Bangalore: ಬೆಂಗಳೂರಿನಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (Rajiv Gandhi University of Health Sciences), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (North West Karnataka Road Transport Corporation), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (Kalyan Karnataka Road Transport Corporation), ತಾಂತ್ರಿಕ ಶಿಕ್ಷಣ ಇಲಾಖೆ (Department of Technical Education), ಕೃಷಿ ಮಾರಾಟ ಇಲಾಖೆ (Agricultural Sales Department) ಸೇರಿದಂತೆ ಐದು ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ (Recruitment of posts) ಸಂಕ್ಷಿಪ್ತ ಅಧಿಸೂಚನೆಯನ್ನು ಕೆಇಎ (KEA) ಹೊರಡಿಸಿದೆ. ಈ ಕುರಿತ ವಿವರ ಇಲ್ಲಿದೆ.

ಉದ್ಯೋಗ ಇಲಾಖೆ ಹುದ್ದೆಗಳ ಹೆಸರು ಒಟ್ಟು ಹುದ್ದೆಗಳ ಸಂಖ್ಯೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bangalore Development Authority):
ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕ – ಹುದ್ದೆಗಳು 25
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (Rajiv Gandhi University of Health Sciences):
ಸಹಾಯಕ ಗ್ರಂಥಪಾಲಕ, ಜೂನಿಯರ್ ಪ್ರೋಗ್ರಾಮರ್, ಸಹಾಯಕ ಇಂಜಿನಿಯರ್, ಸಹಾಯಕ, ಕಿರಿಯ ಸಹಾಯಕ – ಹುದ್ದೆಗಳು 44
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (North West Karnataka Road Transport Corporation):
ಸಹಾಯಕ ಆಡಳಿತಾಧಿಕಾರಿ, ಲೆಕ್ಕಾಧಿಕಾರಿ, ಕಲ್ಯಾಣಾಧಿಕಾರಿ, ಕಾನೂ ಅಧಿಕಾರಿ, ಇತರೆ ವೃಂದದ ಹುದ್ದೆ -750
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (Karnataka Soaps and Detergents Ltd) :
ಅಧಿಕಾರಿ, ಕಿರಿಯ ಅಧಿಕಾರಿ, ಮಾರಾಟ ಪ್ರತಿನಿಧಿ, ಕಿರಿಯ ಮಾರಾಟ ಪ್ರತಿನಿಧಿ 38
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (Kalyan Karnataka Road Transport Corporation): ಸಹಾಯಕ ಲೆಕ್ಕಿಗ, ನಿರ್ವಾಹಕ 1752
ಕರ್ನಾಟಕ ರಾಜ್ಯ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ (CSUE) 388 ಸೆನೆನಿ 2024 ದಿನಾಂಕ 25.11.2024 ಪ್ರಕಾರ ಹೊಸ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿರುವುದಿಲ್ಲ ಎಂದು ಕೆಇಎ (KEA) ಹೇಳಿದೆ. ಆದರೆ ಈ ಕೆಳಗಿನ ಸೂಚನೆಗಳನ್ನು ಅಭ್ಯರ್ಥಿಗಳಿಗೆ ನೀಡಿದೆ.
ಕೆಇಎ ಅಭ್ಯರ್ಥಿಗಳಿಗೆ ನೀಡಿದ ಸೂಚನೆಗಳು (Instructions given to KEA candidates):
ಹುದ್ದೆಗಳಿಗೆ ನಿಗದಿಯಾಗಿರುವ ಪಠ್ಯಕ್ರಮದಂತೆ ಅಧ್ಯಯನ ಮಾಡಬೇಕು.
ಸರ್ಕಾರದಿಂದ ನೇಮಕಾತಿ ಅಧಿಸೂಚನೆ ಹೊರಡಿಸಲು ಅನುಮತಿಸಿದ ತಕ್ಷಣ ಶೀಘ್ರವಾಗಿ ಪರೀಕ್ಷೆಗಳನ್ನು ಸಹ ನಡೆಸಲಾಗುವುದು.