New Delhi: ಚುನಾವಣೆ ಸಮಯದಲ್ಲಿ ಮತದಾರರ ಮನವೊಲಿಸಲು ಎಲ್ಲ ಪಕ್ಷಗಳೂ ಇನ್ನಿಲ್ಲದ ಕಸರತ್ತು ನಡೆಸುತ್ತವೆ. ಸೀರೆ, ಉಡುಗೊರೆ, ನಗದು ಹೇಳಿ ನೂರೆಂಟು ಆಮಿಷ ಒಡ್ಡುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತವೆ. ಈ ಸಲದ ಲೋಕಸಭೆ ಚುನಾವಣೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 1,100 ಕೋಟಿ ರು, ಮೌಲ್ಯದ ನಗದು ಹಣ ಮತ್ತು ಚಿನ್ನ ವಶಪಡಿಸಿಕೊಂಡಿದ್ದಾರೆ. ಇದು 2019ರ ಚುನಾವಣೆಗಿಂತ 3 ಪಟ್ಟು ಅಂದರೆ ಸರಿ ಸುಮಾರು ಶೇ.182ರಷ್ಟು ಅಧಿಕವಾಗಿದೆ. ಇದಕ್ಕಿಂತ ದೊಡ್ಡ ಶಾಕಿಂಗ್ ನ್ಯೂಸ್ (Shocking News) ಎಂದರೆ ಅಕ್ರಮ ನಗದು, ಆಭರಣ ಪತ್ತೆಯಾಗಿರುವ ಪಟ್ಟಿಯಲ್ಲಿ ಕರ್ನಾಟಕ ಮತ್ತು ದೆಹಲಿ ಅಗ್ರ ಸ್ಥಾನದಲ್ಲಿದೆ.

ಈ ಸಲದ ಲೋಕಸಭೆ ಚುನಾವಣೆಯಲ್ಲಿ ಸುಮಾರು 1,150 ಕೋಟಿ ರು. ನಗದು ಹಾಗೂ ಚಿನ್ನವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಸುಮಾರು ಶೇ.182ರಷ್ಟು ಅಧಿಕವಾಗಿದ್ದು, ಕಳೆದ ಬಾರಿಗಿಂತ 390 ಕೋಟಿ.ರು ಹೆಚ್ಚು ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು, 150 ಕೋಟಿ ರೂ. ಆಂಧ್ರಪ್ರದೇಶ (Andrapradesh), ತೆಲಂಗಾಣ ಮತ್ತು ಒಡಿಶಾದಲ್ಲಿ ಒಟ್ಟಾರೆಯಾಗಿ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣೆ ಸಮಯದಲ್ಲಿ ಅಕ್ರಮವಾಗಿ ನಗದು ಸಾಗಣೆ ಮಾಡುವುದನ್ನು ಪರಿಶೀಲಿಸಲು ಪ್ರತಿ ರಾಜ್ಯವು 24×7 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುತ್ತದೆ.ಮಾದರಿ ನೀತಿ ಸಂಹಿತೆಯು ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ. 50,000ಕ್ಕಿಂತ ಹೆಚ್ಚು ನಗದು ಅಥವಾ 10,000 ಕ್ಕಿಂತ ಹೆಚ್ಚಿನ ಮೌಲ್ಯದ ಹೊಸ ವಸ್ತುಗಳನ್ನು ಪೂರಕ ದಾಖಲೆಗಳಿಲ್ಲದೆ ಸಾಗಿಸುವ ವ್ಯಕ್ತಿಗಳಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ವ್ಯಕ್ತಿಯು ಚುನಾವಣೆಗೆ ಸಂಬಂಧಿಸಿಲ್ಲದ ಮಾನ್ಯ ದಾಖಲೆಗಳನ್ನು ಒದಗಿಸಿದರೆ, ವಸ್ತುಗಳ್ನು ಹಿಂತಿರುಗಿಸಲಾಗುತ್ತದೆ. ಆದಾಗ್ಯೂ, ವಶಪಡಿಸಿಕೊಂಡ ನಗದು 10 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ, ಅದನ್ನು ಹೆಚ್ಚಿನ ಪರಿಶೀಲನೆಗಾಗಿ ಆದಾಯ ತೆರಿಗೆ ಇಲಾಖೆಗೆ ರವಾನಿಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.