ಬೆಂಗಳೂರು : ಹೆಬ್ಬಾಳ ವಿಧಾನಸಭಾ ಕ್ಷೇತ್ರದ(Hebbala Vidhansabha Constituency) ಕಾಂಗ್ರೆಸ್ ಶಾಸಕ(Congress MLA) ಭೈರತಿ ಸುರೇಶ್(Bairathi Suresh) ವಿರುದ್ದ ೩೦% ಕಮಿಷನ್(Commission) ಆರೋಪ ಕೇಳಿ ಬಂದಿದೆ. ಶಾಸಕ ಭೈರತಿ ಸುರೇಶ್ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳ ಮೇಲೆ ಶೇ. ೩೦ ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು(Katta Subramanya Naidu) ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಕಟ್ಟಾ ಸುಬ್ರಹ್ಮಣ್ಯ ಅವರು ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ಗೆ ಶೇ.೩೦ರಷ್ಟು ಕಮಿಷನ್ ಹಣ ನೀಡಿದರೆ ಮಾತ್ರ ಕಾಮಗಾರಿ ಪೂಜೆಗೆ ಬರುತ್ತಾರೆ. ಹೀಗಾಗಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ(Corruption) ಇಲ್ಲದೇ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಇನ್ನು ಸುಮಾರು 650 ಕೋಟಿ ರೂ.ಗಳ ಕಾಮಗಾರಿಯಲ್ಲಿ ಕೇವಲ ಶೇ. 40ರಷ್ಟು ಕೆಲಸ ಆಗಿದೆ. ಉಳಿದ ಕೆಲಸಗಳು ಕಮಿಷನ್ ಕಾರಣದಿಂದ ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು.
ಇನ್ನು ಕೊಳಗೇರಿ ಅಭಿವೃದ್ಧಿ ಮಂಡಳಿ ಹಕ್ಕುಪತ್ರಗಳಲ್ಲಿ ನಕಲಿ ಸಹಿ ಹಾಕುವ ದಂಧೆ ನಡೆಯುತ್ತಿದೆ. ನಾನು ಶಾಸಕನಾಗಿದ್ದಾಗ ನೀಡಿರುವ ಹಕ್ಕು ಪತ್ರಗಳಲ್ಲಿ, ಈಗ ಬೈರತಿ ಸುರೇಶ್ ತನ್ನ ಪೋಟೋ ಪೋರ್ಜರಿ ಮಾಡಿದ್ದಾರೆ. ಹೀಗಾಗಿ ಭೈರತಿ ಸುರೇಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಎಸಿಬಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪತ್ರಿಕಾಗೋಷ್ಟಿಗೆ ಪ್ರತಿಯಾಗಿ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಕೆಲ ಪ್ರಶ್ನೆಗಳನ್ನು ಕೇಳಿ ಪ್ರಕಟಣೆ ಹೊರಡಿಸಿದ್ದಾರೆ.

• ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬಾಳ ಕುಂತಿ, ಗ್ರಾಮ ಗುಡ್ಡದಹಳ್ಳಿ ಸರ್ವೆ ನಂ:1 ರಲ್ಲಿ 03 ಎಕರೆ 45 ಗುಂಟೆ ಸರ್ಕಾರಿ ಜಾಗದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ನೀವು ಅಕ್ರಮವಾಗಿ ಟಿ.ಡಿ.ಆರ್ ಪಡೆದು 200 ಕೋಟಿ ಹಗರಣ ನಡೆದಿರುವುದು ಸರ್ಕಾರಿ ಮಟ್ಟದಲ್ಲಿ ಹಾಗೂ ಕೋರ್ಟ್ ತನಿಖೆಯು ಯಾವ ಹಂತದಲ್ಲಿದೆ ?
• ನಾಯ್ಡು ರವರೇ ನಿಮ್ಮ ಮೇಲೆ ಇರುವ ಹೈಕೋರ್ಟ್ ಪಿಟೀಶನ್ ನಂ: 432/2013 ಹಾಗೂ ಕೈಂ ನಂ:57/2010 ರ ಕೇಸ್ ತನಿಖೆ ಯಾವ ಮಟ್ಟದಲ್ಲಿದೆ ?
• ಕೆ.ಐ.ಎ.ಡಿ.ಬಿ ಲ್ಯಾಂಡ್ ಕೇಸ್ ಯಾವ ಹಂತದಲ್ಲಿದೆ ?
• ಇಂಡ್ ಸಿಂಡ್ ಡೆವಲಪರ್ಸ್ ರವರರಿಗೆ ತಾವುಗಳು 3ಕೋಟಿ ವಂಚನೆ ಮಾಡಿರುವ ಕ್ರಿಮಿನಲ್ ಮೊಕದ್ದಮೆ ಯಾವ ಹಂತದಲ್ಲಿದೆ ?
• ಪಿಟಿಶನ್ ನಂ: 5698/2019 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ರವರು ಹಾಗೂ ಆರ್ ಸುಭಾಶ್ ರವರು ನೀಡಿರುವ ತೀರ್ಪು ಎನು ಬಂದಿದೆ ತಿಳಿಸುವಿರಾ ?
• ಇ.ಡಿ ಕೇಸ್ 27 ಕೋಟಿ ಹಗರಣದಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಕುಟುಂಬದ ಪಾತ್ರವೇನು?