ಸಾರ್ವಜನಿಕ ಸ್ಥಳಗಳಲ್ಲಿ(Public Domain) ನಿಂದನೆ ಮಾಡಿದರೆ ಮಾತ್ರ ಎಸ್‍ಸಿ-ಎಸ್‍ಟಿ(SC-ST) ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುತ್ತದೆ. ಸಾರ್ವಜನಿಕವಲ್ಲದ ಸ್ಥಳಗಳಲ್ಲಿ ಯಾವುದೇ ರೀತಿಯ ನಿಂದನೆ ಪ್ರಕರಣಗಳನ್ನು ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಕರ್ನಾಟಕ(Karnataka) ರಾಜ್ಯ ಹೈಕೋರ್ಟ್(State Highcourt) ಮಹತ್ವದ ತೀರ್ಪು(Verdict) ನೀಡಿದೆ.
ಮಂಗಳೂರಿನ(Mangaluru) ರಿತೇಶ್ ಪಯಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಒಂದು ಕಟ್ಟಡದ ನೆಲಮಹಡಿ ಸಾರ್ವಜನಿಕ ಸ್ಥಳವಲ್ಲ. ಹೀಗಾಗಿ ಅಲ್ಲಿಂದ ನಿಂದನೆ ಮಾಡಿದರೆ ಅದು ಎಸ್‍ಸಿ-ಎಸ್‍ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ರೀತಿಯ ಪ್ರಕರಣಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1)(ಆರ್)(ಎಸ್)(ವಿಎ) ಅನ್ವಯವಾಗುವುದಿಲ್ಲ.
ಹೀಗಾಗಿ ಈ ರೀತಿಯ ಪ್ರಕರಣಗಳನ್ನು ‘ಜಾತಿ ನಿಂದನೆ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ರಿತೇಶ್ ಪಯಾಸ್ ಎಂಬುವವರ ವಿರುದ್ಧ ದಾಖಲಿಸಿದ್ದ ‘ಜಾತಿ ನಿಂದನೆ’ ಪ್ರಕರಣವನ್ನು ರದ್ದುಪಡಿಸಿದೆ. ಇನ್ನು 2020ರಲ್ಲಿ ಈ ದೂರನ್ನು ದಾಖಲಿಸಲಾಗಿತ್ತು. ರಿತೇಶ್ ಪಯಾಸ್ ವಿರುದ್ದ ಜಯಕುಮಾರ್ ನಾಯರ್ ಜಾತಿ ನಿಂದನೆ ದೂರು ದಾಖಲಿಸಿದ್ದರು.