ಬೆಂಗಳೂರು ಸೆ 6 : ಹುಬ್ಬಳಿ – ಧಾರವಾಡ, ಕಲಬುರ್ಗಿ ಹಾಗೂ ಬೆಳಗಾವಿಯಲ್ಲಿ ನಡೆಯುತ್ತಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳೂ ಸೇರಿ ಎಲ್ಲಾ ಪಕ್ಷದವರೂ ಕೂಡ ಕೊರೊನಾ ನಿಯಮವನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ.
ಮಾಸ್ಕ್ ಧರಿಸದೆ ಹಾಗೂ ಸಾಮಜಿಕ ಅಂತರವನ್ನು ಕಾಪಾಡದೆ ರಾಷ್ಟ್ರೀಯ ಪಕ್ಷಗಳು ಸೇರಿ ಎಲ್ಲಾ ಪಕ್ಷದವರು ಕೊರೊನಾ ಇರುವುದನ್ನೇ ಮರೆತು ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಹಬ್ಬಗಳಿಗೆ ಇರುವ ಕೊರೊನಾ ನಿಯಮ ಚುನಾವಣೆಗೆ ಇಲ್ಲದಿರುವುದು ವಿಷಾದವೇ ಸರಿ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 3 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. ವಾರ್ಡ್ ನಂಬರ್ 41 ರಲ್ಲಿ ಸಂತೋಷ್, 42 ರಲ್ಲಿ ಮಹದೇವಪ್ಪ ಗೆಲುವು ಸಾಧಿಸಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 3 ಬಿಜೆಪಿ, 2 ಕಾಂಗ್ರೆಸ್ , ಒಂದು ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿದ್ದಾರೆ.
ನಗರ ಸಂಸ್ಥೆ | ವಾರ್ಡ್ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರರು |
ಬೆಳಗಾವಿ ಪಾಲಿಕೆ | 58 | 5 | 4 | 0 | 1 |
ಹು–ಧಾ ಪಾಲಿಕೆ | 82 | 14 | 3 | 0 | 1 |
ಕಲಬುರ್ಗಿ ಪಾಲಿಕೆ | 55 | 5 | 5 | 0 | 1 |