Karnataka : ರಾಜ್ಯಾದಂತ 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಇಂದು ನಮ್ಮ ಕನ್ನಡ ನಾಡಿನ ಜನತೆ ಬಹಳ ವಿಜೃಭಣೆಯಿಂದ ಆಚರಿಸುತ್ತಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಮಾತನಾಡುವ ಮೊದಲು ಮೈಯಲ್ಲ ಕನ್ನಡವನ್ನಾಗಿಸಿಕೊಂಡ(Karnataka ratna appu) ರಾಷ್ಟ್ರ ಕವಿ ಕುವೆಂಪುರವರನ್ನು ನಾವು ಇಂದು ಕ್ಷಣ-ಕ್ಷಣದಲ್ಲು ನೆನಪಿಸಿಕ್ಕೊಳ್ಳಬೇಕಾಗಿದೆ.

ಗಾದೆ ಮಾತಿನ ಪ್ರಕಾರದಂತೆ ‘ಆಡು ಮುಟ್ಟದ ಸೊಪ್ಪಿಲ್ಲ’ ಹಾಗೆ ಕವಿ ಕುವೆಂಪುರವರು ಬರೆಯದ ಸಾಹಿತ್ಯವಿಲ್ಲ ಎಂಬ ಮಾತಿನಂತೆ ನಮ್ಮ ಸಾಹಿತ್ಯ ಸಂಪತ್ತಿನಿಂದ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳೆಸಿ,
ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹೆಮ್ಮೆಯ ಕನ್ನಡಿಗ ಕುವೆಂಪುರವರು.
“ಕರ್ನಾಟಕ ಎಂಬುದೇನು ಹೆಸರು ಬರಿಯ ಮಣ್ಣಗೆ?” ಎಂಬ ಈ ಸಾಲಿನಲ್ಲಿ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಕನ್ನಡಿಗರ ನರನಾಡಿಗಳು ರೋಶ ಉಕ್ಕಿಸುವಂತೆ ಮಾಡಿರುವವರು ಕೇಂದ್ರ ಸಾಹಿತ್ಯ ಅಕಾಡೆಮಿ ಪಡೆದ ರಾಷ್ಟ್ರಕವಿ ಕುವೆಂಪುರವರು.
ಕರ್ನಾಟಕ ಎಂಬುದು ಕೇವಲ ಮಣ್ಣಿಗಿರುವ ಹೆಸರಲ್ಲ ಎಂದಿರುವುದು ಇಲ್ಲಿ ಸ್ಪಷ್ಟವಾಗಿದೆ.
ಇದನ್ನೂ ಓದಿ : https://vijayatimes.com/up-cm-orders-pwd-officers/
ಕವಿ ಹೇಳಿರುವಂತೆ ಕರ್ನಾಟಕ ಎಂಬುದು ಒಂದು ಶಕ್ತಿ , ಇದು ನಮ್ಮೆಲ್ಲರಿಗೂ ತಾಯಿ ಇದ್ದಂತೆ ಹಾಗು ನಮ್ಮೆಲ್ಲರ ದೇವಿಯೂ ಕನ್ನಡವೇ, ಅವಳು ಪ್ರೀತಿಯಿಂದ ಒಲವನ್ನು ಊಡುತ್ತಾಳೆ ಎಂದರ್ಥ.
ನಾವು ಇಂದು ಕರ್ನಾಟಕ ನಮ್ಮದೆಂದು ಗಡಿರೇಖೆಗಳನ್ನು ಹಾಕಿಕೊಂಡು ನರ್ತಿಸುತಿದ್ದೇವೆ,
ಭಾಷೆ ಉಳಿಯಲು ಭಾಷಣ ಬೇಡ ಕನ್ನಡ ಮಾತೆಯ ನೆಲದ ದಿಕ್ಕು-ದಿಕ್ಕುಗಳು ಕನ್ನಡ ಅನ್ನುವ ಹಾಗಿರಬೇಕು, ಹೀಗೆ ಕವಿ ಕನ್ನಡಿಗರ ನರನಾಡಿಗಳು ರೋಶಗೊಳ್ಳುವಂತೆ ಇರಬೇಕೆಂದು ಇಲ್ಲಿ ಕವಿ ಅರ್ಥ ರೂಪವಾಗಿ ಹೇಳಿದ್ದಾರೆ.
ಹಾಗೆ “ಡಾ.ರಾಜ್‍ಕುಮಾರ್” ಕಲಿಯೋಕೆ ಕೋಟಿ ಭಾಷೆ ,ಆಡೋಕೆ ಒಂದೆ ಭಾಷೆ , ಅದೆ ರೀತಿ ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು’…
ಹೀಗೆ ಹಲವಾರು ರೀತಿಯಲ್ಲಿ ನಮ್ಮ ಅಣ್ಣವ್ರು ಕನ್ನಡದ(Karnataka ratna appu) ಬಗ್ಗೆ ಮುತ್ತಿನಂತ ಮಾತುಗಳಿಂದ ನಮ್ಮ ಹೆಮ್ಮೆಯ ಕನ್ನಡವನ್ನು ಹಾಡಿ ಹೊಗಳಿದ್ದಾರೆ.

ಡಾ.ರಾಜ್‍ಕುಮಾರ್ 1992ರಂದು ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರತ್ನ ಪ್ರಶಸಿಯನ್ನು ಮುಡಿಗೀರಿಸಿಕೊಂಡಂತೆ 2022 ಇಂದು ಅಪ್ಪು ರವರಿಗೆ ಮರಣೋತ್ತರವಾಗಿ “ಕರ್ನಾಟಕ ರತ್ನ” ಪ್ರಶಸಿಯನ್ನು ನೀಡಿ ಗೌರವಿಸುತ್ತಾರೆ.
ಇದನ್ನೂ ಓದಿ : https://vijayatimes.com/world-amazing-waterfalls/
ಇದಕ್ಕೆ ಪ್ರಮುಖ ಕಾರಣ ಅವರ ಕನ್ನಡ ಸಿನಿಮಾ ಹಾಗು ಸಾಮಾಜಿಕ ಸೇವೆ ಪರಿಗಣಿಸಿ ನೀಡುತ್ತಿರುವ ಪ್ರಶಸ್ತಿ ಪುರಸ್ಕಾರ.
ಇಂತಹ ಮಹನ್ನೀಯರಂತೆ ಕನ್ನಡ ಭಾಷೆಯನ್ನು ಉಳಿಸಿ, ಬೆಳಿಸುವ ಪ್ರಯತ್ನ ನಮ್ಮೆಲ್ಲರಾದಾಗಬೇಕು.
- ಎಸ್.ಪಂಕಜಾ