- ತೇಜಸ್ವಿ ಯಾದವ್ ಇಂದ ಬಿಹಾರದಲ್ಲಿ ಮನೆಗೊಂದು ಉದ್ಯೋಗ, ಉಚಿತ ವಿದ್ಯುತ್ ಭಾಗ್ಯ
- ಉದ್ಯೋಗದಿಂದ ವಿದ್ಯುತ್‌ವರೆಗೆ — ಬಿಹಾರದ ಜನತೆಗೆ ತೇಜಸ್ವಿಯ 25 ಭರವಸೆಗಳ ಭಾಗ್ಯಗಳು
- ಕರ್ನಾಟಕ ಮಾದರಿಯ ಗ್ಯಾರಂಟಿಗಳಿಂದ ಮತದಾರರ ಮನಸೆಳೆಯುವ ಯತ್ನ
Bihar: ಕರ್ನಾಟಕ ಮತ್ತು ತೆಲಂಗಾಣದಲ್ಲಿ ಚುನಾವಣಾ ಗೆಲುವಿಗೆ ಕಾರಣವಾದ “ಗ್ಯಾರಂಟಿ ಯೋಜನೆಗಳು” ಇದೀಗ ಬಿಹಾರಕ್ಕೂ ತಲುಪಿವೆ.
ರಾಜ್ಯದ ಮುಂಬರುವ ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ತೇಜಸ್ವಿ ಯಾದವ್ ನೇತೃತ್ವದ ಮಹಾಮೈತ್ರಿಕೂಟ (ಆರ್‌ಜೆಡಿ – ಕಾಂಗ್ರೆಸ್(RJD – Congress) – ಎಡಪಕ್ಷಗಳು ಸೇರಿಕೊಂಡ ಕೂಟ) ಮಂಗಳವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಹಾರದ ಜನರ ಕನಸಿಗೆ ಹೊಸ ಆಶಾಕಿರಣ ನೀಡುವಂತೆ ಹಲವು ಭರವಸೆ ಭಾಗ್ಯಗಳು ಇದರಲ್ಲಿವೆ.(Karnataka model guarantee in Bihar)

32 ಪುಟಗಳ “ಬಿಹಾರದ ತೇಜಸ್ವಿ ಪ್ರಮಾಣ” ಎನ್ನುವ ಪ್ರಣಾಳಿಕೆಯಲ್ಲಿ ತೇಜಸ್ವಿ ಯಾದವ್ ಅವರು ಜನತೆಗೆ 25 ಗ್ಯಾರಂಟಿ(Guarantee)ಗಳನ್ನು ನೀಡಿದ್ದಾರೆ.
ಈ ಪ್ರಣಾಳಿಕೆಯಲ್ಲಿ ಪ್ರಮುಖ ಘೋಷಣೆ ಎಂದರೆ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವುದು. ಜೊತೆಗೆ ಕರ್ನಾಟಕದ ಗೃಹಜ್ಯೋತಿ ಮಾದರಿಯಲ್ಲಿ 200 ಯುನಿಟ್ ಉಚಿತ ವಿದ್ಯುತ್, ಮತ್ತು ಮಾಸಿಕ ₹2,500 ಆರ್ಥಿಕ ಸಹಾಯ (ಗೃಹಲಕ್ಷ್ಮಿ ಮಾದರಿಯಲ್ಲಿ) ನೀಡುವ ಯೋಜನೆಗಳೂ ಸೇರಿವೆ.
ಇದೇ ರೀತಿಯಲ್ಲಿ ಪ್ರತಿ ಕುಟುಂಬಕ್ಕೆ ₹25 ಲಕ್ಷ ಮೌಲ್ಯದ ಜೀವ ವಿಮೆ, ಹಳೆಯ ಪಿಂಚಣಿ ಯೋಜನೆ ಪುನರಾರಂಭ, ಮತ್ತು ವಕ್ಫ್ ತಿದ್ದುಪಡಿ ಕಾಯ್ದೆ ರದ್ದುಪಡಿಸುವ ಭರವಸೆಗಳು ಕೂಡ ಸೇರಿವೆ. (Karnataka model guarantee in Bihar)
ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ತೇಜಸ್ವಿ ಯಾದವ್, ಎನ್‌ಡಿಎ ಕೂಟದ ಮೇಲೆ ತೀವ್ರ ವಾಗ್ದಾಳಿ ನಡೆಸಿ ಬಿಹಾರದ ಜನತೆಗೆ ಬೇಕಾಗಿರುವುದು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ.
ಆದರೆ ಎನ್‌ಡಿಎಗೆ ಯಾವುದೇ ದೃಷ್ಟಿ ಅಥವಾ ಯೋಜನೆ ಇಲ್ಲ.
ನಮ್ಮ ಪ್ರಣಾಳಿಕೆ ಬಿಹಾರದ ಅಭಿವೃದ್ಧಿಯ ನಕ್ಷೆ.
ನಾವು ರಾಜ್ಯವನ್ನು ನಂ.1 ಸ್ಥಾನಕ್ಕೆ ತರುತ್ತೇವೆ. ಜನರು ಈ ಬಾರಿ ಅಪರಾಧ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಎನ್‌ಡಿಎಗೆ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.
ಮಹಾಮೈತ್ರಿಕೂಟವು ಅಧಿಕಾರಕ್ಕೇರಿದ ಬಳಿಕ 20 ದಿನಗಳೊಳಗೆ ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತೇಜಸ್ವಿ ಘೋಷಿಸಿದ್ದಾರೆ.
