Bengaluru : ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು(Karnataka Rajyotsava) ಪುನೀತ್ ಅಭಿಮಾನಿಗಳಂತು ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಅದರಲ್ಲೂ ಕನ್ನಡ ರಾಜ್ಯೋತ್ಸವ ದಿನವೇ ಅಪ್ಪು ಅವರಿಗೆ ಕರ್ನಾಟಕ ರತ್ನ( Karnataka Ratna Is Appu ) ಪ್ರಶಸ್ತಿ ಲಭಿಸುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.
ಕಳೆದ ವರ್ಷ ನಟ ಪುನೀತ್ ರಾಜಕುಮಾರ್(Puneeth Rajkumar) ಅವರು ನಿಧನ ಹೊಂದಿದ ಮೂರೇ ದಿನಗಳಿಗೆ ರಾಜ್ಯೋತ್ಸವ ಇದ್ದ ಕಾರಣ ವಿಜೃಂಭಣೆಯ ಆಚರಣೆ ನಡೆದಿರಲಿಲ್ಲ.
ಅಪ್ಪು ಅವರ ಅಗಲಿಕೆ ಕರ್ನಾಟಕದ ಜನತೆಗೇ ಬರ ಸಿಡಿಲಂತೆ ಬಡಿದಿತ್ತು. ಅಪ್ಪು ಅವರು ಇಲ್ಲ ಎಂಬ ನೋವಿನಲಿದ್ದ ಕರ್ನಾಟಕದ ಜನತೆ ಅಂದು ಕನ್ನಡ ರಾಜ್ಯೋತ್ಸವನ್ನು ಆಚರಿಸಲಿಲ್ಲ.
ಆದರೇ ಈ ಬಾರಿ ಅಪ್ಪು ಇಲ್ಲದ ಮೊದಲ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗಿದೆ. ಅಭಿಮಾನಿಗಳಲ್ಲಿ ನೋವಿದ್ದರು ಕೂಡ ನಾವು ಪುನೀತ್ ಅವರನ್ನು ಸಂಭ್ರಮಿಸಬೇಕು ಎಂಬ ನಿಟ್ಟಿನಲ್ಲಿ ವಿಜೃಂಭಣೆಯಿಂದ ಆಚರಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ದಿನದಂದೇ ಅಪ್ಪುವಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಕನ್ನಡ ರಾಜ್ಯೋತ್ಸವಕ್ಕೆ ಮೆರಗು ನೀಡಿತು.
ಇದನ್ನೂ ಓದಿ : https://vijayatimes.com/history-of-karnataka-flag/
ಇಂದು ಅಪ್ಪು ಅವರಿಗೆ ವಿಧಾನಸೌಧದ ಮುಂಭಾಗ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರದಾನ ಮಾಡಲಿದ್ದಾರೆ.
ಅಪ್ಪು ಅವರ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ಹೀಗೆ ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆಯಲಿರುವ ಅಪ್ಪು ಈ ಹಿಂದೆಯೂ ಹಲವಾರು ಸರ್ಕಾರಿ ಹಾಗೂ ಖಾಸಗಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅಪ್ಪು ಅವರು ಗೆದ್ದಿರುವ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ ನೋಡಿ : 1985ರಲ್ಲಿ ತೆರೆಕಂಡ ಬೆಟ್ಟದ ಹೂವು(Bettada Hoovu) ಚಿತ್ರದ ನಟನೆಗಾಗಿ ಅಪ್ಪುವಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ಬಾಲನಟ ಪಟ್ಟಿಯ ಅಡಿಯಲ್ಲಿ ರಾಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಹೀಗೆ ತನ್ನ ಹತ್ತನೇ ವಯಸ್ಸಿನಲ್ಲೇ ಅಪ್ಪು ದೇಶದ ಬೃಹತ್ ಪ್ರಶಸ್ತಿಯನ್ನು ಪಡೆದು ಸಾಧನೆ ಮಾಡಿದ್ದರು.
