ಕರ್ನಾಟವನ್ನು(Karnataka) ಅಭಿವೃದ್ಧಿ ಶೀಲ ರಾಜ್ಯ(State) ಮಾಡುವುದು ನಮ್ಮ ಗುರಿ. ಜನ ಇಂದಿಗೂ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ಪಶು ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ನಂತಹ ಯೋಜನೆಗಳನ್ನು ನೆನೆಯುತ್ತಾರೆ. ಕರ್ನಾಟಕ ರಾಜ್ಯ ಜಾಗತಿಕ ಭೂಪಟದಲ್ಲಿ ಎದ್ದು ಕಾಣುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರದ(Congress Government) ಸಾಧನೆ ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ.

ದಾವಣಗೆರೆಯಲ್ಲಿ(Davangere) ಮಾತನಾಡಿರುವ ಅವರು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ(BJP Government) ಮಾಡುತ್ತಿರುವ ಭ್ರಷ್ಟಾಚಾರ(Corruption) ಎಲ್ಲರ ಕಣ್ಣಿಗೆ ರಾಚುವಂತಿದೆ. ಪ್ರಾಮಾಣಿಕರಾಗಿರಬೇಕು, ಕಾಯಕವೇ ಕೈಲಾಸ ಎಂಬ ತತ್ವಕ್ಕೆ ಬದ್ಧವಾಗಿರಬೇಕು ಎಂದು ಬಸವಣ್ಣನವರು ಹೇಳಿದ್ದರು. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಸವಣ್ಣನವರ ತತ್ವಗಳಿಗೆ ತದ್ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ(Siddaramaiah) ಅವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ನಡೆಸಿದ ಆಡಳಿತದ ಬಗ್ಗೆ ಹೆಮ್ಮೆಯಿದೆ.
ಕರ್ನಾಟಕದ ಸಮಸ್ಯೆಗಳ ಬಗೆಗೆ ಅವರಿಗೊಂದು ದೂರದೃಷ್ಟಿ ಇತ್ತು, ಬಡವರ ಪರ ಕಾಳಜಿ ಇತ್ತು. ಅವರ ಸಾಮಾಜಿಕ ನ್ಯಾಯದ ಪರ ಬದ್ಧತೆಗೆ ನನ್ನ ಸಹಮತವಿದೆ. ಇದಕ್ಕೆ ವ್ಯತಿರಿಕ್ತವಾಗಿ ಈಗ ಬಿಜೆಪಿ ಸರ್ಕಾರ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ. ಇನ್ನೊಂದೆಡೆ ರಾಜ್ಯ ಕಾಂಗ್ರೆಸ್(State Congress) ಬಿಜೆಪಿ ಸರ್ಕಾರದ ವಿರುದ್ದ ಟ್ವೀಟ್(Tweet) ಮೂಲಕ ವಾಗ್ದಾಳಿ ನಡೆಸಿದ್ದು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಕರಾವಳಿಯಲ್ಲಿ ಕೊಲೆಗಳಾಗುವ ಮಾಹಿತಿ ಇರುವುದಿಲ್ಲ, ಗೃಹ ಸಚಿವರ ಮನೆಗೆ ಎಬಿವಿಪಿ ದಾಳಿಯ ಮಾಹಿತಿ ಇರುವುದಿಲ್ಲ, ಕೇಂದ್ರ ಗೃಹ ಸಚಿವರ ರಾಜ್ಯ ಭೇಟಿಯ ಮಾಹಿತಿಗೆ ಪತ್ರಿಕಾ ವರದಿಗಳ ಆಶ್ರಯ.

ರಾಜ್ಯದಲ್ಲಿ ಗುಪ್ತಚರ ಇಲಾಖೆ ಎನ್ನುವುದೊಂದಿತ್ತು, ಅದು ಈಗಲೂ ಅಸ್ತಿತ್ವದಲ್ಲಿದೆಯೇ ಎಂಬ ಅನುಮಾನ ಹುಟ್ಟುತ್ತಿದೆ. ಸಿಎಂಗೆ ಸಮರ್ಪಕ ಮಾಹಿತಿಯೇ ಇಲ್ಲದೆ ಕಾರ್ಯಕರ್ತರ ಆಕ್ರೋಶ ತಣಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಧಿಡೀರ್ ಭೇಟಿ ಕೊಡುತ್ತಿರುವುದು ಬಿಜೆಪಿಯಲ್ಲಿ ಆತಂಕೋತ್ಸವ, ಅಂತ್ಯೋತ್ಸವ, ಆಕ್ರೋಶೋತ್ಸವಗಳು ನಡೆಯುತ್ತಿರುವುದಕ್ಕೆ ನಿದರ್ಶನ. ಭೇಟಿ ಹಿನ್ನೆಲೆಯಲ್ಲಿ ಸಿಎಂ ಸಪ್ಪೆ ಮುಖ ಹಾಕಿರುವುದಕ್ಕೆ ರಹಸ್ಯವೇನು? ಎಂದು ಪ್ರಶ್ನಿಸಿದೆ.