Tamilnadu : ರಾಜಕಾರಣಿ, ನಟ ಪ್ರಕಾಶ್ ರಾಜ್(Prakash Raj) ಅವರು ಬಾಲಿವುಡ್(Bollywood) ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ ಫೈಲ್ಸ್(The Kashmir Files) ಚಿತ್ರವನ್ನು ನಾನ್‌ಸೆನ್ಸ್ ಚಿತ್ರಗಳಲ್ಲಿ ಒಂದಾಗಿದೆ (Kashmir Files movie nonsense) ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಟ ಪ್ರಕಾಶ್ ರಾಜ್ ಅವರು ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಕಟುವಾಗಿ ಟೀಕಿಸಿದ್ದು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ನೇರವಾಗಿ ಗುರಿಯಾಗಿಸಿದ್ದಾರೆ!
ಇತ್ತೀಚೆಗೆ ನಡೆದ ಒಂದು ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ನಟ ಪ್ರಕಾಶ್ ರಾಜ್ ಅವರು, ವೇದಿಕೆಗೆ ಬಂದು ತಮ್ಮ ಮಾತನ್ನು ಪ್ರಾರಂಭಿಸಿದ ವೇಳೆ

ʻದಿ ಕಾಶ್ಮೀರ ಫೈಲ್ಸ್ʼ ಇದು ಅಸಂಬದ್ಧ ಚಿತ್ರಗಳಲ್ಲಿ ಒಂದಾಗಿದೆ ಎಂದು ವ್ಯಂಗ್ಯವಾಗಿ ಮಾತನಾಡಿದರು. ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ(Vivek Agnihotri), ನಿರ್ಮಾಪಕರು ನಾಚಿಕೆಯಿಲ್ಲದವರು.
ದಿ ಕಾಶ್ಮೀರ್ ಫೈಲ್ಸ್ ಕೇವಲ ಒಂದು ಪ್ರಚಾರಕ್ಕೆ ಸೀಮಿತವಾದ ಚಿತ್ರ! ಅಂತಾರಾಷ್ಟ್ರೀಯ ತೀರ್ಪುಗಾರರು ಇದನ್ನು ತಿರಸ್ಕರಿಸಿದರು (Kashmir Files movie nonsense) ಕೂಡ ಇನ್ನೂ ನಾಚಿಕೆಯಿಲ್ಲದವರಾಗಿದ್ದಾರೆ.
ಅವರಿಗೆ ಆಸ್ಕರ್ ಸಿಗುತ್ತಿಲ್ಲವೇ? ಅವರಿಗೆ ಆಸ್ಕರ್(Oscar) ಇರಲಿ, ಭಾಸ್ಕರ್ ಕೂಡ ಸಿಗುವುದಿಲ್ಲ ಎಂದು ದಿ ಕಾಶ್ಮೀರ ಫೈಲ್ಸ್ ಮತ್ತು ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಪ್ರಕಾಶ್ ರಾಜ್ ಟೀಕಿಸಿ ಮಾತನಾಡಿದ್ದಾರೆ.

ವಿವೇಕ್ ಅಗ್ನಿಹೋತ್ರಿಯವರು ನಿರ್ದೇಶಿಸಿದ ದಿ ಕಾಶ್ಮೀರ್ ಫೈಲ್ಸ್ ಚಿತ್ರ, 2022ರ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿದೆ.
ವಿವೇಕ್ ಅಗ್ನಿಹೋತ್ರಿ ಅವರು ಬರೆದು, ನಿರ್ದೇಶಿಸಿದ ಈ ಚಿತ್ರವನ್ನು ಝೀ ಸ್ಟುಡಿಯೋಸ್(Zee Studios) ನಿರ್ಮಿಸಿತು.
ಈ ಚಲನಚಿತ್ರವು 1990ರ ದಶಕದಲ್ಲಿ ಕಾಶ್ಮೀರಿ ಹಿಂದೂಗಳು ಕಾಶ್ಮೀರದಿಂದ ವಲಸೆ ಹೋಗುವುದನ್ನು ಚಿತ್ರಿಸುತ್ತದೆ.
ಈ ಚಿತ್ರದಲ್ಲಿ ಬಾಲಿವುಡ್ ಚಿತ್ರರಂಗದ ಹಿರಿಯ ನಟ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಮುಂತಾದವರು ನಟಿಸಿದ್ದಾರೆ.
ಇದನ್ನು ಪಲ್ಲವಿ ಜೋಶಿ, ಅಭಿಷೇಕ್ ಅಗರ್ವಾಲ್ ಜೀ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣ ಮಾಡಿದರು.
ದಿ ಕಾಶ್ಮೀರ ಫೈಲ್ಸ್ ಚಿತ್ರ ಬಿಡುಗಡೆಗೂ ಮುನ್ನ ಮತ್ತು ಬಿಡುಗಡೆಯ ನಂತರವೂ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಈ ಚಿತ್ರಕ್ಕೆ ರಾಜಕೀಯ ವಲಯದಿಂದ ಕೂಡ ಭಾರಿ ಒತ್ತಡಗಳು, ವಿವಾದಾತ್ಮಕ ಹೇಳಿಕೆಗಳು ಕೇಳಿಬಂದಿದ್ದವು!