ಪ್ರಶಾಂತ್ ಮಾಡಾಳ್ ಮನೆಯೇ ಹಣದ ಖಜಾನೆ ! ಮನೆ ತುಂಬಾ ಝಣ ಝಣ ಕಾಂಚಾಣ, ಲಂಚದ ವಾಸನೆ ! ಪ್ರಶಾಂತ್ (kas cheater officer madal) ಮಾಡಾಳ್ ಕೆಎಎಸ್ ಪಾಸ್ ಮಾಡಿದ್ದೇ ಮ್ಯಾಜಿಕ್ ! ಸುಳ್ಳು ಆದಾಯ ಪತ್ರ ತೋರಿಸಿ ಕೆಲಸ ಗಿಟ್ಟಿಸಿಕೊಂಡ್ನಾ?
ಅಬ್ಬಾಬ್ಬಾ ಎಲ್ಲಿ ನೋಡಿದ್ರೂ ರಾಶಿ ರಾಶಿ ಹಣ. ಮನೆಯನ್ನೂ ಝಣ ಝಣಾ ಕಾಂಚಾಣ. ಕಚೇರಿಯಲ್ಲೂ ಬರೀ ಧನಲಕ್ಷ್ಮಿಯದ್ದೇ ದರ್ಬಾರು. ಇವರ ಯಾವ ಕಚೇರಿ ನುಗ್ಲಿ, ಯಾವ ಮನೆಗೂ (kas cheater officer madal) ನುಗ್ಲಿ ಬರೀ ಲಂಚದ ಹಣದ ವಾಸನೆಯೇ ಮೂಗಿಗೆ ಬಡಿಯುತ್ತಿದೆ.
ಇದು ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ಕೆಎಸ್‌ಡಿಎಲ್ ಅಧ್ಯಕ್ಷ, ಬಿಜೆಪಿಯ ಚೆನ್ನಗಿರಿ ಶಾಸಕ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಮಾಡಾಳ್ ಮನೆ ಹಾಗೂ ಕಚೇರಿಗಳಲ್ಲಿ ಕಂಡು ಬಂದ ದೃಶ್ಯಗಳು.

ಕಳ್ಳರ ಕೂಪವಾಗಿದೆ ಕೆಎಸ್‌ಡಿಎಲ್: ಅಪ್ಪ ಬಂಟೀ – ಮಗ ಬಬ್ಲಿ : ಭ್ರಷ್ಟಾಚಾರದ ಕೂಪ ಅಂತಲೇ ಹಿಂದಿನಿಂದ ಕುಖ್ಯಾತಿ ಪಡೆದಿರುವ ಕೆಎಸ್‌ಡಿಎಲ್‌ನಲ್ಲಿ ವಿರೂಪಾಕ್ಷಪ್ಪ ಅವರು ಅಧ್ಯಕ್ಷರಾದ ಬಳಿಕವಂತು ಲಂಚಾವತಾರಕ್ಕೆ ಮಿತಿಯೇ ಇರಲಿಲ್ಲ.
ಅಪ್ಪ ಮಗನನ್ನು ಕೆಎಸ್‌ಡಿಎಲ್‌ನ ಬಂಟಿ ಬಬ್ಲಿ ಅಂತನೇ ಕರೀತಿದ್ರು. ಯಾರ ಭಯವೂ ಇಲ್ಲದೆ ರಾಜಾರೋಷವಾಗಿ ಕಮಿಷನ್ ದಂಧೆ ನಡೆಸುತ್ತಿದ್ದರು. (kas cheater officer madal) ಕಳ್ಳಾಟದಲ್ಲಿ ಕೋಟಿ ಕೋಟಿ ಸಂಪಾದಿಸುತ್ತಿದ್ದರು.
ಪ್ರಶಾಂತ್‌ನ ಕೆಎಎಸ್ ಪಾಸ್ ಕತೆ ಕೇಳಿ: ಕೆಎಎಸ್ ಪಾಸ್ ಮಾಡಿದ್ದೂ ಕಳ್ಳಾಟದಲ್ಲೇ? ಯಸ್, ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಕೆಎಎಸ್ ಅಧಿಕಾರಿ.
ಪ್ರಸ್ತುತ ಬೆಂಗಳೂರು ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ. ಆದ್ರೆ ಈತ 2008ರಲ್ಲಿ ಕೆಎಎಸ್ ಪಾಸ್ ಮಾಡಿದ್ದೇ ಈಗ ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.
