲಿ (New Dehli) ನಗರಕ್ಕೆ ಸಮೀಪ ಕೈಗಾರಿಕೆಗಳು ವಿಸ್ತರಿಸಿರುವುದರಿಂದ ಜಿಎಸ್ಟಿ ಅಧಿಕವಾಗಿ ಸಂಗ್ರಹವಾಗಿದೆ.