ಈಗ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನಕ್ಕೆ ಅಪ್ಪು ಭಾಜನರಾಗಿದ್ದಾರೆ.
ಹೀಗೆ ದೇಶ ಮತ್ತು ರಾಜ್ಯದ ಎರಡು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದಿರುವ ಅಪ್ಪು ಮೈಸೂರು ವಿಶ್ವವಿದ್ಯಾನಿಯಲದಿಂದ(Mysuru University) ಮರಣೋತ್ತರ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.
ಇನ್ನು ದಕ್ಷಿಣ ಭಾರತ ಚಿತ್ರಗಳಿಗೆ ನೀಡಲಾಗುವ ಪ್ರಮುಖ ಪ್ರಶಸ್ತಿಯಾದ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ ಅನ್ನು ಅತಿಹೆಚ್ಚು ಬಾರಿ ಗೆದ್ದ ನಟ ಎಂಬ ದಾಖಲೆಯನ್ನು ಅಪ್ಪು(Appu) ಹೊಂದಿದ್ದಾರೆ.
ಈ ಬಾರಿ ಯುವರತ್ನ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಸೈಮಾ ಅವಾರ್ಡ್ ಪಡೆದ ಅಪ್ಪು ಒಟ್ಟು ಐದು ಬಾರಿ ಸೈಮಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಫಿಲ್ಮ್ ಫೇರ್ ಪ್ರಶಸ್ತಿಯಲ್ಲೂ ಸಹ ಅಪ್ಪು ವಿಶಿಷ್ಟ ದಾಖಲೆ ಹೊಂದಿದ್ದಾರೆ.
ಅತಿ ಹೆಚ್ಚು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಈಗಿನ ತಲೆಮಾರಿನ ನಟ ಎಂಬ ಸಾಧನೆಯನ್ನು ಅಪ್ಪು ಹೊಂದಿದ್ದಾರೆ.
ಇನ್ನು ಈ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಕನ್ನಡದ ಪರ ಅತಿಹೆಚ್ಚು ಬಾರಿ ವರನಟ ರಾಜ್ಕುಮಾರ್ ಅವರು(8 ಬಾರಿ) ಗೆದ್ದಿದ್ದಾರೆ.
ಇನ್ನು( 6 ಬಾರಿ) ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗೆದ್ದಿರುವ ಅನಂತ್ ನಾಗ್ ಹಾಗೂ ಅಪ್ಪು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅಪ್ಪು ನಟಿಸಿರುವ ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಮಿಲನ ಹಾಗೂ ಜಾಕಿ ಈ ನಾಲ್ಕು ಚಿತ್ರಗಳ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
https://fb.watch/gwHRwM25LI/ ಕನ್ನಡದ ಬಗ್ಗೆ ನಿಮಗೆಷ್ಟು ಗೊತ್ತು ?
ಹೀಗೆ ಅಪ್ಪು ಈಗಿನ ಸ್ಟಾರ್ ನಟರ ಪೈಕಿ ಅತಿಹೆಚ್ಚು ಪ್ರಶಸ್ತಿ ಹಾಗೂ ದೇಶದ ಮತ್ತು ರಾಜ್ಯದ ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ನಟ ಎನಿಸಿಕೊಂಡಿರುವುದು ಅಭಿಮಾನಿಗಳ ಪಾಲಿಗೆ ಹೆಮ್ಮೆಯೇ ಸರಿ.
ಕರ್ನಾಟಕ ರತ್ನ ಪ್ರಶಸ್ತಿ ಪಡೆದಿರುವ ೯ ಗಣ್ಯರ ಅಪ್ಪು ಅವರು ಇಂದು ಪಡೆಯುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರ್ನಾಟಕ ರತ್ನ ಪಡೆಯುತ್ತಿರುವ ೧೦ನೇ ಗಣ್ಯ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
- ಕುಮಾರ್, ಬೆಂಗಳೂರು