ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧದ ಘರ್ಷಣೆಯಲ್ಲಿ ಕರ್ನಾಟಕ ರಾಜ್ಯದ ಯುವಕ ನವೀನ್ ಸಾವನ್ನಪ್ಪಿದರು. ವಿದ್ಯಾಭ್ಯಾಸಕ್ಕೆಂದು ಉಕ್ರೇನ್ಗೆ ತೆರೆಳಿದ್ದ ನವೀನ್ ರಷ್ಯಾ ನಡೆಸಿದ ದಾಳಿಯಲ್ಲಿ ಬಲಿಯಾಗಿದ್ದಾರೆ. ಮೃತ ನವೀನ್ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು. ಕರ್ನಾಟಕ ರಾಜ್ಯದ ಯುವಕ ನವೀನ್ ಯುದ್ಧ ಸಂಘರ್ಷಣೆಯಲ್ಲಿ ಮೃತರಾದರು. ಮೃತ ನವೀನ್ ಅವರ ಮುಖ ಹೋಲುವ ಕೆಲ ಫೋಟೊಗಳು ನಮಗೆ ಬಂದಿವೆ.

ಹೀಗಾಗಿ ಮೃತ ದೇಹವನ್ನು ಭಾರತಕ್ಕೆ ಕರೆತರಲು ಭಾರತದ ರಾಯಭಾರ ಕಛೇರಿಯೊಂದಿಗೆ ಚರ್ಚೆ ನಡೆಸಲಿದ್ದೇನೆ. ಸದ್ಯ ಆತುರ ಮಾಡುವಂತಿಲ್ಲ ಕಾರಣ ಈಗಲೂ ಕೂಡ ಅಲ್ಲಿ ಯುದ್ಧ ನಡೆಯುತ್ತಲೇ ಇದೆ. ಈ ಕಾರಣದಿಂದ ಸ್ವಲ್ಪ ಕಷ್ಟವಾಗುತ್ತಿದೆ ಎಂದು ಸಿಎಂ ಹೇಳಿದರು. ಸದ್ಯ ಈ ವಿಚಾರದಲ್ಲಿ ಕಾಂಗ್ರೆಸಿಗರು ರಾಜಕೀಯ ಮಾಡುತ್ತಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಲಕ್ಷಣವಲ್ಲ. ಯುದ್ಧ ಸಮಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾತನಾಡುತ್ತಿದೆ ಎಂದರೆ ಕಾಂಗ್ರೆಸ್ ಎಷ್ಟು ಕೆಳ ಮಟ್ಟದಲ್ಲಿದೆ ಎಂಬುದು ತಿಳಿಯುತ್ತದೆ.

ಈ ಹಿಂದೆ ನಡೆದ ಯುದ್ಧದಲ್ಲಿ ಒಬ್ಬರನ್ನು ವಾಪಾಸ್ ಕರೆತರಲಿಲ್ಲ. ಆದರೆ ಈಗ ರಾಜಕಾರಣ ಮಾತನಾಡುತ್ತಿದ್ದಾರೆ ಎಂದರೆ ಏನು ಹೇಳಬೇಕು ಇಂಥವರಿಗೆ ಎಂದು ಹೇಳಿದರು. ಮೃತ ನವೀನ್ ದೇಹವನ್ನು ಭಾರತಕ್ಕೆ ತರುವುದು ಅಷ್ಟು ಸುಲಭದ ಮಾತಲ್ಲ! ಯುದ್ಧ ವಾತಾವರಣದಲ್ಲಿ ಪಾರ್ಥಿವ ಶರೀರವನ್ನು ಅಲ್ಲಿಂದ ಇಲ್ಲಿಗೆ ಹಸ್ತಾಂತರಿಸುವುದು ಈ ಸಮಯದಲ್ಲಿ ಬಹಳ ಕಠಿಣ ಎಂದು ಮೇಜರ್ ರಘುರಾಮ್ ಸರ್ ನಮಗೆ ಹೇಳಿದ್ದಾರೆ ಎಂದು ಸಿಎಂ ಹೇಳಿದರು.