ಅದೇ ವೇಳೆ, 20 ತಿಂಗಳೊಳಗೆ ರಾಜ್ಯಾದ್ಯಂತ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರಲಾಗುವುದು.
ಗುತ್ತಿಗೆ ಆಧಾರದ ಕಾರ್ಮಿಕರನ್ನು ಶಾಶ್ವತ ನೌಕರರನ್ನಾಗಿ ಮಾಡುವ ಭರವಸೆ, ಪ್ರತಿ ಉಪವಿಭಾಗದಲ್ಲಿ ಹಾಸ್ಟೆಲ್ (Hostel)ಹಾಗೂ ಪದವಿ ಕಾಲೇಜು (College)ಗಳ ನಿರ್ಮಾಣ, ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳು ಪ್ರಣಾಳಿಕೆಯಲ್ಲಿ ಅಂಕಿತಗೊಂಡಿವೆ.
ಐಟಿ, ಹೈ-ಟೆಕ್ (IT, high-tech)ಕೈಗಾರಿಕೆ, ಕೃಷಿ ಆಧಾರಿತ ಉದ್ಯಮ, ನವೀಕರಿಸಬಹುದಾದ ಇಂಧನ, ಪ್ರವಾಸೋದ್ಯಮ ಹಾಗೂ ಆಹಾರ ಸಂಸ್ಕರಣೆ ವಲಯಗಳಲ್ಲಿ ಕೌಶಲ್ಯ ಆಧರಿತ ಉದ್ಯೋಗ ಸೃಷ್ಟಿಗೆ ಸರ್ಕಾರ ಬದ್ಧವಾಗಲಿದೆ.
ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ತೇಜಸ್ವಿ ಸರ್ಕಾರ “ಜೀವಿಕಾ ದೀದೀ”ಯರನ್ನು ಶಾಶ್ವತ ನೌಕರರನ್ನಾಗಿ ನೇಮಕ ಮಾಡುವುದಾಗಿ ಭರವಸೆ ನೀಡಿದೆ.
ಅವರಿಗೆ ತಿಂಗಳಿಗೆ ₹30,000 ವೇತನ ನೀಡಲಾಗುವುದು.
ಬಾಕಿ ಉಳಿದ ಸಾಲಗಳ ಮೇಲಿನ ಬಡ್ಡಿಯನ್ನು ರದ್ದುಪಡಿಸಿ, ಮುಂದಿನ ಎರಡು ವರ್ಷ ಬಡ್ಡಿ ವಿಧಿಸದಿರಲು ನಿರ್ಧಾರವಿದೆ.
ಮಹಿಳೆ ಮತ್ತು ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಎರಡು ಹೊಸ ಯೋಜನೆಗಳು –
- ಬೇಟಿ ಯೋಜನೆ: ಹೆಣ್ಣುಮಕ್ಕಳ ಶಿಕ್ಷಣ, ತರಬೇತಿ ಮತ್ತು ಆದಾಯ ಭದ್ರತೆಗೆ.
- ಮಾಯಿ ಯೋಜನೆ: ಮಹಿಳೆಯರಿಗೆ ಮನೆ, ಆಹಾರ ಮತ್ತು ಆರ್ಥಿಕ ಭದ್ರತೆ ನೀಡಲು ಹೊಸ ಯೋಜನೆ.
ತೇಜಸ್ವಿ ಯಾದವ್ ಬಿಡುಗಡೆ ಮಾಡಿದ ಪ್ರಣಾಳಿಕೆಯ ಮುಖಪುಟದಲ್ಲಿ ಅವರದೇ ದೊಡ್ಡ ಫೋಟೋ ಇದ್ದು, ರಾಹುಲ್ ಗಾಂಧಿಯ ಚಿತ್ರ ಸಣ್ಣದಾಗಿ ಬದಿಯಲ್ಲಿ ಅಳವಡಿಸಲಾಗಿದೆ.ಇದರಿಂದ ಕಾಂಗ್ರೆಸ್‌ಗೆ ಮುಜುಗರ ಉಂಟಾಗಿದೆ ಎನ್ನಲಾಗಿದೆ.
ಈ ಹಿಂದೆ ಕ್ಷೇತ್ರ ಹಂಚಿಕೆಯ ವಿಷಯದಲ್ಲೂ ಆರ್‌ಜೆಡಿ ಪಕ್ಷವು ಕಾಂಗ್ರೆಸ್‌ನೊಂದಿಗೆ ಮಾತುಕತೆ ಇಲ್ಲದೇ ಅಭ್ಯರ್ಥಿಗಳನ್ನು ಘೋಷಿಸಿತ್ತು, ಇದರಿಂದ ಎರಡು ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಪರಸ್ಪರ ಎದುರು ನಿಂತಿದ್ದವು.
ಒಟ್ಟಿನಲ್ಲಿ ತೇಜಸ್ವಿಯ ಈ ಘೋಷಣೆಗಳು ಬಿಹಾರದ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
ಕರ್ನಾಟಕ ಮಾದರಿಯ ಗ್ಯಾರಂಟಿ ಯೋಜನೆಗಳು ಬಿಹಾರದಲ್ಲಿ ಎಷ್ಟು ಪರಿಣಾಮ ಬೀರುತ್ತವೆ ಎಂಬುದು ಮುಂದಿನ ಚುನಾವಣೆಯಲ್ಲಿ ಸ್ಪಷ್ಟವಾಗಲಿದೆ.