ಇದನ್ನು ಓದಿ: ಈ ವರ್ಷ ಕರುನಾಡನ್ನು ಕಾಡಲಿದೆ ಅತೀ ಹೆಚ್ಚು ತಾಪಮಾನ ! ಅಪಾಯ ಎದುರಿಸಲು ರೆಡಿಯಾಗಿ
2008ರಲ್ಲಿ ತಂದೆಯ ಆದಾಯ ಕೇವಲ 1.2 ಲಕ್ಷ ರೂ ತೋರಿಸಿ 3ಬಿ ಮೀಸಲಾತಿ ಗಿಟ್ಟಿಸಿಕೊಂಡು ಪ್ರಶಾಂತ್ ಮಾಡಾಳ್ ಕೆಎಎಸ್‌ನಲ್ಲಿ ತೇರ್ಗಡೆ ಆಗಿದ್ದ. 2008ರಲ್ಲಿ ವಿರೂಪಾಕ್ಷಪ್ಪ ಪ್ರಪ್ರಥಮ ಬಾರಿಗೆ ಚೆನ್ನಗಿರಿ ಶಾಸಕರಾಗಿ ಆಯ್ಕೆಯಾಗಿದ್ರು.
ಶಾಸಕರ ವರ್ಷದ ಆದಾಯ ಕೇವಲ 1.2 ಲಕ್ಷ ಇರಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. ಇದೇ ವಿರೂಪಾಕ್ಷಪ್ಪ 2018 ವೇಳೆಯಲ್ಲಿ ತಾನು 5.08 ಕೋಟಿಯ ಒಡೆಯ ಎಂದು ಚುನಾವಣಾ ಆಯೋಗದಲ್ಲಿ ಘೋಷಿಸಿಕೊಂಡಿದ್ರು. ಎಲ್ಲಾ ಮ್ಯಾಜಿಕ್ ಬಿಡಿ

ಪ್ರಶಾಂತ್ ಕಚೇರಿ : ಲಂಚ ಕಲೆಕ್ಷನ್ ಸೆಂಟರ್: ಮಾಡಾಳ್ ವಿರೂಪಾಕ್ಷಪ್ಪಗೆ ಮೂವರು ಗಂಡು ಮಕ್ಕಳಿದ್ದು, ಈ ಪೈಕಿ ಪ್ರಶಾಂತ್ ಎರಡನೇ ಪುತ್ರ. ಈ ಪ್ರಶಾಂತ್ ಕಚೇರಿ ಲಂಚ ಕಲೆಕ್ಷನ್‌ನ ಸೆಂಟರ್ ಆಗಿತ್ತು.
ವಿರೂಪಾಕ್ಷಪ್ಪ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇನ್ನೂ ಮೂರು ಕಂಪನಿಗಳು ಈ ಟೆಂಡರ್ ಪಡೆಯಲು 40 ಲಕ್ಷ ಹಣ ತೆಗೆದುಕೊಂಡು ಬಂದಿರುವುದು ಪತ್ತೆಯಾಗಿತ್ತು.
ಹಣವನ್ನು ಪ್ರಶಾಂತನ ಖಾಸಗಿ ಕಚೇರಿಗೆ ತಂದು ಕೊಡುವಂತೆ ಸೂಚನೆ ನೀಡಲಾಗಿತ್ತು. ಹಾಗಾಗಿ ಎಲ್ಲರೂ ಹಣ ನೀಡಲು ಖಾಸಗಿ ಕಚೇರಿಯಾದ ಎಂ ಸ್ಟುಡಿಯೋಗೆ ಲಕ್ಷ ಲಕ್ಷ ಹಣ ತಂದಿದ್ದರು.
ಇದು ಸ್ಯಾಂಪಲ್ ಅಷ್ಟೇ. ಇಂಥಾ ಅದೆಷ್ಟು ಟೆಂಡರ್‌ಗಳು, ಭ್ರಷ್ಟ ವ್ಯವಹಾರಗಳು ನಡೆದಿವೆಯೋ? ಇವೆಲ್ಲಾ ಲೋಕಾಯುಕ್ತರ ಪ್ರಾಮಾಣಿಕ ತನಿಖೆಯಿಂದ ಬಯಲಾಗಬೇಕಷ್ಟೇ.
ಬ್ಯೂರೋ ರಿಪೋಟ್ ವಿಜಯಟೈಮ್ಸ್